More

    ಈಗ ಎಲ್ಲೆಲ್ಲಿದ್ದಾರೆ 2007ರ ಟಿ20 ವಿಶ್ವ ಚಾಂಪಿಯನ್​ ತಂಡದ ಆಟಗಾರರು?

    ಬೆಂಗಳೂರು: ಭಾರತ ತಂಡ 2007ರಲ್ಲಿ ಚೊಚ್ಚಲ ಆವೃತ್ತಿಯಲ್ಲೇ ಟಿ20 ವಿಶ್ವಕಪ್​ ಗೆದ್ದಾಗ ಚುಟುಕು ಕ್ರಿಕೆಟ್​ ಇನ್ನೂ ಹೊಸ ಕ್ರಿಕೆಟ್​ ಪ್ರಕಾರವಾಗಿತ್ತು. ಆದರೂ ಆಗಿನ ಯುವ ತಂಡ ಎಲ್ಲರ ನಿರೀಕ್ಷೆ ಮೀರಿಸಿ ವಿಶ್ವ ಚಾಂಪಿಯನ್​ ಪಟ್ಟವೇರಿತ್ತು. ನಂತರ 2ನೇ ವಿಶ್ವಕಪ್​ ಕಿರೀಟಕ್ಕಾಗಿ ಭಾರತ ಬರೋಬ್ಬರಿ 17 ವರ್ಷಗಳ ಕಾಲ ಕಾಯಬೇಕಾಯಿತು. 2007ರ ಸೆಪ್ಟೆಂಬರ್​ 24ರಂದು ಜೊಹಾನ್ಸ್​ರ್ಬಗ್​ನಲ್ಲಿ ಪಾಕಿಸ್ತಾನ ವಿರುದ್ಧದ ಫೈನಲ್​ನಲ್ಲಿ 5 ರನ್​ಗಳಿಂದ ಗೆದ್ದು ವಿಶ್ವ ಕಿರೀಟಕ್ಕೆ ಮುತ್ತಿಟ್ಟ ತಂಡದ ಆಟಗಾರರು ಈಗ ಎಲ್ಲೆಲ್ಲಿದ್ದಾರೆ ಗೊತ್ತೇ?

    2007ರ ವಿಶ್ವಕಪ್​ ವಿಜೇತ ತಂಡದ ನಾಯಕ ಎಂಎಸ್​ ಧೋನಿ ಈಗಾಗಲೆ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ್ದು, ಮುಂದಿನ ಐಪಿಎಲ್​ನಲ್ಲಿ ಮತ್ತೆ ಕಣಕ್ಕಿಳಿಯುವ ಬಗ್ಗೆ ಅವರೀಗ ರಾಂಚಿಯ ಮನೆಯಲ್ಲಿ ಚಿಂತನೆ ನಡೆಸುತ್ತಿದ್ದಾರೆ. 2007ರ ವಿಶ್ವಕಪ್​ನಲ್ಲಿ ಟಿ20 ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಆಗಿನ ಯುವ ಆಟಗಾರ ರೋಹಿತ್​ ಶರ್ಮ 17 ವರ್ಷಗಳ ಬಳಿಕ ಭಾರತ ಮತ್ತೆ ವಿಶ್ವಕಪ್​ ಗೆದ್ದಾಗ ನಾಯಕರಾಗಿರುವುದು ವಿಶೇಷ. ಆಗಿನ ಪ್ರಮುಖ ಆಟಗಾರ ಯುವರಾಜ್​ ಸಿಂಗ್​ ಈ ಸಲದ ವಿಶ್ವಕಪ್​ನಲ್ಲಿ ಪ್ರಚಾರ ರಾಯಭಾರಿಯಾಗಿದ್ದರು. ಆಗಿನ ಫೈನಲ್​ ಗರಿಷ್ಠ ರನ್​ ಸಾಧಕ ಗೌತಮ್​ ಗಂಭೀರ್​ ಇದೀಗ ಟೀಮ್​ ಇಂಡಿಯಾದ ಮುಂದಿನ ಕೋಚ್​ ಆಗುವ ಸಿದ್ಧತೆಯಲ್ಲಿದ್ದಾರೆ. ಆಗಿನ ವೇಗಿ ಅಜಿತ್​ ಅಗರ್ಕರ್​ ಈಗ ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದಾರೆ.

    ಫೈನಲ್​ನಲ್ಲೇ ಭಾರತ ಪರ ಪದಾರ್ಪಣೆ ಮಾಡಿದ್ದ ಯೂಸುಫ್​ ಪಠಾಣ್​ ಇತ್ತೀಚೆಗೆ ಲೋಕಸಭಾ ಚುಣಾವಣೆ ಗೆದ್ದು ಸಂಸದರಾಗಿದ್ದರೆ, ಹರ್ಭಜನ್​ ಸಿಂಗ್​ ರಾಜ್ಯಸಭಾ ಸದಸ್ಯರಾಗಿದ್ದಾರೆ. ಇನ್ನು ದಿನೇಶ್​ ಕಾರ್ತಿಕ್​, ಇರ್ಫಾನ್​ ಪಠಾಣ್​, ವೀರೇಂದ್ರ ಸೆಹ್ವಾಗ್​, ರಾಬಿನ್​ ಉತ್ತಪ್ಪ, ಆರ್​ಪಿ ಸಿಂಗ್​, ಎಸ್​. ಶ್ರೀಶಾಂತ್​ ಸದ್ಯ ವೀಕ್ಷಕವಿವರಣೆಯಲ್ಲಿ ತೊಡಗಿಸಿಕೊಂಡಿದ್ದರೆ, ಪೀಯುಷ್​ ಚಾವ್ಲಾ ಈಗಲೂ ಐಪಿಎಲ್​ ಆಟಗಾರರಾಗಿದ್ದಾರೆ. ಆಗಿನ ಫೈನಲ್​ನಲ್ಲಿ ಕೊನೇ ಓವರ್​ ಎಸೆದಿದ್ದ ಜೋಗಿಂದರ್​ ಶರ್ಮ ಈಗ ಹರಿಯಾಣ ಪೊಲೀಸ್​ ಇಲಾಖೆಯಲ್ಲಿ ಡಿಎಸ್​ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಟಿ20 ವಿಶ್ವಕಪ್​ ವಿಜೇತ ಭಾರತ ತಂಡಕ್ಕೆ ಬಂಪರ್​ ಬಹುಮಾನ ಘೋಷಿಸಿದ ಬಿಸಿಸಿಐ!

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts