More

    ಈಕೆ ಕಥೆ ಕೇಳಿದ್ರೆ ಗಂಡಸರು ಬಾಕ್ಸ್ ಮುಚ್ಚಳ ಮುಚ್ಚಲು ಹೆದರುತ್ತಾರೆ; 5 ವರ್ಷದ ದಾಂಪತ್ಯ ಮುರಿದು ಬಿತ್ತು..​

    ನವದೆಹಲಿ: ಮದುವೆ ಎಂದರೆ ದಂಪತಿ ಮಧ್ಯೆ ಇರುವ ಒಂದು ಸುಂದರವಾದ ಬಂಧವಾಗಿದೆ. ವಿವಾಹದ ವೇಳೆ ಹಿರಿಯರು ಕಷ್ಟ, ಸುಖ, ದುಖಃದಲ್ಲೂ ಇಬ್ಬರು ಜತೆಯಾಗಿ ಸಹಬಾಳ್ವೆಯಿಂದ ಜೀವನ ನಡೆಸಿ ಎಂದು ಆಶಿರ್ವಾದ ಮಾಡುತ್ತಾರೆ. ಆದರೆ ಬದಲಾದ ಇಂದಿನ ಜಗತ್ತಿನಲ್ಲಿ ಎಲ್ಲಾ ಸಂಬಂಧಗಳ ಬಾಂಧವ್ಯ ಬದಲಾಗಿದೆ. ಹೆಚ್ಚು ಕಾಲ ಯಾವ ಸಂಬಂಧ ಉಳಿಯದೆ ಇರುವ ಸ್ಥಿತಿ ನಿರ್ಮಾಣವಾಗಿದೆ. ದಂಪತಿ ನಡುವೆ ಇರುವ ಅಹಂ, ನಾನೇ ಹೆಚ್ಚು ಎನ್ನುವ ಮನೋಭಾವನೆ ಕೂಡಾ ಇದಕ್ಕೆ ಕಾರಣವಾಗಿರಬಹುದು.

    ಇಂದಿನ ಮದುವೆಗಳು ದಂಪತಿ ನಡುವಿನ ಸಣ್ಣ-ಪುಟ್ಟ ಬೇಸರದಿಂದ ನಂತರ ಕೊನೆಗೊಳ್ಳುತ್ತಿವೆ. ಇತ್ತೀಚೆಗೆ, ಮಹಿಳೆಯೊಬ್ಬಳು ತನ್ನ ಪತಿ ಬಾಕ್ಸ್‌ಗಳ ಮುಚ್ಚಳಗಳನ್ನು ಬಿಗಿಯಾಗಿ ಹಾಕುತ್ತಾನೆ ಎಂಬ ಕಾರಣಕ್ಕಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ. ಇದನ್ನು ಕೇಳಿದ ಎಲ್ಲರಿಗೂ ಆಶ್ಚರ್ಯವಾಯಿತು. ಏನು.. ಈ ಕಾರಣಗಳಿಗೂ ವಿಚ್ಛೇದನ ಕೊಡ್ತೀರಾ?ಎಂದು ಈ ಘಟನೆ ನೆಟ್ಟಿಗರು ರೆಡ್ಡಿಟ್ ಪೋಸ್ಟ್‌ನಲ್ಲಿ ಬೆಳಕಿಗೆ ಬಂದ ನಂತರ, ಇದು ಸಾಕಷ್ಟು ವೈರಲ್ ಆಗಿದೆ.

    ಹೆಸರು ಹೇಳಲಿಚ್ಛಿಸದ ಯುವತಿಯೊಬ್ಬಳು ತನ್ನ ಗಂಡನೊಂದಿಗಿನ ತೊಂದರೆಗಳ ಬಗ್ಗೆ ರೆಡ್ಡಿಟ್‌ನಲ್ಲಿ ಬರೆದಿದ್ದಾಳೆ. ಆಕೆಯ ಪತಿ ಉಪ್ಪಿನಕಾಯಿ ಮತ್ತು ಇತರ ಪಾತ್ರೆಗಳ ಮುಚ್ಚಳಗಳನ್ನು ತನ್ನ ಮನೆಯಲ್ಲಿ ಬಿಗಿಯಾಗಿ ಇಡುತ್ತಾನೆ ಮತ್ತು ಅವುಗಳನ್ನು ತೆರೆಯಲು ಅವಳು ಅನೇಕ ಬಾರಿ ಕಷ್ಟಪಡುತ್ತಿದ್ದಳು. ಆರಂಭಿಕ ದಿನಗಳಲ್ಲಿ, ಮುಚ್ಚಳವನ್ನು ಬಿಗಿಯಾಗಿ ಇಡುವುದರಿಂದ ಡಬ್ಬಿಗಳಲ್ಲಿನ ಆಹಾರವನ್ನು ತಾಜಾವಾಗಿಡುತ್ತದೆ ಎಂದು ಅವರ ಪತಿ ಹೇಳಿದರು. ಮುಚ್ಚಳವು ಬಿಗಿಯಾಗಿರಲಿ ಅಥವಾ ಸಡಿಲವಾಗಿರಲಿ, ಅದರಲ್ಲಿರುವ ಆಹಾರವು ಹೇಗಾದರೂ ಕೆಡುತ್ತದೆ. ಆದರೆ, ತನಗೆ ಯಾವುದೇ ತೊಂದರೆ ಇಲ್ಲ, ಮುಚ್ಚಳ ಬಿಗಿಯಾಗಿರುವುದರಿಂದ ತನಗೆ ಬೇಕಾದ ಸಮಯಕ್ಕೆ ಆಹಾರ ಸೇವಿಸಲು ಸಾಧ್ಯವಾಗುತ್ತಿಲ್ಲ, ಕೆಲ ಸಂದರ್ಭಗಳಲ್ಲಿ ಅಕ್ಕಪಕ್ಕದವರ ನೆರವಿನಿಂದ ಡಬ್ಬಿಗಳ ಮುಚ್ಚಳ ತೆಗೆಯಬೇಕಾಗುತ್ತದೆ. 5 ವರ್ಷಗಳಿಂದ ಇದೆ ಸಮಸ್ಯೆ ಎದುರಿಸಿದ್ದಾಳೆ. ಜೋಡಿಸಿದ ಬಾಕ್ಸ್ ಗಳ ಮುಚ್ಚಳ ತೆರೆಯಲು ಸಾಧ್ಯವಾಗುತ್ತಿಲ್ಲ. ಮೇಲಾಗಿ ತನ್ನ ಪತಿಯು ಉದ್ದೇಶಪೂರ್ವಕವಾಗಿ ಬಾಕ್ಸ್​​ ಮುಚ್ಚಳಗಳನ್ನು ಈ ರೀತಿ ಬಿಗಿಯಾಗಿ ಹಾಕುತ್ತಿರುವುದನ್ನು ಮನಗಂಡ ಆಕೆಯ ಪತಿ ಕ್ಷಮೆಯಾಚಿಸಿದ್ದಾರೆ. ಆದರೆ ಆಗಲೇ ಆಕೆ ಪತಿಯ ಕೃತ್ಯದಿಂದ ಬೇಸತ್ತು ಈಗಾಗಲೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ.

    ಈಕೆ ಕಥೆ ಕೇಳಿದ್ರೆ ಗಂಡಸರು ಬಾಕ್ಸ್ ಮುಚ್ಚಳ ಮುಚ್ಚಲು ಹೆದರುತ್ತಾರೆ; 5 ವರ್ಷದ ದಾಂಪತ್ಯ ಮುರಿದು ಬಿತ್ತು..​

    ಇವರ ದಾಂಪತ್ಯದಲ್ಲಿ ಒಂದೇ ಸಮಸ್ಯೆ ಎಂದರೆ ಬಿಗಿಯಾದ ಮುಚ್ಚಳಗಳು. ಆದರೆ ಅವನು ಉದ್ದೇಶಪೂರ್ವಕವಾಗಿ ಇಷ್ಟೆಲ್ಲಾ ಮಾಡುತ್ತಿದ್ದಾನೆ ಎಂದು ಅವನ ಹೆಂಡತಿ ಒಪ್ಪಿಕೊಳ್ಳದಿದ್ದಾಗ ಕೋಪಗೊಂಡಳು. ಡಬ್ಬಿಯ ಮುಚ್ಚಳ ತೆಗೆಯಲು ದಿನವೂ ಹರಸಾಹಸ ಪಡಬೇಕಾಗಿದ್ದು, ಈ ವಿಚಾರವಾಗಿ ಹಲವು ಬಾರಿ ಜಗಳ ಮಾಡಿಕೊಂಡಿದ್ದರು. ಹೀಗಾಗಿ ವಿಚ್ಛೇದನಕ್ಕೆ ಮುಂದಾಗಿದ್ದೇನೆ ಎಂದು ಮಹಿಳೆ ನ್ಯಾಯಾಲಯದಲ್ಲಿ ಹೇಳಿದ್ದಾಳೆ.

    ಮನೆಯಲ್ಲಿದ್ದಾಗ ಡಬ್ಬಿಯ ಮುಚ್ಚಳವನ್ನು ತಾವೇ ತೆರೆಯುತ್ತಾರೆ, ಆದರೆ ಅವರು ಹೊರಗೆ ಹೋದಾಗ ಡಬ್ಬದ ಮುಚ್ಚಳ ತೆಗೆಯಲು ಕಷ್ಟಪಡುತ್ತೇವೆ. ಹಲವು ಬಾರಿ ಈ ಸಮಸ್ಯೆ ಕುರಿತಾಗಿ ಹೇಳಿದ್ದೇನೆ. ಆದರೆ ಯಾವುದೇ ಪ್ರಯೋಜನ ಕೂಡಾ ಆಗಿಲ್ಲ. ಕಳೆದ ಐದು ವರ್ಷಗಳಿಂದ ಈ ಸಮಸ್ಯೆಯಿಂದ ಬಳಲುತ್ತಿದ್ದ ಆಕೆ ಮೂಗು ಮುರಿದುಕೊಂಡಿದ್ದಾಳೆ. ಇದೀಗ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಆದರೆ ಈ ಘಟನೆ ನಡೆದಿರುವುದು ಎಲ್ಲಿ ಎನ್ನುವ ಮಾಹಿತಿ ಮಾತ್ರ ಲಭ್ಯವಾಗಿಲ್ಲ. ಆದರೆ ಈ ಜೋಡಿಯ ವಿಚ್ಛೇದನಕ್ಕೆ ಕಾರಣವಾದ ಈ ಬಾಕ್ಸ್​​ ಮುಚ್ಚಳದ ಸುದ್ದಿ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಸುದ್ದಿಯಲ್ಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts