More

    ರೋಗ ನಾಶಕ ಗುಣ ಹೊಂದಿದ ಮಹೌಷಧ ಬೆಳ್ಳುಳ್ಳಿ

    ರೋಗ ನಾಶಕ ಗುಣ ಹೊಂದಿದ ಮಹೌಷಧ ಬೆಳ್ಳುಳ್ಳಿಬೆಳ್ಳುಳ್ಳಿಗೆ ಆಯುರ್ವೆದದಲ್ಲಿ ಮಹೌಷಧ ಎಂದು ಕರೆದಿದ್ದಾರೆ. ಇದಕ್ಕಿರುವ ರೋಗ ನಾಶಕ ಗುಣ ಅಂಥದ್ದು. ಭಾರತೀಯರು ತಲೆತಲಾಂತರಗಳಿಂದ ಬೆಳ್ಳುಳ್ಳಿಯನ್ನು ಔಷಧವಾಗಿ ಬಳಕೆ ಮಾಡುತ್ತಿದ್ದಾರೆ. ಇಂದು ಆಧುನಿಕ ವಿಜ್ಞಾನ ಕೂಡ ಬೆಳ್ಳುಳ್ಳಿ ಹಲವಾರು ಕಾಯಿಲೆಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿವೆ ಎಂಬುದನ್ನು ಕಂಡುಕೊಂಡಿದೆ.

    ಅಂಥದ್ದೇನಿದೆ ಬೆಳ್ಳುಳ್ಳಿಯಲ್ಲಿ?: ಮುರಿದ ಎಲುಬುಗಳನ್ನು ಜೋಡಿಸುವ ಶಕ್ತಿ ಬೆಳ್ಳ್ಳುಳ್ಳಿಗಿದೆ. ವಯಸ್ಸಾಗುತ್ತಾ ಹೋದಂತೆ ಮನುಷ್ಯರಲ್ಲಿ ಸಹಜವಾಗಿ ಮೂಳೆ ಸವಕಳಿ ಆಗುತ್ತದೆ. ಬೆಳ್ಳುಳ್ಳಿಯ ನಿಯಮಿತ ಸೇವನೆ ಈ ಮೂಲೆ ಸವೆತವನ್ನು ತಪ್ಪಿಸುತ್ತದೆ. ಇದರಲ್ಲಿ ಆಂಟಿ ಆಕ್ಸಿಡಂಟ್​ಗಳು ಹೇರಳವಾಗಿ ಇವೆ. ಈ ಕಾರಣದಿಂದಾಗಿ ವಯಸ್ಸಾದಂತೆ ಮಿದುಳಿನ ಶಕ್ತಿ ಕಡಿಮೆಯಾಗಿ ಮರೆವು, ಗಲಿಬಿಲಿಗಳು ಹೆಚ್ಚಾಗುವುದನ್ನು ಕೂಡ ಇದು ತಪ್ಪಿಸುತ್ತದೆ.

    ವಾತ ಪ್ರಕೃತಿಯವರಿಗೆ ಅನುಕೂಲ: ಬೆಳ್ಳುಳ್ಳಿಯನ್ನು ವಾತ ಮತ್ತು ಕಫ ದೋಷಕ್ಕೆ ಸಂಬಂಧಿಸಿದ ಸಮಸ್ಯೆ ಇರುವವರು ಹಾಗೂ ವಾತ ಮತ್ತು ಕಫ ಪ್ರಕೃತಿಯವರು ಹೆಚ್ಚಾಗಿ ಸೇವನೆ ಮಾಡಿದರೆ ಅನುಕೂಲವಾಗುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಮುಪ್ಪನ್ನು ದೂರ ಮಾಡುತ್ತದೆ. ದೇಹ ಶುದ್ಧಿ ಮಾಡುತ್ತದೆ ಅಂದರೆ ರಕ್ತದಲ್ಲಿರುವ ಕೆಟ್ಟ ರಾಸಾಯನಿಕ ಅಂಶಗಳನ್ನು ಕಡಿಮೆ ಮಾಡುತ್ತದೆ. ಬೆಳ್ಳುಳ್ಳಿಯಲ್ಲಿ ಅಲೀನ್ ಎಂಬ ಅಮೈನೋ ಆಸಿಡ್ ಇರುತ್ತದೆ. ಬೆಳ್ಳುಳ್ಳಿಯನ್ನು ಜಜ್ಜಿ ಕೆಲ ನಿಮಿಷಗಳ ಕಾಲ ವಾತಾವರಣದಲ್ಲಿ ಇಟ್ಟಾಗ ಅದು ಆಲಿಸೀನಾಗಿ ಬದಲಾಗುತ್ತದೆ. ಹೆಚ್ಚಾದ ಕೊಲೆಸ್ಟ್ರಾಲ್, ರಕ್ತನಾಳಗಳು ಕಟ್ಟಿಕೊಳ್ಳುವುದು, ಮಧುಮೇಹ, ಅತಿ ರಕ್ತದೊತ್ತಡ ಮುಂತಾದ ಹಲವಾರು ಸಮಸ್ಯೆಗಳನ್ನು ಇದು ಗುಣಪಡಿಸುತ್ತದೆ ಎಂಬುದು ಸಾಬೀತಾಗಿದೆ. ಈ ಎಲ್ಲ ಕಾರಣಗಳಿಂದಾಗಿ ಇದು ಹೃದಯ ಸಂಬಂಧೀ ಕಾಯಿಲೆಗಳನ್ನು ತಡೆಯುತ್ತದೆ ಮತ್ತು ಗುಣಪಡಿಸುತ್ತದೆ. ನರಗಳ ದೌರ್ಬಲ್ಯವನ್ನು ನಿವಾರಿಸುವ ಶಕ್ತಿಯು ಬೆಳ್ಳುಳ್ಳಿಗಿದೆ ಎಂಬುದು ಸಾಬೀತಾಗಿದೆ.

    ದಿವ್ಯೌಷಧ: ಬೆಳ್ಳುಳ್ಳಿಯು ಧಾತುವರ್ಧಕ, ವೀರ್ಯವರ್ಧಕ, ಜೀರ್ಣಶಕ್ತಿಯನ್ನು ಹೆಚ್ಚಿಸುವಂಥದ್ದು. ಕಂಠಕ್ಕೆ ಹಿತಕಾರಿ, ಬುದ್ಧಿಶಕ್ತಿಯನ್ನು ಹೆಚ್ಚಿಸುವಂಥದ್ದು ಮತ್ತು ಕಣ್ಣುಗಳ ಆರೋಗ್ಯಕ್ಕೆ ಉತ್ತಮವಾದದ್ದು ಎನ್ನುತ್ತದೆ ಆಯುರ್ವೆದ. ಇದಕ್ಕೆ ಉಷ್ಣ ಮತ್ತು ತೀಕ್ಷ್ಣ ಗುಣಗಳಿವೆ; ಅಗ್ನಿವರ್ಧಕ ಗುಣವಿದೆ. ಈ ಎಲ್ಲ ಗುಣಗಳು ಇರುವ ಕಾರಣದಿಂದಾಗಿ ಇದು ಹೃದ್ರೋಗ, ಹೊಟ್ಟೆ ನೋವು, ತುಂಬಾ ದಿನಗಳಿಂದ ಕಾಡುತ್ತಿರುವ ಜ್ವರ, ವಾತವ್ಯಾಧಿಗಳು. ಮೂಲವ್ಯಾಧಿ, ಚರ್ಮ ರೋಗಗಳು, ಅಗ್ನಿಮಾಂದ್ಯ ಮತ್ತು ಕಫಕ್ಕೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಅತ್ಯಂತ ಸಹಾಯಕ ಎಂದು ಆಯುರ್ವೆದ ಗ್ರಂಥಗಳು ಹೇಳುತ್ತವೆ. ಸೊಂಟನೋವು, ಕೈಗಳ ಸೆಳೆತ, ಸಯಾಟಿಕ, ಕಾಲುಗಳಲ್ಲಿ ಬಾವು, ಆರ್ಥ್ರೖರ್ೆಟಿಸ್ ಮುಂತಾದ ಹಲವಾರು ವಾತವ್ಯಾಧಿಗಳಲ್ಲಿ ಇದು ಅತ್ಯಂತ ಪ್ರಯೋಜಕ. ಪದೇ ಪದೇ ಕಾಡುವ ಸೀನು, ನೆಗಡಿ, ಸೈನಸೈಟಿಸ್, ಅಸ್ತಮಾ, ಕಫಯುಕ್ತ ಕೆಮ್ಮು ಮುಂತಾದ ಕಫಕ್ಕೆ ಸಂಬಂಧಿಸಿದ ಬಹುತೇಕ ರೋಗಗಳಲ್ಲಿ ಈ ಬೆಳ್ಳುಳ್ಳಿ ದಿವ್ಯೌಷಧ.

    ಯಾವಾಗ ಪರಿಣಾಮಕಾರಿ?: ಮಳೆಗಾಲದಲ್ಲಿ, ಜೀರ್ಣಶಕ್ತಿ ಕಡಿಮೆ ಇರುವಾಗ, ಹೊಟ್ಟೆ ಉಬ್ಬರ – ಹೊಟ್ಟೆ ನೋವು ಮುಂತಾದ ಸಮಸ್ಯೆಗಳು ಇರುವಾಗ ಬೆಳ್ಳುಳ್ಳಿಯನ್ನು ಹೆಚ್ಚಾಗಿ ಬಳಸಬೇಕು. ಹೊಟ್ಟೆಯಲ್ಲಿ ಗ್ಯಾಸ್ ತುಂಬಿ ಸಮಸ್ಯೆಯನ್ನು ಅನುಭವಿಸುವವರ ಸಂಖ್ಯೆ ಇತ್ತೀಚೆಗೆ ತುಂಬಾ ಜಾಸ್ತಿಯಾಗಿದೆ. ಅಂಥವರು ನಿತ್ಯವೂ ಮೂರ್ನಾಲ್ಕು ಎಸಳು ಬೆಳ್ಳುಳ್ಳಿಯನ್ನು ರಾತ್ರಿ ಊಟದ ಪ್ರಾರಂಭದಲ್ಲಿ ಸೇವಿಸಿದರೆ ತುಂಬಾ ಅನುಕೂಲವಾಗುತ್ತದೆ.

    ಯಾರು ಬಳಸಬಾರದು?: ಉಷ್ಣ ಮತ್ತು ತೀಕ್ಷ್ಣ ಗುಣಗಳ ಕಾರಣದಿಂದಲೇ ಬೆಳ್ಳುಳ್ಳಿ ಇಷ್ಟೆಲ್ಲಾ ಪ್ರಯೋಜನಕಾರಿಯಾದರೂ ಇದೇ ಗುಣಗಳ ಕಾರಣದಿಂದ ಉರಿ ಬೇಸಿಗೆಯಲ್ಲಿ, ಉಷ್ಣತೆಯ ಕಾರಣದಿಂದ ಸಮಸ್ಯೆ ಅನುಭವಿಸುತ್ತಿರುವವರಿಗೆ ಇದು ತೊಂದರೆಯನ್ನು ಉಂಟುಮಾಡುತ್ತದೆ. ಹಾಗಾಗಿ ಉಷ್ಣಕ್ಕೆ ಸಂಬಂಧಿಸಿದ ಸಮಸ್ಯೆ ಇರುವವರು ಬೆಳ್ಳುಳ್ಳಿಯನ್ನು ಸ್ವಲ್ಪ ಎಚ್ಚರಿಕೆಯಿಂದ ಬಳಸಬೇಕು. ಯಾರೇ ಆದರೂ ಹೆಚ್ಚುಹೆಚ್ಚಾಗಿ ಬೆಳ್ಳುಳ್ಳಿಯನ್ನು ಸೇವಿಸುತ್ತಿದ್ದರೆ ಅಂಥವರು ಹೆಚ್ಚಿನ ಪ್ರಮಾಣದಲ್ಲಿ ತುಪ್ಪ, ಮಾಂಸ ಮುಂತಾದ ಒಳ್ಳೆಯ ಕೊಬ್ಬುಗಳನ್ನು ಸೇವಿಸಬೇಕು. ಆರೋಗ್ಯದ ದೃಷ್ಟಿಯಲ್ಲಿ ಬೆಳ್ಳುಳ್ಳಿ ಒಂದು ವರದಾನವೇ ಸರಿ.

    ನೆಲದ ಮೇಲೆ ನೀವು ಕಣ್ಣೀರಿಟ್ಟಾಗ… ಟೀಮ್ ಇಂಡಿಯಾ ಕ್ಯಾಪ್ಟನ್​ಗೆ ಸಲಾಂ ಎಂದ ಪಾಕ್ ಮಾಜಿ ಕ್ರಿಕೆಟಿಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts