More

    ನೀಟ್ ಪತ್ರಿಕೆ ಸೋರಿಕೆ ಹಗರಣದ ಪ್ರಮುಖ ಆರೋಪಿ ಅರೆಸ್ಟ್​; ಈತನ ಹಿನ್ನೆಲೆ ಏನು ಗೊತ್ತಾ? ಇಲ್ಲಿದೆ ಡೀಟೇಲ್ಸ್​

    ಪಾಟ್ನಾ: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ (NEET) ಪ್ರಶ್ನೆಪತ್ರಿಕೆ ಸೋರಿಕೆಯ ತನಿಖೆ ನೇತೃತ್ವ ವಹಿಸಿರುವ ಬಿಹಾರ ಪೋಲೀಸ್‌ನ ಆರ್ಥಿಕ ಅಪರಾಧಗಳ ಘಟಕ (EOU) ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಅಕ್ರಮವಾಗಿ ವಿತರಿಸಿದ ಪ್ರಮುಖ ಶಂಕಿತ ಆರೋಪಿ ಸಿಕಂದರ್ ಯಡ್ವೆಂದು ಬಂಧಿಸಿದೆ.
    ಈ ಸಿಕಂದರ್​​ ಡಣಾಪುರ ಪುರಸಭೆ ಸಮಿತಿಯಲ್ಲಿ ಜೂನಿಯರ್ ಇಂಜಿನಿಯರ್ ಆಗಿದ್ದು, ಪೇಪರ್ ಸೋರಿಕೆ ಪ್ರಕರಣದಲ್ಲಿ ಪ್ರಮುಖ ಶಂಕಿತ ಆರೋಪಿಯಾಗಿ ಗುರುತಿಸಲಾಗಿದೆ. 56 ವರ್ಷದ ಈತ ರೈತ ಕುಟುಂಬದಿಂದ ಬಂದವನಾಗಿದ್ದು 2012ರವರೆಗೆ ಸಣ್ಣ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.

    ಇದನ್ನು ಓದಿ: ನೀಟ್​​​ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ; 13 ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು

    ಪಾಟ್ನಾದ ದಾನಪುರದ ರೂಪಾಸ್‌ಪುರದಲ್ಲಿ ಬಾಡಿಗೆ ಫ್ಲಾಟ್‌ನಲ್ಲಿ ವಾಸಿಸುತ್ತಿರುವ ಯಡ್ವೆಂದು ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾವನ್ನು ಪಡೆದಿದ್ದು, ದಶಕಕ್ಕೂ ಹೆಚ್ಚು ಕಾಲ ಗುತ್ತಿಗೆದಾರರಾಗಿ ಕೆಲಸ ಮಾಡಿದ್ದಾನೆ. ಯಡ್ವೆಂದು ಅವರ ತಂದೆ ಕೃಷಿಕರಾಗಿದ್ದರು ಮತ್ತು ಅವರ ಕುಟುಂಬವು ಬಿಹಾರದ ಸಮಸ್ತಿಪುರದಲ್ಲಿದೆ. 1980ರ ದಶಕದಲ್ಲಿ 10ನೇ ತರಗತಿಯನ್ನು ಮುಗಿಸಿದ ನಂತರ, ಅವರು ಹೆಚ್ಚಿನ ಅಧ್ಯಯನಕ್ಕಾಗಿ ರಾಂಚಿಗೆ ತೆರಳಿ ಡಿಪ್ಲೊಮಾ ಪದವಿ ಪಡೆದಿದ್ದಾನೆ.

    2012ರಲ್ಲಿ ಬಿಹಾರದಲ್ಲಿ ನ್ಯಾಶನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್‌ಡಿಎ) ಅಧಿಕಾರದಲ್ಲಿದ್ದಾಗ ಯಡ್ವೆಂದುಗೆ ರಾಜ್ಯದ ಜಲಸಂಪನ್ಮೂಲ ಇಲಾಖೆಯಲ್ಲಿ ಜೂನಿಯರ್ ಇಂಜಿನಿಯರ್ ಆಗಿ ಕೆಲಸ ಸಿಕ್ಕಿತು. 2016ರಲ್ಲಿ ಯಡ್ವೆಂದು ಉಸ್ತುವಾರಿ ವಹಿಸಿದ್ದ ರೋಹ್ತಾಸ್ ಮುನ್ಸಿಪಲ್ ಕೌನ್ಸಿಲ್‌ನಲ್ಲಿ 2.92 ಕೋಟಿ ರೂಪಾಯಿ ಎಲ್‌ಇಡಿ ಹಗರಣದಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಅದಷ್ಟೆ ಅಲ್ಲದೆ ದಾಲ್ಮಿಯಾ ನಗರಕ್ಕೆ ದುಬಾರಿ ಬೆಲೆಗೆ ಎಲ್‌ಇಡಿ ಖರೀದಿಸಿದ್ದಾನೆ ಎಂದು ಆರೋಪಿಸಲಾಗಿದೆ. ಅವರನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು ಇಂಡಿಯನ್ ಎಕ್ಸ್ ಪ್ರೆಸ್ ವರದಿಯಲ್ಲಿ ತಿಳಿಸಿದೆ.

    ಮೇ 1 ರಂದು ತೇಜಸ್ವಿ ಯಾದವ್ ಅವರ ಆಪ್ತ ಕಾರ್ಯದರ್ಶಿ ಪ್ರೀತಮ್ ಕುಮಾರ್ ಅವರು ರಾಂಚಿಯಲ್ಲಿ ಸಿಕಂದರ್​ಗೆ ಕೊಠಡಿಯನ್ನು ಕಾಯ್ದಿರಿಸಲು ಅತಿಥಿಗೃಹದ ಕೆಲಸಗಾರ ಪ್ರದೀಪ್ ಕುಮಾರ್ ಅವರನ್ನು ಸಂಪರ್ಕಿಸಿದ್ದಾರೆ. ಮೇ 4 ರಂದು ಎನ್‌ಎಚ್‌ಎಐ ಗೆಸ್ಟ್ ಹೌಸ್‌ನಲ್ಲಿ ಕೊಠಡಿ ಕಾಯ್ದಿರಿಸಲು ಪ್ರದೀಪ್ ಕುಮಾರ್ ಅವರಿಗೆ ಪ್ರೀತಮ್ ಕುಮಾರ್ ಮತ್ತೆ ಕರೆ ಮಾಡಿದ್ದರು. ಆ ವೇಳೆ ತೇಜಸ್ವಿ ಅವರ ಮಂತ್ರಿ ಪದವಿಯನ್ನು ಬಳಸಿದ್ದಾರೆ ಎನ್ನಲಾಗಿದೆ. ನೀಟ್​​ ಯುಜಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಮತ್ತು ಉತ್ತರಗಳನ್ನು ಮೇ 5ರಂದು ಪಡೆಯಲಾಯಿತು ಎಂದು ಬಂಧಿತರು ಹೇಳಿದ್ದಾರೆ. ಪ್ರೀತಮ್ ಕುಮಾರ್ ಇನ್ನೂ ತಮ್ಮ ಪಿಎಸ್ ಆಗಿದ್ದಾರೆಯೇ ಎಂದು ತೇಜಸ್ವಿ ಯಾದವ್ ಅವರು ಸ್ಪಷ್ಟಪಡಿಸಬೇಕಿದೆ. (ಏಜೆನ್ಸೀಸ್​​)

    ಚಂದ್ರಬಾಬು ನಾಯ್ಡು ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ ಎಂದಿದ್ದೇಕೆ ಜಗನ್​ ಮೋಹನ್​ ರೆಡ್ಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts