More

    ‘ಮಾಣಿಕ್ಯ’ ನಟಿ ವರಲಕ್ಷ್ಮಿ ಶರತ್‌ ಕುಮಾರ್‌ ಥೈಲ್ಯಾಂಡ್‌ನಲ್ಲಿ ಮದುವೆ ಆಗ್ತಿರುವುದು ಯಾಕೆ ಗೊತ್ತಾ?

    ಬೆಂಗಳೂರು: ನಟಿ ವರಲಕ್ಷ್ಮಿ ಶರತ್‌ಕುಮಾರ್ ಬಹುಕಾಲದ ಗೆಳೆಯನ ಜತೆ ಜುಲೈ 2ರಂದು ಸಪ್ತಪದಿ ತುಳಿಯಲಿದ್ದಾರೆ. ಇವರಿಬ್ಬರ ವಿವಾಹವು ಥೈಲ್ಯಾಂಡ್‌ನಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಥೈಲ್ಯಾಂಡ್‌ ಪ್ರವಾಸಿಗರ ಸ್ವರ್ಗ. ಹೀಗಿರುವಾಗ ಈ ಜೋಡಿ ಥೈಲ್ಯಾಂಡ್‌ನಲ್ಲಿಯೇ ಯಾಕೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಎನ್ನುವ ಪ್ರಶ್ನೆ ಮುನ್ನೆಲೆಗೆ ಬಂದಿದೆ.

    ತಮಿಳು, ತೆಲುಗು, ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿ ಚಿತ್ರಪ್ರೇಮಿಗಳಿಂದ ಸೈ ಎನಿಸಿಕೊಂಡ ನಟಿ ವರಲಕ್ಷ್ಮಿ ಶರತ್​ಕುಮಾರ್, ಆಯಾ ಭಾಷೆಗಳ ಚಿತ್ರಗಳಲ್ಲಿ ಹಲವಾರು ಪಾತ್ರಗಳ ಮೂಲಕ ಸಿನಿರಸಿಕರಿಗೆ ತಮ್ಮದೇ ವಿಶೇಷ ಛಾಪು ಮೂಡಿಸಿರುವ ನಟಿ ವರಲಕ್ಷ್ಮಿ ಶರತ್‌ಕುಮಾರ್ ಮತ್ತು ನಿಕೋಲಾಯ್ ಸಚ್‌ದೇವ್ 14 ವರ್ಷಗಳಿಂದ ಸ್ನೇಹಿತರಾಗಿದ್ದು, ತಮ್ಮ ಪೋಷಕರ ಒಪ್ಪಿಗೆ ಪಡೆದು ಸ್ನೇಹಿತರು-ಪ್ರೀತಿ ಪಾತ್ರರ ಸಮ್ಮುಖದಲ್ಲಿ ಮಾರ್ಚ್​ 01ರಂದು ಉಂಗುರಗಳನ್ನು ಬದಲಾಯಿಸಿಕೊಂಡಿದ್ದರು. ಇಂದು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧವಾಗಿದೆ.

    ನಟ ಶರತ್‌ಕುಮಾರ್ , ರಾಧಿಕಾ ದಂಪತಿ ಪುತ್ರಿ ವರಲಕ್ಷ್ಮಿ ಅವರ ವಿವಾಹವು ಉದ್ಯಮಿ ನಿಕೋಲಾಯ್ ಜತೆಗೆ ನಡೆಯಲಿದೆ. ಥೈಲ್ಯಾಂಡ್‌ನಲ್ಲಿ ನಡೆಯುವ ಈ ಜೋಡಿಯ ವಿವಾಹಕ್ಕೆ ಸ್ಟಾರ್ ಕಲಾವಿದರು, ಗಣ್ಯರು ಆಗಮಿಸಲಿದ್ದಾರೆ.

    ನಟಿ ವರಲಕ್ಷ್ಮಿ ಶರತ್​ ಕುಮಾರ್​ ಮದುವೆ ಕಾರ್ಯಕ್ರಮಗಳು ಥಾಯ್ಲೆಂಡ್ ನಲ್ಲಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ನಟಿ ರಲಕ್ಷ್ಮಿ ಎಲ್ಲೋ ಕಲರ್ ಡ್ರೆಸ್ ನಲ್ಲಿ ಕಾಣಿಸಿಕೊಂಡ್ರು. ಮೆಹಂದಿ ಸಮಾರಂಭವನ್ನು ಅದ್ಧೂರಿಯಾಗಿ ನಡೆದಿದೆ. ಇಂದು ಮದುವೆ ಕೂಡಾ ಅಷ್ಟೆ ಅದ್ದೂರಿಯಾಗಿ ನಡೆಯಲಿದೆ.

    ಥೈಲ್ಯಾಂಡ್, ಆಗ್ನೇಯ ಏಷ್ಯಾದಲ್ಲಿರುವ ಒಂದು ಪ್ರಮುಖ ದೇಶ. ಈ ದೇಶವು ಪೂರ್ವದಲ್ಲಿ ಲಾಓಸ್ ಹಾಗು ಕಂಬೋಡಿಯ, ದಕ್ಷಿಣದಲ್ಲಿ ಥೈಲ್ಯಾಂಡ್ ಕೊಲ್ಲಿ ಹಾಗು ಮಲೇಶಿಯ, ಪಶ್ಚಿಮದಲ್ಲಿ ಅಂಡಮಾನ್ ಸಮುದ್ರ ಹಾಗು ಮ್ಯಾನ್‌ಮಾರ್ ದೇಶಗಳಿಂದ ಸುತ್ತುವರಿದಿದೆ. ಥೈಲ್ಯಾಂಡ್ ದೇಶದ ರಾಜಧಾನಿ ಬ್ಯಾಂಕಾಕ್‌ ಲೈಂಗಿಕ ಜೀವನ, ಐಷಾರಾಮಿ ರೆಸಾರ್ಟ್‌ಗಳು, ಸಾಹಸ ಚಟುವಟಿಕೆಗಳು, ರಾತ್ರಿಯ ಜೀವನಕ್ಕೆ ತುಂಬಾನೇ ಜನಪ್ರಿಯವಾಗಿದೆ.

    ಥೈಲ್ಯಾಂಡ್ ದೇಶದ ರಾಜಧಾನಿ ಬ್ಯಾಂಕಾಕ್‌ ಲೈಂಗಿಕ ಜೀವನ, ಐಷಾರಾಮಿ ರೆಸಾರ್ಟ್‌ಗಳು, ಸಾಹಸ ಚಟುವಟಿಕೆಗಳು, ರಾತ್ರಿಯ ಜೀವನಕ್ಕೆ ತುಂಬಾನೇ ಜನಪ್ರಿಯವಾಗಿದೆ. ಆದರೆ ಹೀಗೆ ಪ್ರಖ್ಯಾತಿ ಪಡೆದರುವ ಈ ಸ್ಥಳದಲ್ಲಿ ನಟಿ ವರಲಕ್ಷ್ಮಿ ಶರತ್​ ಕುಮಾರ್​ ಯಾಕೆ ಮದುವೆ ಆಗುತ್ತಿದ್ದಾರೆ. ಈ ನಿರ್ಧಾರದ ಹಿಂದೆ ಇರುವ ಕಾರಣ ಎನಿರಬಹುದು ಎಂದು ಪ್ರಶ್ನೆ ಮೂಡುವುದು ಸಹಜ. ಮುಂದೆ ಈ ಜೋಡಿ ಏನಾದ್ರೂ ಈ ಕುರಿತಾಗಿ ಮಾತನಾಡುತ್ತಾರಾ? ಎಂದು ಕಾದು ನೋಡಬೇಕಾಗಿದೆ.

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts