More

    ಸೈಬರ್ ಕುಣಿಕೆಗೆ ಸಿಲುತ್ತಿದೆ ಯುವಜನ

    ಮೈಸೂರು: ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ. ಮಕ್ಕಳು ಮತ್ತು ಯುವಜನತೆ ಹೆಚ್ಚು ಮೊಬೈಲ್ ಪ್ರಭಾವಕ್ಕೆ ಒಳಗಾಗಿದ್ದು, ತಮಗೇ ತಿಳಿಯದೆ ಸೈಬರ್ ಅಪರಾಧದ ಕುಣಿಕೆಯೊಳಗೆ ಸಿಲುಕುತ್ತಿದ್ದಾರೆ ಎಂದು ಸಿಇಎನ್ ಉಪ ಪೋಲೀಸ್ ವರಿಷ್ಠಾಧಿಕಾರಿ ಎನ್.ರಘು ತಿಳಿಸಿದರು.


    ಹುಣಸೂರು ತಾಲೂಕಿನ ಬಿಳಿಗೆರೆ ಗ್ರಾಮದ ಅನ್ವೇಷಣಾ ಶಿಕ್ಷಣ ಸಂಸ್ಥೆಯಲ್ಲಿ ಸೈಬರ್ ಅಪರಾಧಗಳನ್ನು ತಡೆಗಟ್ಟುವ ಕುರಿತು ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.


    ಮೊಬೈಲ್ ಹೆಚ್ಚು ಬಳಸುವುದೆಂದರೆ ನಿಮ್ಮ ಮಾಹಿತಿಗಳನ್ನು ನೀವೇ ನೀಡಿ, ನೀವೇ ಚಾಕು ಕೊಟ್ಟು ಕೊಲೆ ಮಾಡಿಸಿಕೊಂಡಂತಾಗಲಿದೆ. ಮೊಬೈಲ್‌ನಲ್ಲಿ ಹೆಚ್ಚು ಆ್ಯಪ್ ಬಳಸಿದಷ್ಟು ಹೆಚ್ಚು ಅಪಾಯಕಾರಿ. ಆನ್‌ಲೈನ್ ಗೇಮ್‌ಗಳು ನಿಮ್ಮ ಖಾತೆಯಲ್ಲಿರುವ ಹಣಕ್ಕೆ ಕುತ್ತು ತರುತ್ತವೆ. ಹೀಗಾಗಿ ಮೊಬೈಲ್ ಬಳಕೆಯ ಬಗ್ಗೆ ಎಚ್ಚರಿಕೆ ಇರಬೇಕು ಎಂದರು.


    ಸಿಇಎನ್ ತನಿಖಾಧಿಕಾರಿ ಸಿ.ಎನ್.ಮಹೇಶ್ ಮಾತನಾಡಿ, ಭಾರತದಲ್ಲಿ ನಿತ್ಯ ಏಳು ಲಕ್ಷ ಸೈಬರ್ ಅಪರಾಧಗಳು ದಾಖಲಾಗುತ್ತಿವೆ. ಹೀಗಾಗಿ ಮೊಬೈಲ್‌ಬಳಕೆಯ ಬಗ್ಗೆ ಬಹಳ ಜಾಗೃತರಾಗಿರಬೇಕು. ಮೊಬೈಲ್ ಮೂಲಕ ನಿಮ್ಮ ಮಾಹಿತಿಯನ್ನು ನೀಡುವಾಗ ಬಹಳ ಎಚ್ಚರಿಕೆ ವಹಿಸಬೇಕು. ಯಾವುದೇ ಸೈಬರ್ ಅಪರಾಧಗಳು ಸಂಭವಿಸಿದ್ದಲ್ಲಿ ತಕ್ಷಣವೇ 1930 ಗೆ ಕರೆ ಮಾಡಿ ದೂರು ದಾಖಲು ಮಾಡಿ ಎಂದರು.


    ಅನ್ವೇಷಣಾ ಸಂಸ್ಥೆಯ ಅಧ್ಯಕ್ಷ ಪ್ರಾಂಶುಪಾಲ ಎಚ್.ಎನ್.ಗಿರೀಶ್, ಕಾರ್ಯದರ್ಶಿ ಎಚ್.ಸಿ.ಪ್ರಶಾಂತ್, ಉಪಪ್ರಾಂಶುಪಾಲೆ ಆಶಾನಂದೀಶ್, ಆರಕ್ಷಕ ಸುನಿಲ್ ಬಿರಾದಾರ್, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts