More

    ವಿನ್ನಿಂಗ್​ ಅಮೌಂಟ್​ ನನ್ನ ತಾಯಿಯ ಅಕೌಂಟ್​ಗೆ ಹಾಕಿ; ಬಿಸಿಸಿಐಗೆ ಹಾರ್ದಿಕ್​ ಮನವಿ ಮಾಡಲು ಕಾರಣವೇನು?

    ನವದೆಹಲಿ: ಈಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾ ಗೆದ್ದು ಬೀಗಿದ್ದು, 09ನೇ ಆವೃತ್ತಿಯ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ಇನ್ನೂ ಟೀಮ್​ ಇಂಡಿಯ ಆಪರ ಅಮೋಘ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಾರ್ದಿಕ್​ ಪಾಂಡ್ಯ ಇತ್ತೀಚಿನ ದಿನಗಳಲ್ಲಿ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಇದೀಗ ಮತ್ತೊಮ್ಮೆ ಸುದ್ದಿಯಲ್ಲಿರುವ ಹಾರ್ದಿಕ್​ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ಟ್ರೆಂಡ್​ ಸೃಷ್ಟಿಸಿದ್ದಾರೆ.

    ಇತ್ತೀಚಿಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾ ಗೆದ್ದು ಬೀಗಿದ್ದು, 17 ವರ್ಷಗಳ ಬಳಕ ಕಪ್​ಅನ್ನು ಗೆಲ್ಲಿಸಿಕೊಟ್ಟಿದ್ದಕ್ಕೆ ಆಟಗಾರರಿಗೆ ಬಿಸಿಸಿಐ ಭರ್ಜರಿ ಬಹುಮಾನ ಘೋಷಿಸಿತ್ತು. ಈ ಬಹುಮಾನದ ಮೊತ್ತವನ್ನು ಆಟಗಾರರು ಸ್ವದೇಶಕ್ಕೆ ಮರಳಿದ ಬಳಿಕ ನೀಡಲಾಗುತ್ತದೆ. ಇದೀಗ ಈ ಮೊತ್ತವನ್ನು ಹಾರ್ದಿಕ್​ ತಮ್ಮ ತಾಯಿಯ ಅಕೌಂಟ್​ಗೆ ಜಮೆ ಮಾಡುವಂತೆ ಹೇಳಿದ್ದಾರೆ ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿದ್ದು, ಸಖತ್​ ಟ್ರೆಂಡ್​ ಆಗುತ್ತಿದೆ.

    ಇದನ್ನೂ ಓದಿ: ಹೆಂಡತಿ ಬಿಟ್ಟು ಅಪ್ರಾಪ್ತ ವಯಸ್ಕನ ಮೇಲೆ ಮೋಹಿತನಾದ ವ್ಯಕ್ತಿ; ಮುಂದೆ ನಡೆದಿದ್ದೇನು?

    2023ರಲ್ಲಿ ನಡೆದ ಏಕದಿನ ವಿಶ್ವಕಪ್ನಲ್ಲಿ ಗಾಯಗೊಂಡು ಆ ಬಳಿಕ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ನಾಯಕತ್ವದ ವಿಚಾರವಾಗಿ ತೀವ್ರವಾಗಿ ಟ್ರೋಲ್​ ಆಗಿದ್ದ ಹಾರ್ದಿಕ್​ ಪಾಂಡ್ಯ, ಆ ಬಳಿಕ ವಿಚ್ಛೇದನದ ವಿಚಾರವಾಗಿ ಸದ್ದು ಮಾಡಿದ್ದರು. ಹಾರ್ದಿಕ್​ ಪತ್ನಿ ನತಾಶಾ ಪತಿಯ ಆಸ್ತಿಯಲ್ಲಿ ಶೇ.70 ರಷ್ಟು ಪಾಲನ್ನು ಜೀವನಾಂಶಕ್ಕೆ ನೀಡಬೇಕೆಂದು ಡಿವೋರ್ಸ್​ ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಆದರೆ, ಆ ಬಳಿಕ ತಿಳಿದು ಬಂದ ವಿಚಾರವೇನೆಂದರೆ ಹಾರ್ದಿಕ್​ ತಾವು ಖರೀದಿಸಿದ ಕಾರು, ಮನೆ ಹಾಗೂ ಬೆಲೆಬಾಳುವ ವಸ್ತುಗಳನ್ನ ತಮ್ಮ ತಾಯಿಯ ಹೆಸರಿನಲ್ಲಿ ನೋಂದಾಯಿಸಿದ್ದರೆಂದು. ನತಾಶಾಗೆ 70 ಅಲ್ಲಾ ಶೇ. 07ರಷ್ಟು ಪಾಲು ಸಿಗುವುದಿಲ್ಲವೆಂದು. ಇದೀಗ ಈ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ಟ್ರೋಲ್​ ಆಗುತ್ತಿದೆ.

    ಬಿಸಿಸಿಐ ತಮಗೆ ಕೊಡುವ ಮೊತ್ತವನ್ನು ತಮ್ಮ ತಾಯಿಯ ಖಾತೆಗೆ ಹಾಕಬೇಕೆಂದು ಹಾರ್ದಿಕ್​ ಬಿಸಿಸಿಐ ಕಾರ್ಯದರ್ಶಿ ಜಯ್​ ಷಾ ಅವರ ಬಳಿ ಮನವಿ ಮಾಡಿಕದ್ದಾರಂತೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಟ್ರೋಲ್​ ಆಗುತ್ತಿದ್ದು, ಇದರ ಮೀಮ್ಸ್​ ಸಖತ್​ ವೈರಲ್​ ಆಗುತ್ತಿದೆ. ಇದರ ಬಗ್ಗೆ ಹಾರ್ದಿಕ್​ ಮುಂದಿನ ದಿನಗಳಲ್ಲಿ ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts