More

    25 ವರ್ಷ ಮೇಲ್ಪಟ್ಟವರು ನೀರು ಬೆರಸಿದ ಹಾಲು ಕುಡಿಯುವುದು ಎಷ್ಟು ಆರೋಗ್ಯಕರ; ತಜ್ಞರು ಹೇಳಿರೋದೇನು?

    ವಯಸ್ಸು ಹೆಚ್ಚದಂತೆ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬೇಕು. ದೈನಂದಿನ ಜೀವನದಲ್ಲಿ ನಿಯಮಿತ ವ್ಯಾಯಾಮ ಮತ್ತು ಉತ್ತಮ ಆಹಾರ ಎಷ್ಟು ಪ್ರಮುಖ ಎಂಬುದು ಎಲ್ಲರಿಗೂ ತಿಳಿದಿದೆ. ಬೆಳಗ್ಗೆ ಎಚ್ಚರವಾದಾಗ ಅಥವಾ ರಾತ್ರಿ ನಿದ್ರಿಸುವ ಮುನ್ನ ಹಾಲು ಕುಡಿಯುವುದು ಕೆಲವರ ರೂಢಿಯಾಗಿರುತ್ತದೆ. ಆದರೆ ನಾವು ಕುಡಿಯುವ ಹಾಲಿನಲ್ಲಿ ನೀರನ್ನು ಬೆರೆಸುವುದು ಎಷ್ಟು ಮುಖ್ಯ ಎಂಬುದು ನಿಮಗೆ ಗೊತ್ತಿದೆಯೆ? ಚಿಕ್ಕವರಿದ್ದಾಗ ಗಟ್ಟಿ ಹಾಲನ್ನು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಆದರೆ ವಯಸ್ಕರಾದ ಬಳಿಕ ಅದೇ ಮುಂದುವರೆದರೆ ಆರೋಗ್ಯ ಮಾರಕ ಎಂಬುದು ಕೆಲವು ತಜ್ಞರ ಅಭಿಪ್ರಾಯ ಆಗಿದೆ.

    ಇದನ್ನು ಓದಿ: ಅಯೋಧ್ಯೆಯ ಮಾನಹಾನಿ ಮಾಡುವ ಪ್ರಯತ್ನ; ಸಿಎಂ ಯೋಗಿ ಆದಿತ್ಯನಾಥ್​​

    ಈ ಕುರಿತಂತೆ ನ್ಯೂಟ್ರಿಷಿಯನ್​ ಹಾಗೂ ಡಯಿಟಿಷಿಯನ್​​ ಆದಿಬಾ ಇಕ್ಕರಂ ಸೈಯದ್​ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವೀಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಆ ವೀಡಿಯೊದಲ್ಲಿ 20 ಅಥವಾ 25 ವಯಸ್ಸಿನವರೆಗೂ ಗಟ್ಟಿ ಹಾಲು ಕುಡಿಯಿರಿ. ಅದರ ನಂತರ ಹಾಲಿಗೆ ನೀರನ್ನು ಬೆರೆಸಿ ಕುಡಿಯಿರಿ ಎಂದು ತಿಳಿಸಿದ್ದಾರೆ.

    ವಯಸ್ಸು ಹೆಚ್ಚಾದಂತೆ, ನಮ್ಮ ಆಹಾರ ಪದ್ಧತಿ, ಜೀವನಶೈಲಿ ಮತ್ತು ಬಹು ಮೂಲಗಳಿಂದ ಪೌಷ್ಟಿಕಾಂಶದ ಸೇವನೆಯು ಹಾಲಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಹಾಲಿಗೆ ನೀರನ್ನು ಸೇರಿಸುವುದರಿಂದ ಸೂಕ್ಷ್ಮತೆ ಇರುವವರಿಗೆ ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ. ಹಾಲಿಗೆ ನೀರನ್ನು ಸೇರಿಸುವುದು ಪ್ರಾಥಮಿಕವಾಗಿ ಕ್ಯಾಲೋರಿಗಳು, ಕೊಬ್ಬುಗಳು, ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಪ್ರಮಾಣದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಹಾಲಿನ ಪೌಷ್ಟಿಕಾಂಶದ ಮೇಲಿನ ಒಟ್ಟಾರೆ ಪರಿಣಾಮವು ಸಾಧಾರಣವಾಗಿರುತ್ತದೆ ಎಂದು ಸಿಡ್ಸ್ ಫಾರ್ಮ್‌ನಲ್ಲಿ ಮಾರ್ಕೆಟಿಂಗ್‌ನ ವಿಪಿ ಆಗಿರುವ ತಮಾಲ್​​ ಚಟರ್ಜಿ ಅವರು ವಿವರಿಸಿರುವುದು ಇಂಡಿಯನ್​ ಎಕ್ಸ್​​ಪ್ರೆಸ್​​ನಲ್ಲಿ ವರದಿಯಾಗಿದೆ.

    ಹಾಲಿಗೆ ನೀರನ್ನು ಸೇರಿಸಿ ಕುಡಿಯುವುದನ್ನು ರೂಢಿಸಿಕೊಂಡ ನಂತರ ಸಮತೋಲಿತ ಆಹಾರ ಸೇವನೆಯಿಂದ ನಮ್ಮ ದೇಹಕ್ಕೆ ಪೌಷ್ಟಿಕಾಂಶ ಪೂರೈಕೆಯಾಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ. ನೀರು ಸೇರಿಸಿರುವ ಹಾಲು ಕುಡಿಯುವುದರಿಂದ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಚಟರ್ಜಿ ಅವರು ತಿಳಿಸಿದ್ದಾರೆ.

    77ನೇ ಲೊಕಾರ್ನೊ ಫಿಲ್ಮ್​​ ಫೆಸ್ಟಿವಲ್​; ಬಾಲಿವುಡ್​ ಬಾದ್​ಶಾ ಶಾರೂಖ್​ಗೆ ವಿಶೇಷ ಗೌರವ

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts