More

    ವಿಶ್ವವಲ್ಲಭ ತೀರ್ಥ ಶ್ರೀ ಪಾದರ ಪ್ರವಚನ, ಯಶಸ್ವಿ ಕಲಾವೃಂದದ ಯಕ್ಷಗಾನ ವೈಭವ

    ವಿಜಯವಾಣಿ ಸುದ್ದಿಜಾಲ ಕೋಟ

    ಯಾತ್ರಾ ಸ್ಥಳಗಳು ಒಂದಕ್ಕೊಂದು ವಿಭಿನ್ನವಾಗಿದೆ. ತೀರ್ಥಕ್ಷೇತ್ರ ಯಾತ್ರೆಯಿಂದ ಪುರಾಣ ಕಥೆಗಳ ಮೌಲ್ಯ ಅರಿಯಲು ಸಾಧ್ಯ. ಪ್ರಸ್ತುತ ಕಾಲಘಟ್ಟಕ್ಕೆ ಪೂರಕವಾಗಿ ಪುರಾಣ ಕಥೆಗಳು ಹೆಣೆದಿರುತ್ತದೆ. ಈಗಿನ ವಿದ್ಯಮಾನಗಳಿಗೂ ಪುರಾಣಗಳಿಗೂ ಹೆಚ್ಚು ಸಂಬಂಧವಿರುವ ಹಲವು ಕಥೆಗಳು ತೀರ್ಥಕ್ಷೇತ್ರದ ಕಥೆಗಳಿಂದ ಲಭ್ಯವಾಗುತ್ತದೆ ಎಂದು ಶ್ರೀ ವಿಶ್ವವಲ್ಲಭ ತೀರ್ಥ ಶ್ರೀ ಪಾದರು ಹೇಳಿದರು.

    ಯಶಸ್ವಿ ಕಲಾವೃಂದ ಕೊಮೆ, ತೆಕ್ಕಟ್ಟೆ ಸಂಯೋಜನೆಯಲ್ಲಿ ಸಿನ್ಸ್ 1999 ಶ್ವೇತಯಾನದ 28ನೇ ಕಾರ್ಯಕ್ರಮವಾಗಿ ಗುರುವಾರ ಕುಂದಾಪುರ ಹಂಗಳೂರು ಶ್ರೀ ರಾಮಚಂದ್ರ ವರ್ಣರ ಮನೆಯಲ್ಲಿ ವಿಶ್ವವಲ್ಲಭ ತೀರ್ಥ ಶ್ರೀ ಪಾದರ ಪ್ರವಚನ ಹಾಗೂ ಯಶಸ್ವಿ ಕಲಾವೃಂದದ ಯಕ್ಷಗಾನ ವೈಭವದಲ್ಲಿ ಮಾತನಾಡಿದರು.
    ಯಾತ್ರಾ ದಿನದ ಅನುಭವದ ಸವಿಸ್ತಾರವಿರುವ ಧಾರ್ಮಿಕ ಪ್ರವಚನ ಕಾರ್ಯಕ್ರಮಕ್ಕೂ ಪುರಾಣ ಕಥನದ ಭಕ್ತಿ ಭಾವಗಳನ್ನೊಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮವೂ ಹೆಚ್ಚು ಸಾಮ್ಯತೆ ಇದೆ ಎಂದರು.

    ಉದ್ಯಮಿ ರಾಮಚಂದ್ರ ವರ್ಣ, ಗುರುಗಳಾದ ಲಂಬೋದರ ಹೆಗಡೆ, ರಾಘವೇಂದ್ರ ಹೆಗಡೆ ಯಲ್ಲಾಪುರ, ಸುದೀಪ ಉರಾಳ, ದರ್ಶನ್ ಗೌಡ, ಪಂಚಮಿ ವೈದ್ಯ, ಕಿಶನ್ ಕುಂದಾಪುರ, ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts