More

    ಚಾಪೆ ಮೇಲೆ ‘ದಾಸ’ ಅರೆನಿದ್ರೆ; ಜೈಲಿನಲ್ಲಿ ದರ್ಶನ್​ಗೆ ಏನೆಲ್ಲ ವ್ಯವಸ್ಥೆಗಳಿವೆ?

    ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಆಕೆಯ ಸ್ನೇಹಿತೆ ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಆರೋಪಿಗಳನ್ನು ಬಂಧಿಸಿದ ಬೆಂಗಳೂರು ಪೊಲೀಸರು, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಮೊದಲು ಪವಿತ್ರಾರನ್ನು ಜೈಲಿಗೆ ಕಳುಹಿಸಿದ ನ್ಯಾಯಾಲಯ, ಅವರ ಬೆನ್ನಲ್ಲೇ ದರ್ಶನ್​ ಮತ್ತು ಇತರರನ್ನು ಪರಪ್ಪನ ಅಗ್ರಹಾರಕ್ಕೆ ಜೈಲುವಾಸ ಅನುಭವಿಸುವಂತೆ ಆದೇಶಿಸಿತು. ಪ್ರಸ್ತುತ ಸೆರೆಮನೆಯಲ್ಲಿರುವ ಆರೋಪಿ ದರ್ಶನ್​ಗೆ ಅಲ್ಲಿನ ಯಾವುದೇ ವ್ಯವಸ್ಥೆ ಹೊಂದುತ್ತಿಲ್ಲ.

    ಇದನ್ನೂ ಓದಿ: ಅಂತಾರಾಷ್ಟ್ರೀಯ ಯೋಗಾ ದಿನಾಚರಣೆಯ ಜಾಥಾ ಕಾರ್ಯಕ್ರಮ.

    ಪರಪ್ಪನ ಅಗ್ರಹಾರಕ್ಕೆ ಹೋಗುವ ಮುನ್ನ ತಮ್ಮ ನೆಚ್ಚಿನ ನಟನನ್ನು ಕಾಣಲು ಅಭಿಮಾನಿಗಳು ಮುಗಿಬಿದ್ದು, ರಸ್ತೆ ರಸ್ತೆಗಳಲ್ಲಿ ಕಾದು ಕುಳಿತ್ತಿದ್ದರು. ಈಗ ಜೈಲಿಗೆ ಹೋಗುತ್ತಿದ್ದಂತೆ ಜೈಲಿನ ಬಳಿಯೂ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸುತ್ತಿರುವ ಅಭಿಮಾನಿಗಳು, ದರ್ಶನ್​ರನ್ನು ನೋಡಲು ಕಾತರ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಜೈಲಿನ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಪ್ರಸಂಗವೂ ನಡೆದಿದೆ. ಇನ್ನು ಜೈಲಿನ ಆವರಣಕ್ಕೆ ಎಂಟ್ರಿ ಕೊಡುವ 100 ಮೀಟರ್ ದೂರದಲ್ಲೇ ಬ್ಯಾರಿಕೇಡ್ ಅಳವಡಿಸಿ ಅಭಿಮಾನಿಗಳು ಒಳಗೆ ಬಾರದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

    ಇದನ್ನೂ ಓದಿ: ರೇಣುಕಾಸ್ವಾಮಿ ಹೆಸರಲ್ಲಿ ಸಿಮ್​ ಖರೀದಿಸಿದ್ದೇಕೆ ಪೊಲೀಸರು? ಡಿ-ಗ್ಯಾಂಗ್​ಗೆ ಕಾದಿದೆ ಮತ್ತಷ್ಟು ಸಂಕಷ್ಟ! 

    ಜೈಲಿನ ಮೂರನೇ ಸೆಕ್ಟರ್ ಭಾಗದಲ್ಲಿ ಇರುವ ಭದ್ರತಾ ವಿಭಾಗದ ಕೊಠಡಿಯನ್ನು ದರ್ಶನ್​ಗೆ ನೀಡಲಾಗಿದ್ದು, ಮಲಗಲು ಚಾಪೆ ಹಾಗೂ ಬೆಡ್ ಶೀಟ್ ನೀಡಲಾಗಿದೆ. ದರ್ಶನ್ ಇರುವ ಕೊಠಡಿಯಲ್ಲಿ ಟಿವಿ ಸೇರಿ ಬೇರೆ ಯಾವುದೇ ವ್ಯವಸ್ಥೆ ಸಹ ಇಲ್ಲ. ಹೊರಗಿನ ಖೈದಿಗಳಿಗೆ ಇಲ್ಲಿ ಬರಲು ಅವಕಾಶವಿಲ್ಲ. ಭದ್ರತಾ ವಿಭಾಗದ ಸಿಬ್ಬಂದಿ ಹಾಗೂ ಖೈದಿಗಳಿಗೆ ಅಷ್ಟೇ ಅವಕಾಶ ನೀಡಲಾಗಿದೆ. ಭದ್ರತಾ ವಿಭಾಗದ ಸುತ್ತಮುತ್ತ ಯಾವಾಗಲೂ ಪೊಲೀಸ್ ಕಣ್ಗಾವಲು ಇರಿಸಲಾಗಿದೆ. ದರ್ಶನ್ ಭೇಟಿಗೆ ಬಂದವರನ್ನು ಜೈಲು ಸಿಬ್ಬಂದಿ ಕರೆದೊಯ್ದು ಭೇಟಿ ಮಾಡಿಸುವ ಸಾಧ್ಯತೆಗಳಿವೆ.

    ರೇಣುಕಾಸ್ವಾಮಿ ಹೆಸರಲ್ಲಿ ಸಿಮ್​ ಖರೀದಿಸಿದ್ದೇಕೆ ಪೊಲೀಸರು? ಡಿ-ಗ್ಯಾಂಗ್​ಗೆ ಕಾದಿದೆ ಮತ್ತಷ್ಟು ಸಂಕಷ್ಟ!

    ಭಾರತದ ಹೆಡ್​ ಕೋಚ್​ ಆಗುವುದಾದರೆ… ಗೌತಮ್ ಗಂಭೀರ್​ ಮುಂದಿಟ್ಟ 5 ಬೇಡಿಕೆಗಳಿಗೆ ದಂಗಾದ ಬಿಸಿಸಿಐ

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts