ಇರಾನ್ ಯುದ್ಧ, ಇಸ್ರೇಲ್​ ಜೊತೆಗಿನ ಸಂಬಂಧ; ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷ ಸೋಲಲು ಕಾರಣ: ಜೆಡಿ ವ್ಯಾನ್ಸ್ | JD Vance

ಇರಾನ್ ವಿರುದ್ಧ ಯುದ್ಧ ಮತ್ತು ಇಸ್ರೇಲ್ ಜೊತೆಗಿನ ಅಮೆರಿಕದ ಸಂಬಂಧವೇ ಮಧ್ಯಂತರ ಚುನಾವಣೆಯಲ್ಲಿ ಕಾಂಗ್ರೆಸ್​ನ ಎರಡೂ ಸದನಗಳಲ್ಲಿ ರಿಪಬ್ಲಿಕನ್ ಪಕ್ಷದ ಸೋಲಿಗೆ ಕಾರಣ ಎಂದು ಬುಧವಾರ(ನ. 04) ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಹೇಳಿದ್ದಾರೆ.
ವಿಜಯವಾಣಿ - 2025-05-09T072751.246
Published on: 

ವಾಷಿಂಗ್ಟನ್: ಇರಾನ್ ವಿರುದ್ಧ ಯುದ್ಧ ಮತ್ತು ಇಸ್ರೇಲ್ ಜೊತೆಗಿನ ಅಮೆರಿಕದ ಸಂಬಂಧವೇ ಮಧ್ಯಂತರ ಚುನಾವಣೆಯಲ್ಲಿ ಕಾಂಗ್ರೆಸ್​ನ ಎರಡೂ ಸದನಗಳಲ್ಲಿ ರಿಪಬ್ಲಿಕನ್ ಪಕ್ಷದ ಸೋಲಿಗೆ ಕಾರಣ ಎಂದು ಬುಧವಾರ(ನ. 04) ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಹೇಳಿದ್ದಾರೆ.

2024ರ ಚುನಾವಣೆಯಲ್ಲಿ ಟ್ರಂಪ್ ಅವರನ್ನು ಬೆಂಬಲಿಸಿದ್ದ ಅನೇಕ ಮತದಾರರು, ಆಡಳಿತದ ನೀತಿಗಳ ವಿರುದ್ಧ ಪ್ರತಿಭಟಿಸುವ ಸಲುವಾಗಿ ತಮ್ಮ ನಿಲುವನ್ನು ಬದಲಿಸಿಕೊಂಡರು ಎಂದು ತಿಳಿಸಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ಅವರು, ರಿಪಬ್ಲಿಕನ್ನರ ಸೋಲಿಗೆ ಮುಖ್ಯ ಕಾರಣ ಬೆಂಬಲಿಗರು ಮತಗಟ್ಟೆಗಳಿಗೆ ಬಾರದಿರುವುದು ಅಲ್ಲ ಎಂದು ವಾದಿಸಿದ್ದಾರೆ. ಬದಲಾಗಿ, 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್-ವ್ಯಾನ್ಸ್ ಜೋಡಿಯನ್ನು ಬೆಂಬಲಿಸಿದ್ದ ಗಮನಾರ್ಹ ಸಂಖ್ಯೆಯ ಮತದಾರರು, ನವೆಂಬರ್ 3ರ ಮಧ್ಯಂತರ ಚುನಾವಣೆಗಳಲ್ಲಿ ಪಕ್ಷದ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ಹೇಳಿದ್ದಾರೆ.

Also Read
ಡಿಸ್ಚಾರ್ಜ್ ಆದ ಕೆಲವೇ ಗಂಟೆಗಳಲ್ಲೇ ಮತ್ತೆ ಆಸ್ಪತ್ರೆಗೆ ದಾಖಲಾದ ಶರದ್ ಪವಾರ್ | Sharad Pawar
ವಿಜಯವಾಣಿ - 2025-05-09T072751.246

ಆಂತರಿಕ ಸಮೀಕ್ಷೆಗಳನ್ನು ಉಲ್ಲೇಖಿಸಿರುವ ವ್ಯಾನ್ಸ್, ಮತದಾರರ ಈ ವಿರೋಧಕ್ಕೆ ನಾಲ್ಕು ಪ್ರಮುಖ ಕಾರಣಗಳನ್ನು ಗುರುತಿಸಿದ್ದಾರೆ. ಮೊದಲನೆಯದು ಯುದ್ಧ, ಏರುತ್ತಿರುವ ಜೀವನ ವೆಚ್ಚ, 'ಅಮೆರಿಕ ಮೊದಲು' ಎಂಬ ಕಾರ್ಯಸೂಚಿಯ ಬಗೆಗಿರುವ ಆಡಳಿತದ ಬದ್ಧತೆಯ ಬಗ್ಗೆ ಉಂಟಾದ ಆತಂಕಗಳು, ಹಾಗೂ ಇಸ್ರೇಲ್‌ನೊಂದಿಗಿನ ಅಮೆರಿಕದ ಸಂಬಂಧದ ಬಗ್ಗೆ ಇದ್ದ ಅಸಮಾಧಾನ ಎಂದು ಹೇಳಿದ್ದಾರೆ.

ನಾವು ಸೋಲಲು ಯುದ್ಧವೇ ಕಾರಣ ಎಂಬ ವ್ಯಾನ್ಸ್ ಅವರ ಹೇಳಿಕೆಯೂ, ಇರಾನ್‌ನೊಂದಿಗಿನ ಸಂಘರ್ಷವು ರಿಪಬ್ಲಿಕನ್ನರಿಗೆ ರಾಜಕೀಯ ಹೊರೆಯಾಗಿ ಪರಿಣಮಿಸಿತ್ತು ಎಂಬುದನ್ನು ಒಪ್ಪಿಕೊಳ್ಳುವ, ಟ್ರಂಪ್ ಆಡಳಿತದ ಒಳಗಿನ ಅತ್ಯಂತ ಸ್ಪಷ್ಟ ಹೇಳಿಕೆಗಳಲ್ಲಿ ಇದೂ ಒಂದಾಗಿದೆ (ಏಜೆನ್ಸೀಸ್).

Related Stories

Ramayana
ಸೋಶಿಯಲ್​ ಮೀಡಿಯಾದಲ್ಲಿ ಟ್ರಂಪ್ ವಿರುದ್ಧ ಟ್ರೋಲ್
US President Donald Trump and the Midterm Election Results
ಅಮೆರಿಕ, ಯುಕೆ ಸೇರಿ ಯುರೋಪ್​ನಲ್ಲಿ ಯುದ್ಧ, ಸೈಬರ್ ದಾಳಿ & ವಿಪತ್ತುಗಳ ಭೀತಿ: ತುರ್ತು ಪರಿಸ್ಥಿತಿ ಸಿದ್ದರಾಗುವಂತೆ ಜನತೆಗೆ ಕರೆ| Emergencies