More

    ಇವರಿಗೋಸ್ಕರ ಆದ್ರೂ ನೀವು ಟಿ20 ವಿಶ್ವಕಪ್​ ಗೆಲ್ಲಬೇಕು! ರೋಹಿತ್ ಪಡೆಗೆ ನವಜೋತ್ ಸಿಂಗ್​ ಸಿಧು ಮನವಿ

    ಗುಯಾನ: ನಿನ್ನೆ (ಜೂ.28) ಇಲ್ಲಿನ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್​ ನಡುವಿನ ಸೆಮಿಫೈನಲ್​ ಪಂದ್ಯದಲ್ಲಿ 68 ರನ್​ಗಳ ಅಂತರದಲ್ಲಿ ಭರ್ಜರಿ ಇಂಗ್ಲೆಂಡ್​ ವಿರುದ್ಧ ರೋಹಿತ್ ಪಡೆ ಗೆದ್ದು ಬೀಗಿತು. ಸತತ ಗೆಲುವುಗಳ ಮೂಲಕ ಇದೀಗ ಫೈನಲ್​ಗೆ ಪ್ರವೇಶಿಸಿರುವ ಭಾರತ, ಅಂತಿಮ ಹಣಾಹಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

    ಇದನ್ನೂ ಓದಿ: ಹಾವೇರಿ ಭೀಕರ ಅಪಘಾತ; ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ ಸಿಎಂ, ಸಂತಾಪ ಸೂಚಿಸಿದ ಗಣ್ಯರು

    ಟಿ20 ವಿಶ್ವಕಪ್​ ಸೆಮಿಫೈನಲ್​ ಪಂದ್ಯದಲ್ಲಿ ಟಾಸ್​ ಗೆದ್ದ ಇಂಗ್ಲೆಂಡ್​ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡು, ಭಾರತಕ್ಕೆ ಬ್ಯಾಟ್ ಮಾಡುವಂತೆ ಹೇಳಿತು. ಅದರಂತೆಯೇ ಬ್ಯಾಟ್ ಮಾಡಿದ ಟೀಮ್ ಇಂಡಿಯಾಗೆ ನಾಯಕ ರೋಹಿತ್ ಶರ್ಮ ಅವರ ಆಕರ್ಷಕ ಅರ್ಧಶತಕ (57) ಮತ್ತು ಸೂರ್ಯಕುಮಾರ್ ಯಾದವ್ (47) ರನ್​​ಗಳ ಕೊಡುಗೆ ತಂಡದ ಗೆಲುವಿಗೆ ಪ್ರಮುಖ ಕಾರಣವಾಯಿತು. ಅತೀ ಮುಖ್ಯವಾಗಿ ಇಂಗ್ಲೆಂಡ್​ ಬ್ಯಾಟ್ಸ್​ಮನ್​ಗಳನ್ನು ಕಾಡಿದ ಟೀಮ್ ಇಂಡಿಯಾ ಸ್ಪಿನ್ನರ್‌ಗಳಾದ ಅಕ್ಷರ್​ ಪಟೇಲ್​ ಮತ್ತು ಕುಲದೀಪ್​ ಯಾದವ್,​ ತಲಾ 3 ವಿಕೆಟ್​ ಪಡೆದು ಗೆಲುವನ್ನು ಸಂಭ್ರಮಿಸಿದರು.

    ಇನ್ನು ಭಾರತ ಸೆಮಿಫೈನಲ್ ಪಂದ್ಯವನ್ನು ಗೆಲ್ಲುತ್ತಿದ್ದಂತೆ ಭಾವುಕರಾದ ಕ್ಯಾಪ್ಟನ್ ರೋಹಿತ್ ಶರ್ಮ, ಕ್ಯಾಮರಾ ಮುಂದೆಯೇ ಕಣ್ಣೀರಿಟ್ಟರು. ಇದನ್ನು ನೋಡಿದ ವಿರಾಟ್ ಕೊಹ್ಲಿ, ರೋಹಿತ್​ ಬೆನ್ನುತಟ್ಟಿ, ಅಪ್ಪಿಕೊಂಡರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಯಿತು. ಸದ್ಯ ಟೀಮ್ ಇಂಡಿಯಾದ ಗೆಲುವನ್ನು ಸಂಭ್ರಮಿಸುತ್ತಿರುವ ಕ್ರಿಕೆಟ್ ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟಿಗರ ಪೈಕಿ, ಭಾರತದ ಮಾಜಿ ಆಟಗಾರ ನವಜೋತ್ ಸಿಂಗು ಸಿಧು ತಂಡಕ್ಕೆ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ.

    ಇದನ್ನೂ ಓದಿ: ಸಿಎಂ ಬದಲಾವಣೆ ಮಾಡುವುದಾದರೆ ಲಿಂಗಾಯತರಿಗೆ ಆದ್ಯತೆ ನೀಡಿ: ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

    “ಇಂಗ್ಲೆಂಡ್​ ವಿರುದ್ಧ ಸೆಮಿಫೈನಲ್ ಪಂದ್ಯ ಗೆದ್ದು ಈಗ ಫೈನಲ್ ಪ್ರವೇಶಿಸಿರುವ ಟೀಮ್ ಇಂಡಿಯಾಗೆ ನನ್ನ ಅಭಿನಂದನೆಗಳು. ಫೈನಲ್ ಮ್ಯಾಚ್​ನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ ವಿಶ್ವಕಪ್ ಟ್ರೋಫಿ ಗೆದ್ದು ಬನ್ನಿ. ಅದರಲ್ಲೂ ಅಂತಿಮ ಹಣಾಹಣಿಯಲ್ಲಿ ನಿಮ್ಮ ಹೆಡ್​ ಕೋಚ್ ರಾಹುಲ್ ದ್ರಾವಿಡ್‌ ಅವರಿಗೋಸ್ಕರ ಆದರೂ ನೀವು ವಿಶ್ವಕಪ್‌ ಫೈನಲ್‌ನಲ್ಲಿ ಗೆಲ್ಲಬೇಕು. ಇದನ್ನು ಮಾಡಿದ್ರೆ, ಕೋಚ್ ಸ್ಥಾನದಿಂದ ನಿವೃತ್ತಿ ಹೊಂದುವ ರಾಹುಲ್​ಗೆ ಅತ್ಯುತ್ತಮ ಗೌರವ ಸಲ್ಲಿಸಿದಂತಾಗುತ್ತದೆ” ಎಂದು ನವಜೋತ್ ಸಿಂಗ್ ಸಿಧು ಹೇಳಿದ್ದಾರೆ,(ಏಜೆನ್ಸೀಸ್).

    6 ತಿಂಗಳಿಂದ ಪ್ರೇಕ್ಷಕರ ಕಾಣದ ಚಿತ್ರಮಂದಿರ ಈಗ ಹೌಸ್​ಫುಲ್! ಇದು ಪ್ರಭಾಸ್​ ‘ಕಲ್ಕಿ’ ಪ್ರಭಾವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts