More

    ಜನತಾ ಕರ್ಫ್ಯೂ ಪರಿಣಾಮಕಾರಿ ಎಂದ ವಿಶ್ವ ಆರೋಗ್ಯ ಸಂಸ್ಥೆ : ನಮ್ಮ ದೇಶದ ಪ್ರಧಾನಿಯವರ ನಡೆಯ ಬಗ್ಗೆ ಪ್ರಶಂಸೆ

    ನವದೆಹಲಿ: ಕರೊನಾ ವೈರಸ್ Covid19 ಸೋಂಕು ಹರಡದಂತೆ ತಡೆಯುವ ಸಲುವಾಗಿ ಭಾರತ ಸರ್ಕಾರ ಕೈಗೊಂಡಿರುವ ಪರಿಣಾಮಕಾರಿ ಕ್ರಮಗಳನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಶಂಸಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ರಾತ್ರಿ 8 ಗಂಟೆಗೆ ದೇಶವಾಸಿಗಳನ್ನು ಉದ್ದೇಶಿಸಿ ಅರ್ಧ ಗಂಟೆ ಮಾತನಾಡಿದ್ದು, ಜನತಾ ಕರ್ಫ್ಯೂ ಆಚರಿಸಬೇಕು ಎಂಬ ಬೇಡಿಕೆ ಮುಂದಿರಿಸಿದ ನಡೆಯ ಬಗ್ಗೆಯೂ ಅದು ಮೆಚ್ಚುಗೆ ವ್ಯಕ್ತಪಡಿಸಿದೆ.

    ವಿಶ್ವ ಆರೋಗ್ಯ ಸಂಸ್ಥೆಯ ಭಾರತದಲ್ಲಿನ ಪ್ರತಿನಿಧಿ ಹೆಂಕ್​ ಬೆಕೆಡಮ್​ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಪ್ರಧಾನಮಂತ್ರಿಯವರು ಜನತಾ ಕರ್ಫ್ಯೂ ಆಚರಣೆಗೆ ಕರೆನೀಡಿದ್ದನ್ನು ಸ್ವಾಗತಿಸುತ್ತೇವೆ. ಅದೇ ರೀತಿ ಸೋಷಿಯಲ್ ಡಿಸ್ಟೆನ್ಸಿಂಗ್​ ಅನ್ವಯಿಸುವ ರೀತಿಯೂ ಪ್ರಶಂಸನೀಯ. ವೈರಸ್ ಹರಡುವುದನ್ನು ತಡೆಯಲು ದೀರ್ಘಕಾಲದ ತಂತ್ರಗಾರಿಕೆಯೂ ಅವಶ್ಯವಾಗಿದೆ.

    ಕೈಗಳ ಶುಚಿತ್ವ ಕಾಪಾಡುವುದು, ಕೆಮ್ಮುವಾಗ ಮತ್ತು ಸೀನುವಾಗ ಕೈಗಳ ತೋಳುಗಳನ್ನು ಮುಖದ ಹತ್ತಿರ ತಂದು ತಡೆಯೊಡ್ಡುವುದು ಸೇರಿ ಎಲ್ಲ ಕ್ರಮಗಳು ಕೂಡ ಪರಿಣಾಮಕಾರಿ. ಇದರ ಜತೆಗೆ ಸೋಷಿಯಲ್ ಡಿಸ್ಟೆನ್ಸಿಂಗ್ ಬಗ್ಗೆ ಜಾಗೃತಿ ಮೂಡಿಸುವುದು ಕೂಡ ಪ್ರಶಂಸಾರ್ಹ ನಡೆ. ನಾವು ಇವೆಲ್ಲವನ್ನೂ ಪಾಲಿಸಿಕೊಂಡು ಈ ಸಂಕಷ್ಟದ ಪರಿಸ್ಥಿತಿಯಿಂದ ಹೊರಬರಲು ಒಗ್ಗಟ್ಟನ್ನು ಪ್ರದರ್ಶಿಸಬೇಕಾದ್ದು ಕೂಡ ಅತೀ ಅವಶ್ಯ ಎಂದು ಬೆಕೆಡಮ್ ಹೇಳಿದ್ದಾರೆ. (ಏಜೆನ್ಸೀಸ್)

     

    ಕರೊನಾ ವೈರಸ್ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧವಾಗಿದೆ ವಾಟ್ಸ್​ಆ್ಯಪ್​ ಚಾಟ್​ಬೋಟ್: ಹೆಸರು MyGov Corona Helpdesk

     

    ಕರೋನಾ ವೈರಸ್​: ರಾಜ್ಯಗಳ ಸಹಾಯವಾಣಿ ಸಂಖ್ಯೆಗಳ ಬಗ್ಗೆ ತಿಳಿದುಕೊಂಡಿರಿ..

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts