More

    ಟಿ20 ವಿಶ್ವಕಪ್​ ಫೈನಲ್​ಗೆ ಮಳೆ ಭೀತಿ; ಪಂದ್ಯ ರದ್ದಾದರೆ ಯಾರು ವಿನ್ನರ್? ಐಸಿಸಿ ನಿಯಮವೇನು?

    ಬಾರ್ಬಡೋಸ್​: ಇಲ್ಲಿನ ಕೆನ್ಸಿಂಗ್​ಟೆನ್​ ಓವಲ್​ ಕ್ರೀಡಾಂಗಣದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನ ಫೈನಲ್​ ಪಂದ್ಯದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಲಿದ್ದು, ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8 ಗಂಟೆ ಸುಮಾರಿಗೆ ಶುರುವಾಗಲಿದೆ. ಟೂರ್ನಿಯುದ್ದಕ್ಕೂ ಮಳೆ ನಿರಂತರವಾಗಿ ಕಾಡುತ್ತ ಬಂದಿದ್ದು, ಫಲಿತಾಂಶಗಳನ್ನು ಏರುಪೇರು ಮಾಡುತ್ತ ಬಂದಿರುವ ಮಳೆ ಈ ಮಹತ್ವದ ಪಂದ್ಯಕ್ಕೂ ಅಡಚಣೆ ತರುವ ಭೀತಿ ಎದುರಾಗಿದೆ. ಭಾರಿ ಮಳೆಯಿಂದಾಗಿ ಪಂದ್ಯ ರದ್ದಾದರೂ ಅಚ್ಚರಿ ಇಲ್ಲ ಎಂದು ವರದಿಯಾಗಿದೆ.

    ಟೀಮ್​ ಇಂಡಿಯಾ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿದ್ದರೆ, ಮತ್ತೊಂದೆಡೆ ದಕ್ಷಿಣ ಆಫ್ರಿಕಾ ತಂಡ ಅಫ್ಘಾನಿಸ್ತಾನವನ್ನು ಸೋಲಿಸಿ ಫೈನಲ್‌ಗೆ ತಲುಪಿದೆ. ಇದೀಗ ಈ ಎರಡೂ ತಂಡಗಳು ವಿಶ್ವಕಪ್‌ನ ಫೈನಲ್‌ನಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಲಿವೆ. ಸೆಮಿಫೈನಲ್ ಪಂದ್ಯಗಳಂತೆಯೇ ಫೈನಲ್ ಪಂದ್ಯದ ಮೇಲೂ ಮಳೆಯ ಛಾಯೆ ಆವರಿಸಿದೆ. ಫೈನಲ್ ಪಂದ್ಯದ ದಿನದಂದು ಬಾರ್ಬಡೋಸ್‌ನಲ್ಲಿನ ಹವಾಮಾನದ ಕುರಿತು ದೊಡ್ಡ ಅಪ್​ಡೇಟ್ ಹೊರಬಂದಿದೆ. ಬಾರ್ಬಡೋಸ್​ನಲ್ಲಿ ಶನಿವಾರ (ಜೂನ್ 29) ಶೇ.70 ರಷ್ಟು ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ಪಂದ್ಯಕ್ಕೆ ಮಳೆರಾಯ ಅಡ್ಡಿಪಡಿಸುವುದು ಖಚಿತವಾಗಿದೆ.

    ಇದನ್ನೂ ಓದಿ: ವಿಶ್ವಕಪ್​ನಲ್ಲಿ ಭಾರತಕ್ಕಾಗಿ ಪ್ರತ್ಯೇಕ ರೂಲ್ಸ್​ ಮಾಡಲಾಗಿದೆ; ಬಿಸಿಸಿಐ ವಿರುದ್ಧ ಗಂಭೀರ ಆರೋಪ ಮಾಡಿದ ಪಾಕ್​ ಮಾಜಿ ನಾಯಕ

    ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟಿ20 ವಿಶ್ವಕಪ್​​ ಫೈನಲ್​ಗೆ ಮಳೆ ಅಡ್ಡಿಪಡಿಸಿ ಪಂದ್ಯ ರದ್ದಾದರೆ ಮಾರನೇ ದಿನ ಅಂದರೆ, ಜೂನ್​ 30ರಂದು ಪಂದ್ಯ ನಡೆಯಲಿದೆ. ಇದಲ್ಲದೆ ಫೈನಲ್ ಪಂದ್ಯಕ್ಕೆ 190 ನಿಮಿಷಗಳ ಹೆಚ್ಚುವರಿ ಸಮಯವನ್ನು ಕೂಡ ಇರಿಸಲಾಗಿದೆ. ಇದರ ಹೊರತಾಗಿಯೂ, ಮೀಸಲು ದಿನದಂದು ಮಳೆ ಅಡ್ಡಿಪಡಿಸಿದರೆ ಬಾರತ ಹಾಗೂ ಆಫ್ರಿಕಾ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಗುತ್ತದೆ.

    ಏಕೆಂದರೆ 09ನೇ ಆವೃತ್ತಿಯ ಚುಟುಕು ವಿಶ್ವಸಮರದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಅಜೇಯವಾಗಿ ಫೈನಲ್​ ಪ್ರವೇಶಿಸಿದ್ದು, ಟೀಮ್​ ಇಂಡಿಯಾ ತಾನಾಡಿರುವ 8 ಪಂದ್ಯಗಳ ಪೈಕಿ 7 ರಲ್ಲಿ ಜಯಿಸಿದೆ. ಒಂದು ಪಂದ್ಯ ಮಳೆಯಿಂದಾಗಿ ರದ್ದುಗೊಂಡಿದೆ. ದಕ್ಷಿಣ ಆಫ್ರಿಕಾ ತಂಡವು ತಾನಾಡಿರುವ 8 ಪಂದ್ಯಗಳಲ್ಲಿ ಜಯಗಳಿಸಿದ್ದು, ಅಜೇಯವಾಗಿ ಫೈನಲ್​ಗೆ ಲಗ್ಗೆಇಟ್ಟಿದೆ. ಟೀಮ್​ ಇಂಡಿಯಾ ಮೂರನೇ ಬಾರಿಗೆ ಫೈನಲ್​ ಪ್ರವೇಶಿಸಿದ್ದು, ದಕ್ಷಿಣ ಆಫ್ರಿಕಾ ಇದೇ ಮೊದಲ ಬಾರಿಗೆ ಫೈನಲ್​ ಪ್ರವೇಶಿಸಿದ್ದು, ಕಪ್​ ಗೆದ್ದು ಚೋಕರ್ಸ್​ ಎಂಬ ಹಣೆಪಟ್ಟಿಯನ್ನು ಕಳಚಿಕೊಳ್ಳುವ ಆಸೆಯಲ್ಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts