More

    ವಿಶ್ವಕಪ್​​​ ಗೆದ್ದ ಬೆನ್ನಲ್ಲೇ ವಿಂಡೀಸ್​ನಲ್ಲಿ ಪಿಚ್​ ಮಣ್ಣು ತಿಂದಿದ್ದೇಕೆ? ರೋಹಿತ್​ ಕೊಟ್ಟ ಉತ್ತರ ವೈರಲ್​…

    ನವದೆಹಲಿ: ಕೋಟ್ಯಂತರ ಭಾರತೀಯರ ಕನಸು ನನಸಾಗಿದೆ. 13 ವರ್ಷಗಳಿಂದ ಕಬ್ಬಿಣದ ಕಡಲೆಯಾಗಿದ್ದ ವಿಶ್ವಕಪ್ ಅನ್ನು ಟೀಮ್​ ಇಂಡಿಯಾ ಕೊನೆಗೂ ಗೆದ್ದುಕೊಂಡಿದೆ. ಜೂನ್​ 29ರಂದು ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಕಿರು ವಿಶ್ವಕಪ್ ಫೈನಲ್ ಪಂದ್ಯದಲ್ಲಿ ರೋಹಿತ್ ಪಡೆ 7 ರನ್​ಗಳ ಜಯ ಸಾಧಿಸಿತು. ಕಳೆದ ವರ್ಷ ಏಕದಿನ ವಿಶ್ವಕಪ್​ ಸೋಲಿನಿಂದ ಆದ ನೋವನ್ನು ಟಿ20 ವಿಶ್ವಕಪ್​ ಮರೆಸಿತು. ಕಪ್​ ಗೆದ್ದ ಹಿನ್ನೆಲೆಯಲ್ಲಿ ನಾಯಕ ರೋಹಿತ್​ ಶರ್ಮ ತುಂಬಾ ಭಾವುಕರಾದರು. ಅಲ್ಲದೆ, ಬಾರ್ಬಡೋಸ್​ ಕ್ರೀಡಾಂಗಣದ ಪಿಚ್​ನಲ್ಲಿನ ಮಣ್ಣನ್ನು ತಿಂದು ಧನ್ಯತಾ ಭಾವ ವ್ಯಕ್ತಪಡಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿದ್ದು ನಿಮಗೆಲ್ಲ ಗೊತ್ತೇ ಇದೆ. ಇದೀಗ ಸ್ವತಃ ರೋಹಿತ್​ ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಮಣ್ಣು ತಿಂದಿದ್ದೇಕೆ ಎಂದು ಉತ್ತರಿಸಿದ್ದಾರೆ.

    ಟಿ20 ವಿಶ್ವಕಪ್​ ಜತೆಗೆ ಫೋಟೋಶೂಟ್ ನಡೆಸಿದ ಬಳಿಕ ನಾಯಕ ರೋಹಿತ್​ ಶರ್ಮ ಸಂದರ್ಶನ ನೀಡಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋವನ್ನು ಬಿಸಿಸಿಐ ತನ್ನ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿದೆ. ವಿಡಿಯೋದಲ್ಲಿ ರೋಹಿತ್ ಅವರು ಬಾರ್ಬಡೋಸ್​ ಮೈದಾನವು ತನಗೆ ಜಯವನ್ನು ನೀಡಿತು ಮತ್ತು ಅದನ್ನು ಜೀವನದುದ್ದಕ್ಕೂ ನೆನಪಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

    ನೋಡಿ, ಆ ವಿಷಯಗಳನ್ನು ನನ್ನಿಂದ ವಿವರಿಸಲು ಸಾಧ್ಯವಿಲ್ಲ ಎಂದು ಭಾವಿಸುತ್ತೇನೆ. ಏಕೆಂದರೆ, ಯಾವುದನ್ನೂ ನಾನು ಸ್ಕ್ರಿಪ್ಟ್ ಮಾಡಿಲ್ಲ. ಇದೆಲ್ಲವೂ ನಿಮಗೆ ತಿಳಿದಿದೆ. ನಾನು ಪಿಚ್‌ಗೆ ಹೋದಾಗ ಆ ಕ್ಷಣವನ್ನು ಅನುಭವಿಸುತ್ತಿದ್ದೆ, ಏಕೆಂದರೆ ನಾವು ಆ ನಿರ್ದಿಷ್ಟ ಪಿಚ್‌ನಲ್ಲಿ ಆಡಿದ್ದೇವೆ ಮತ್ತು ಆ ಮೈದಾನವನ್ನು ನಾನು ಶಾಶ್ವತವಾಗಿ ನೆನಪಿಸಿಕೊಳ್ಳುತ್ತೇನೆ. ಆ ಪಿಚ್ ಅನ್ನು ನನ್ನೊಂದಿಗೆ ಹೊಂದಲು ಬಯಸುತ್ತೇನೆ. ಆ ಕ್ಷಣಗಳು ತುಂಬಾ ವಿಶೇಷವಾದವು ಮತ್ತು ನಮ್ಮ ಎಲ್ಲ ಕನಸುಗಳು ನನಸಾದ ಸ್ಥಳವಾಗಿದೆ. ಹೀಗಾಗಿ ಅಲ್ಲಿನ ಮಣ್ಣನ್ನು ಸವಿದೆ. ನನ್ನ ಜೀವನದುದ್ದಕ್ಕೂ ಪಿಚ್​ನ ಮಣ್ಣಿನ ತುಣುಕನ್ನು ನನ್ನೊಂದಿಗೆ ಇಟ್ಟುಕೊಳ್ಳಲು ಬಯಸಿದ್ದೇನೆ ಎಂದು ರೋಹಿತ್​ ವಿವರಿಸಿದರು.

    ನಾವು ಇದಕ್ಕಾಗಿ (ವಿಶ್ವಕಪ್​) ಬಹಳ ಸಮಯದಿಂದ ಕನಸು ಕಂಡಿದ್ದೇವೆ. ನಾವು ಇಷ್ಟು ದೀರ್ಘಕಾಲ ಒಂದು ಟೀಮ್​ ಆಗಿ ತುಂಬಾ ಶ್ರಮಿಸಿದ್ದೇವೆ ಮತ್ತು ಈಗ ಕಪ್​ ಅನ್ನು ನಮ್ಮೊಂದಿಗೆ ನೋಡಿದಾಗ ಸ್ವಲ್ಪ ಸಮಾಧಾನವಾಗಿದೆ. ಏಕೆಂದರೆ, ನೀವು ಯಾವುದನ್ನಾದರೂ ಕಷ್ಟಪಟ್ಟು ಕೆಲಸ ಮಾಡಿದಾಗ ಮತ್ತು ಅಂತಿಮವಾಗಿ ನೀವು ಅದನ್ನು ಪಡೆದಾಗ, ಅದು ನಿಜವಾಗಿಯೂ ಸಂತೋಷವನ್ನು ನೀಡುತ್ತದೆ ಎಂದು ರೋಹಿತ್ ಹೇಳಿದರು.

    ದ್ವೀಪ ರಾಷ್ಟ್ರದಲ್ಲಿ ಚಂಡಮಾರುತದ ಭೀತಿಯ ನಡುವೆ ರೋಹಿತ್ ಮತ್ತು ಭಾರತ ತಂಡ ಬಾರ್ಬಡೋಸ್‌ನಿಂದ ಹೊರಟು ಬುಧವಾರ ಸಂಜೆಯ ವೇಳೆಗೆ ನವದೆಹಲಿ ತಲುಪುವ ನಿರೀಕ್ಷೆಯಿದೆ. ಭಾರತದಲ್ಲಿ ಟೀಮ್​ ಇಂಡಿಯಾಗೆ ಸನ್ಮಾನ ಮಾಡಲು ಬಿಸಿಸಿಐ ಬಹಳ ಸಿದ್ಧತೆ ಮಾಡಿಕೊಂಡಿದೆ. (ಏಜೆನ್ಸೀಸ್​)

    ಆ ಪ್ರಶಸ್ತಿಗೆ ವಿರಾಟ್​ ಅರ್ಹರಲ್ಲ! ಅದು ನಡೆದಿದ್ರೆ ಭಾರತದ ಪಾಲಿಗೆ ಕೊಹ್ಲಿಯೇ ವಿಲನ್… ಮಾಜಿ ಕ್ರಿಕೆಟಿಗನ ಹೇಳಿಕೆ

    ಆ ಒಂದೊಂದು ಮಾತುಗಳು… ಅಂದು ತನ್ನೊಂದಿಗೆ ರೋಹಿತ್ ಹಂಚಿಕೊಂಡ ವಿಷಯ ಬಿಚ್ಚಿಟ್ಟ ಸೂರ್ಯ

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts