More

    ವಿಶ್ವಕಪ್ ಬಳಿಕ ಕೊಹ್ಲಿ-ರೋಹಿತ್​​ಗೆ ಕೊಕ್, ಪಾಂಡ್ಯಾಗೆ ನಾಯಕನ ಪಟ್ಟ..? ಸೂರ್ಯಕುಮಾರ್​​ಗೂ ಇದೆ ಅವಕಾಶ!

    ನವದೆಹಲಿ: ಯುಎಸ್​ಎ, ವೆಸ್ಟ್​ಇಂಡೀಸ್​ ಆತಿಥ್ಯದಲ್ಲಿ 09ನೇ ಆವೃತ್ತಿಯ ಚುಟುಕು ವಿಶ್ವಸಮರಕ್ಕೆ ಇಂದು (ಜೂನ್ 29) ವರ್ಣರಂಜಿತ ತೆರೆ ಬೀಳಲಿದ್ದು, ಟೀಮ್​ ಇಂಡಿಯಾ ಬಲಿಷ್ಠ ದಕ್ಷಿಣ ಆಫ್ರಿಕಾದ ಎದುರು ಕಪ್​ಗಾಗಿ ಸೆಣಸಾಡಲಿದೆ. ಟೀಮ್​ ಇಂಡಿಯಾದ ಯಶಸ್ವಿ ಪ್ರದರ್ಶನದಲ್ಲಿ ಪ್ರಮುಖ ಪಾತ್ರ ವಹಿಸಿರುವ ದಾಖಲೆಗಳ ಸರದಾರರು ಎಂದೇ ಖ್ಯಾತಿ ಪಡೆದಿರುವ ವಿರಾಟ್​ ಕೊಹ್ಲಿ ಹಾಗೂ ರೋಹಿತ್​ ಶರ್ಮಾ ಟಿ20 ವಿಶ್ವಕಪ್​ನ ಫೈನಲ್​ ಬಳಿಕ ನಿವೃತ್ತಿಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡಲು ಶುರು ಮಾಡಿದ್ದು, ಇದಕ್ಕೆ ಬಿಸಿಸಿಐ ತೆಗೆದುಕೊಂಡಿರುವ ನಿರ್ಧಾರ ಪುಷ್ಠಿ ನೀಡಿದೆ.

    ಒಂದೆಡೆ ಟೀಮ್ ಇಂಡಿಯಾ ಟಿ20 ವಿಶ್ವಕಪ್ 2024ರ ಫೈನಲ್ ಪಂದ್ಯ ಗೆದ್ದು, ಅಪಾರ ಸಂಖ್ಯೆಯ ಭಾರತೀಯರ ಆಸೆಯನ್ನು ಈಡೇರಿಸಲಿದೆ ಎಂದು ಭಾವಿಸಿದರೆ, ಮತ್ತೊಂದೆಡೆ ಕ್ರಿಕೆಟ್ ದಿಗ್ಗಜರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಅವರ ಅಂತಿಮ ಟಿ20 ಪಂದ್ಯ ಇದೇ ಆಗಿರಲಿದೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದೆ. ಇದು ಸತ್ಯ ಎಂದು ಕೂಡ ಹೇಳಲಾಗಿದೆ. 2024ರ ಟಿ20 ವಿಶ್ವಕಪ್ ಗೆಲುವೇ ಕೊಹ್ಲಿ-ಹಿಟ್​ಮ್ಯಾನ್​ಗೆ ಕೊನೆ ಎಂದು ಹೇಳಲಾಗಿದ್ದು, ಇದಾದ ಬಳಿಕ ಇವರು ನಿವೃತ್ತಿ ಘೋಷಿಸಲಿದ್ದಾರೆ ಎಂದು ಹೇಳಲಾಗಿದೆ.

    ಟಿ20 ವಿಶ್ವಕಪ್​ ಮುಗಿದ ಬಳಿಕ ಚುಟುಕು ಕ್ರಿಕೆಟ್​ ಮಾದರಿಯಿಂದ ರೋಹಿತ್​ ಹಾಗೂ ವಿರಾಟ್​ರನ್ನು ತಂಡದಿಂದ ಕೈಬಿಡುವ ಬಗ್ಗೆ ಬಿಸಿಸಿಐ ನಿರ್ಧರಿಸಿದೆ ಎಂದು ಹೇಳಲಾಗಿದೆ. ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುವ ನಿಟ್ಟಿನಲ್ಲಿ ಮತ್ತು 2026ರಲ್ಲಿ ನಡೆಯುವ ಟಿ20 ವಿಶ್ವಕಪ್​ಗೆ ಹೊಸ ನಾಯಕನ ಅಡಿಯಲ್ಲಿ ತಂಡವನ್ನು ಸಜ್ಜುಗೊಳಿಸಬೇಕಾಗಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಈ ನಿರ್ಧಾರಕ್ಕೆ ಬಂದಿದ್ದು, ಕೋಚ್​ ಬದಲಾವಣೆಯ ಜೊತೆಗೆ ತಂಡದಲ್ಲೂ ಚೇಂಜಸ್​ ಮಾಡಲು ಮುಂದಾಗಿದೆ. ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿರುವ ರೋಹಿತ್​ ಸ್ಥಾನಕ್ಕೆ ಹಾರ್ದಿಕ್​ ಅಥವಾ ಸುರ್ಯಕುಮಾರ್​ರನ್ನು ನೇಮಿಸಬಹುದೆಂದು ಹೇಳಲಾಗಿದೆ. ಸುದ್ದಿ ಮೂಲಗಳ ಪ್ರಕಾರ ನಾಯಕನ ಸ್ಥಾನಕ್ಕೆ ಹಾರ್ದಿಕ್​ ಪಾಂಡ್ಯ ಸೂಕ್ತ ಎನ್ನಿಸಿದ್ದು, ಟಿ20 ವಿಶ್ವಕಪ್​ನಲ್ಲಿನ ಆಲ್ರೌಂಡ್​ ಪ್ರದರ್ಶನ ಅವರ ಕೈಹಿಡಿದಿದೆ.

    Surya Kohli Pandya

    ಇದನ್ನೂ ಓದಿ: ತಿಳಿದಿರುವವರಿಗೆ ಹೊಸದಾಗಿ ಕಲಿಸುವ ಅಗತ್ಯವಿಲ್ಲ; ಹಿಟ್​ಮ್ಯಾನ್​ ವಿರುದ್ಧ ಗುಡುಗಿದ ಪಾಕ್​ ಮಾಜಿ ನಾಯಕ

    ಕೇಳಿ ಬಂದಿರುವ ಮಾಹಿತಿ ಪ್ರಕಾರ, 2025ರ ಫ್ರೆಬ್ರವರಿಯಲ್ಲಿ ಶುರುವಾಗುವ ಚಾಂಪಿಯನ್ಸ್​ ಟ್ರೋಫಿಗೂ ಮುನ್ನ ಟೀಮ್​ ಇಂಡಿಯಾ 10 ಟೆಸ್ಟ್, 6 ಏಕದಿನ, 20 ಟಿ20 ಪಂದ್ಯಗಳನ್ನು ಆಡಲಿದ್ದು, ಹಾರ್ದಿಕ್​ ಪಾಂಡ್ಯ ಟಿ20 ಪಂದ್ಯಗಳಿಗೆ ನಾಯಕರಾಗಿರುತ್ತಾರೆ ಎಂದು ಹೇಳಲಾಗಿದೆ. ಟಿ20 ಮಾದರಿಯಿಂದ ರೋಹಿತ್​ ಹಾಗೂ ಕೊಹ್ಲಿಯನ್ನು ಹೊರಗಿಡುವ ಬಗ್ಗೆ ಗೌತಮ್​ ಗಂಭೀರ್​ ಅವರು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದ್ದು, ಅವರು ಕೋಚ್​ ಆದ ಬಳಿಕ ಇದು ಕಾರ್ಯರೂಪಕ್ಕೆ ಬರಲಿದೆ.

    ಇಂಗ್ಲೆಂಡ್​ ಹಾಗೂ ದಕ್ಷಿಣ ಆಫ್ರಿಕಾದಂತಹ ಬಲಿಷ್ಠ ತಂಡಗಳ ವಿರುದ್ಧ ಹೆಚ್ಚು ಟಿ20 ಪಂದ್ಯಗಳನ್ನು ಆಯೋಜಿಸಲಾಗಿದ್ದು, ಇದರಲ್ಲಿ ಹೊಸ ಪ್ರತಿಭೆಗಳನ್ನು ಕಣಕ್ಕಿಳಿಸಿ ಪರೀಕ್ಷಿಸಲು ಬಿಸಿಸಿಐ ಮುಂದಾಗಿದೆ. ಹಾಗಿದ್ದಲ್ಲಿ ಈ ಟಿ20 ವಿಶ್ವಕಪ್​ ವಿರಾಟ್​ ಹಾಗೂ ರೋಹಿತ್​​ ಪಾಲಿಗೆ ಕೊನೆಯೇ ಅಥವಾ ಹಿರಿತನದ ಆಧಾರದ ಮೇಲೆ ಬಿಸಿಸಿಐ ಇವರನ್ನು ಪರಿಗಣಿಸುತ್ತಾ ಎಂದು ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts