More

    ಕರೊನಾ ಬಿಕ್ಕಟ್ಟಿಗೆ ಭಾರತದ ಪ್ರಾಚೀನ ಜ್ಞಾನದಲ್ಲಿದೆ ಪರಿಹಾರ: ಪ್ರಿನ್ಸ್ ಚಾರ್ಲ್ಸ್

    ಲಂಡನ್: ಕರೊನಾ ಸೋಂಕು ಇಡೀ ವಿಶ್ವವನ್ನು ಕಾಡುತ್ತಿರುವ ಈ ಸಂದರ್ಭದಲ್ಲಿ ಭಾರತವನ್ನು ನೋಡಿ ಕಲಿಯುವುದು ಬೇಕಾದಷ್ಟಿದೆ. ಅದರ ಪ್ರಾಚೀನ ಜ್ಞಾನಭಂಡಾರದಿಂದ ಜಗತ್ತು ಪ್ರಯೋಜನ ಪಡೆದುಕೊಳ್ಳಬೇಕಿದೆ ಎಂದು ಬ್ರಿಟನ್ ರಾಜಕುಮಾರ ಪ್ರಿನ್ಸ್ ಚಾರ್ಲ್ಸ್ ಹೇಳಿದ್ದಾರೆ.

    ವರ್ಚುವಲ್ ಲಿಂಕ್‌ನಲ್ಲಿ ಇಂಡಿಯಾ ಗ್ಲೋಬಲ್ ವೀಕ್ ಕಾರ‌್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ‘‘ಸುಸ್ಥಿರ ಮಾರುಕಟ್ಟೆ ಅಭಿವೃದ್ಧಿಪಡಿಸಲು ಇದು ಸಕಾಲ. ನೈಸರ್ಗಿಕ, ಸಾಮಾಜಿಕ, ಮಾನವಿಕ ಮತ್ತು ದೈಹಿಕ ಶ್ರಮದ ಬಂಡವಾಳ ಹಾಕಿ ದೀರ್ಘ ಕಾಲ ಬಾಳುವ ಆರ್ಥಿಕತೆಯನ್ನು ರೂಪಿಸಬೇಕಾಗಿದೆ. ಇದಕ್ಕೆ ಭಾರತದ ಪ್ರಾಚೀನ ಜ್ಞಾನವೇ ಮಾರ್ಗದರ್ಶಿಯಾಗಬಲ್ಲದು. ಇದರಿಂದ ಬಡವರ ಬದುಕು ಭದ್ರವಾಗುತ್ತದೆ. ಈ ಕುರಿತು ನಾನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೂ ಮಾತನಾಡಿದ್ದೇನೆ’’ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಿರೀಕ್ಷೆ ಮಟ್ಟ ಕಾಣದ ಆನ್​ಲೈನ್ ಕ್ಲಾಸ್: ತಂತ್ರಜ್ಞಾನದ ಅರಿವು ಇಲ್ಲದ ಶಿಕ್ಷಕರಿಗೆ ಕಷ್ಟ

    ‘‘ನಿಸರ್ಗ ಮತ್ತು ಮನುಷ್ಯರ ಬದುಕಿನ ಮಧ್ಯೆ ಸೌಹಾರ್ದಯುತ ಬದುಕನ್ನೇ ಭಾರತ ಹಿಂದಿನಿಂದಲೂ ಪ್ರತಿಪಾದಿಸುತ್ತ ಬಂದಿದೆ. ಅಪರಿಗ್ರಹ ಎಂಬ ನೀತಿ ಇದನ್ನೇ ಹೇಳುತ್ತದೆ. ನಮಗೆ ಅಗತ್ಯವಿದ್ದಷ್ಟನ್ನು ಮಾತ್ರ ಸಂಗ್ರಹಿಸಬೇಕು, ಹೆಚ್ಚಿನ ಲಾಭ-ಲೋಭಗಳಿಂದ ದೂರವಿರಬೇಕು ಎಂಬುದನ್ನು ಅದು ನಮಗೆ ಬೋಧಿಸುತ್ತದೆ. ಜಗತ್ತಿನಲ್ಲಿ ಹೊಸ ಆರ್ಥಿಕ ಮಾದರಿಯನ್ನು ರೂಪಿಸುವ ಕಾಲ ಇದಾಗಿದ್ದು, ಈ ವೇಳೆ ಭಾರತದ ಪ್ರಾಚೀನ ಜ್ಞಾನವೇ ಎಲ್ಲರಿಗೆ ಮಾರ್ಗದರ್ಶಿ’’ ಎಂದಿದ್ದಾರೆ.

    ‘‘ನಾನು ಹಲವಾರು ಬಾರಿ ಭಾರತಕ್ಕೆ ಭೇಟಿ ನೀಡಿದ್ದೇನೆ. ನಾನಾ ಕ್ಷೇತ್ರಗಳ ಜನರನ್ನು ಭೇಟಿಯಾಗಿದ್ದೇನೆ. ಅಲ್ಲಿನ ಜೀವ-ಜೀವನ ವೈವಿಧ್ಯದಿಂದ ಬೆರಗುಗೊಂಡಿದ್ದೇನೆ. ಪ್ರಕೃತಿಯನ್ನು ಪೂಜಿಸುವ ಅಲ್ಲಿನ ಜನರು ತಮ್ಮ ಪ್ರಾಚೀನ ಜ್ಞಾನಸಂಪನ್ನತೆಯನ್ನು ಇನ್ನೂ ಉಳಿಸಿಕೊಂಡು ಬೆಳೆಸಿಕೊಂಡು ಹೋಗಲು ಕಾತರರಾಗಿರುವುದನ್ನು ಗಮನಿಸಿ ಆಶ್ಚರ್ಯಗೊಂಡಿದ್ದೇನೆ. ಅವರ ಜಾಣ್ಮೆ ಮತ್ತು ಸೃಜನಶೀಲತೆಯೇ ನನಗೆ ಅನೇಕ ಸಂದರ್ಭಗಳಲ್ಲಿ ವೈಯಕ್ತಿಕವಾಗಿ ಸ್ಫೂರ್ತಿ ನೀಡಿದೆ. ಸದ್ಯದ ಕರೊನಾ ಬಿಕ್ಕಟ್ಟಿನಲ್ಲಿ ಇಡೀ ಜಗತ್ತಿಗೆ ಭಾರತ ಹೇಳಿಕೊಡುವುದು ಸಾಕಷ್ಟಿದೆ’’ ಎಂದು ಚಾರ್ಲ್ಸ್ ಹೇಳಿದ್ದಾರೆ.

    ಪ್ರಿನ್ಸ್ ಚಾರ್ಲ್ಸ್ ಅನ್ನೂ ಬಿಡಲಿಲ್ಲ ಕರೊನಾ ವೈರಸ್ ಸೋಂಕು: 71 ವರ್ಷ ವಯಸ್ಸಿನ ಭಾವಿ ರಾಜನನ್ನೂ ಕಾಡುತ್ತಿದೆ COVID19

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts