More

    ಹೆಚ್ಚುವರಿ ಹಾಲು ಎಲ್ಲಿಗೆ ಚೆಲಲ್ಲಿ..?; ಸಿಎಂ ಪ್ರಶ್ನೆ

    ಬೆಂಗಳೂರು: ಹಾಲು ಮಹಾಮಂಡಳವು ಹೆಚ್ಚುವರಿ ಹಾಲು ನೀಡುವ ಪ್ರಸ್ತಾವನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಾಲಿನ ದರ ಹೆಚ್ಚಳ ಮಾಡಿಲ್ಲ. ಹೆಚ್ಚುವರಿ ನೀಡುವ ಹಾಲಿನಿಂದ ದರ ಪರಿಷ್ಕರಣೆಯಾಗಿದೆಯಷ್ಟೆ. ಈಗ 99 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ರೈತರು ಉತ್ಪಾದನೆ ಮಾಡುವ ಹಾಲು ಖರೀದಿಸಲೇಬೇಕು. ನಾವು ಬೇಡ ಎಂದು ಹೇಳಲು ಆಗಲ್ಲ ಎಂದರು.
    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್ಚುವರಿ ಸಂಗ್ರಹವಾಗುವ ಹಾಲನ್ನು ಎಲ್ಲಿಗೆ ಚೆಲಲ್ಲಿ..? ಹಾಲನ್ನು ರೈತರಿಂದ ಕೊಂಡುಕೊಳ್ಳಲ್ಲ ಎಂದು ಹೇಳಲು ಸಾಧ್ಯವೇ? ಎಂದರು.
    ಹೋದ ವರ್ಷ ಇದೇ ಸಂದರ್ಭದಲ್ಲಿ 90 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗಿತ್ತು, ಈ ಬಾರಿ ಅಂದಾಜು 10 ಲಕ್ಷ ಲೀಟರ್ ಹೆಚ್ಚು ಉತ್ಪಾದನೆಯಾಗುತ್ತಿದೆ. ಅದಕ್ಕೋಸ್ಕರ ಅರ್ಧ ಲೀಟರ್‌ನಲ್ಲಿ 50 ಮಿಲೀ ಲೀಟರ್ ಹೆಚ್ಚುವರಿಯಾಗಿ ನೀಡುತ್ತಿದ್ದೇವೆ. ಪ್ರಮಾಣ ಹೆಚ್ಚಾಗುತ್ತಿದ್ದಂತೆ ಅದಕ್ಕೆ ತಕ್ಕಂತೆ ಬೆಲೆ ಹೆಚ್ಚು ಮಾಡಿದ್ದೇವೆ. 50 ಮೀಲಿ ಲೀಟರ್‌ಗೆ 2 ರೂ.10 ಪೈಸೆ ಮಾಡಿದ್ದೇವೆ. ಎಲ್ಲಪ್ಪ ಹಾಲಿನ ದರ ಹೆಚ್ಚಳ ಮಾಡಿದ್ದೇವೆ…? ಬಿಜೆಯವರು ಹೇಳುತ್ತಾರೆಂದು ನೀವು ಕೇಳೋಕೆ ಹೋಗಬೇಡಿ ಎಂದು ಹೇಳಿದರು.
    ಹೋಟೆಲ್‌ನವರು ದರ ಹೆಚ್ಚಳ ಮಾಡಲು ನಿರ್ಧರಿಸಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿಎಂ, ಕಾಫಿ, ಟೀ ರೇಟು ಜಾಸ್ತಿ ಮಾಡಿದ್ದಾರಾ..? ಕಾಫಿ – ಟೀ ರೇಟು ಜಾಸ್ತಿ ಮಾಡಲ್ಲ.. ನೋ ನೋ ಹೇಗೆ ಜಾಸ್ತಿ ಮಾಡ್ತಾರೆ. ಹಾಲಿನ ದರ ಹೆಚ್ಚಳ ಮಾಡಿದರೆ ತಾನೇ ಹೆಚ್ಚಿಗೆ ಮಾಡೋದು. ಎಂದರು.
    ಇದೇ ವಿಚಾರವಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಬಿಜೆಪಿಯವರು ರೈತರ ವಿರೋಧಿಗಳು. ಎರಡು ರೂಪಾಯಿ ಜಾಸ್ತಿ ರೈತರಿಗೆ ತಲುಪುತ್ತದೆ. ಕೆಎಮ್ಎಫ್ ಉಳಿದರೆ ರೈತರು ಉಳಿದ ಹಾಗೆ, ರೈತರಿಗೋಸ್ಕರ ಇನ್ನು ಜಾಸ್ತಿ ಮಾಡಬೇಕಿತ್ತು. ಅದು ರೈತರಿಗೆ ತಲುಪುತ್ತದೆ ಎಂದರು.
    ಬಿಜೆಪಿಯವರ ರೈತ ವಿರೋಧಿ ಧೋರಣೆ ಇದರಿಂದ ಎದ್ದು ಕಾಣುತ್ತದೆ. ಬೇರೆ ರಾಜ್ಯದಲ್ಲಿ ಹಾಲಿನ ದರ ಎಷ್ಟಿದೆ ನೋಡಲಿ, ಮಾಹಿತಿ ತರಿಸಿಕೊಳ್ಳಲಿ ಎಂದು ಸವಾಲು ಹಾಕಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts