More

    ಅರವಿಂದ್​ಗೆ ಜಾಮೀನು ಸಿಗದಂತೆ ಷಡ್ಯಂತ್ರ ರೂಪಿಸಲಾಗಿದೆ; ಸುನೀತಾ ಕೇಜ್ರಿವಾಲ್​ ಆರೋಪ

    ನವದೆಹಲಿ: ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಕೇಂದ್ರ ತನಿಖಾ ದಳ (ಸಿಬಿಐ) ಬುಧವಾರ ಬಂಧಿಸಿದೆ. ಐದು ದಿನಗಳ ಕಸ್ಟಡಿಗೆ ನೀಡುವಂತೆ ತನಿಖಾ ಸಂಸ್ಥೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದು, ನ್ಯಾಯಾಲಯ ತನ್ನ ತೀರ್ಪನ್ನು ಕಾಯ್ದಿರಿಸಿತ್ತು.

    ಇದನ್ನು ಓದಿ: ವಿರೋಧ ಪಕ್ಷದ ನಾಯಕನಾಗಿ ಸದನದಲ್ಲಿ ರಾಹುಲ್​ ಗಾಂಧಿ ಮೊದಲ ಭಾಷಣ; ಹೇಳಿದ್ದೇನು?

    ಇದೀಗ ಸಿಬಿಐನಿಂದ ಅರವಿಂದ್​​​ ಕೇಜ್ರಿವಾಲ್ ಬಂಧನಕ್ಕೆ ಸಂಬಂಧಿಸಿದಂತೆ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರು, ಇಡೀ ವ್ಯವಸ್ಥೆಯು ತನ್ನ ಪತಿಯನ್ನು ಜೈಲಿನಿಂದ ಹೊರಬರದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಿದೆ. ಇದು ಕಾನೂನು ಅಲ್ಲ. ಇದು ಸರ್ವಾಧಿಕಾರ, ಇದು ತುರ್ತು ಪರಿಸ್ಥಿತಿ ಎಂದು ಆರೋಪಿಸಿದ್ದಾರೆ. ಇದೇ ಸಮಯದಲ್ಲಿ ಆಮ್ ಆದ್ಮಿ ಪಕ್ಷ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್‌ಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಸಿಗುವ ಸಾಧ್ಯತೆ ಇದ್ದಾಗ, ಬಿಜೆಪಿ ಗಾಬರಿಗೊಂಡು ಸಿಬಿಐನಿಂದ ‘ನಕಲಿ ಪ್ರಕರಣ’ದಲ್ಲಿ ಅವರನ್ನು ಬಂಧಿಸಿದೆ ಎಂದು ಹೇಳಿದೆ.

    ಅರವಿಂದ್​ಗೆ ಜಾಮೀನು ಸಿಗದಂತೆ ಷಡ್ಯಂತ್ರ ರೂಪಿಸಲಾಗಿದೆ; ಸುನೀತಾ ಕೇಜ್ರಿವಾಲ್​ ಆರೋಪ

    ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ ಜೈಲಿನಲ್ಲಿದ್ದಾರೆ. ಈ ಬಗ್ಗೆ ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿದೆ. ದೆಹಲಿ ಸಿಎಂ ಅವರನ್ನು ಈ ವರ್ಷದ ಮಾರ್ಚ್ 21 ರಂದು ಇಡಿ ಬಂಧಿಸಿತ್ತು. ಇಡಿಗೆ ಹೈಕೋರ್ಟ್ ಮಧ್ಯಂತರ ಪರಿಹಾರ ನೀಡದಿದ್ದರೆ ಅವರು ತಿಹಾರ್ ಜೈಲಿನಿಂದ ಹೊರಬರಬಹುದಿತ್ತು. ಕೆಳ ನ್ಯಾಯಾಲಯವು ಜೂನ್ 20ರಂದು ಕೇಜ್ರಿವಾಲ್‌ಗೆ ಜಾಮೀನು ಮಂಜೂರು ಮಾಡಿತ್ತು ಮತ್ತು 1 ಲಕ್ಷ ರೂಪಾಯಿಗಳ ವೈಯಕ್ತಿಕ ಬಾಂಡ್‌ನಲ್ಲಿ ಅವರನ್ನು ಬಿಡುಗಡೆ ಮಾಡಲು ಆದೇಶಿಸಿತ್ತು. (ಏಜೆನ್ಸೀಸ್​​)

    ಈ ಒಂದು ಕಾರಣಕ್ಕೆ ನನ್ನ ಮಗನಿಗೆ ಇನ್ನೂ ಮದುವೆಯಾಗಿಲ್ಲ; ಶಾಕಿಂಗ್​ ಹೇಳಿಕೆ ಕೊಟ್ಟ ಸಲ್ಮಾನ್​ ಖಾನ್​​​ ತಂದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts