More

    ಎದೆಯಲ್ಲಿ ಕುದಿಯುತ್ತಿದ್ದ ಸೇಡು ಜ್ವಾಲೆಯಂತೆ ಸ್ಫೋಟ; ಈ ಕ್ಷಣಕ್ಕಾಗಿಯೇ ಕಾದು ಕುಳಿತಿದ್ದರು ಅಭಿಮಾನಿಗಳು

    ನವದೆಹಲಿ: ನಿನ್ನೆ (ಜೂನ್​ 24) ನಡೆದ ಐಸಿಸಿ ಟಿ20 ವಿಶ್ವಕಪ್​ ಟೂರ್ನಿಯ ಸೂಪರ್​ 8​ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 24 ರನ್‌ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಆಸಿಸ್ ಪಡೆಗೆ ಮಣ್ಣು ಮುಕ್ಕಿಸಿದ ಭಾರತಕ್ಕೆ ಕ್ಯಾಪ್ಟನ್ ರೋಹಿತ್ ಶರ್ಮಾ ಅವರ ಸ್ಪೋಟಕ ಇನ್ನಿಂಗ್ಸ್​ ಆಸರೆಯಾಯಿತು. ಆಸ್ಟ್ರೇಲಿಯಾ ವಿರುದ್ಧ 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿನ ಸೋಲಿಗೆ ಈ ಮ್ಯಾಚ್​ ಗೆಲ್ಲುವ ಮೂಲಕ ಟೀಮ್​ ಇಂಡಿಯಾ ಸೇಡು ತೀರಿಸಿಕೊಂಡಿತು. ಸೋತು ಸುಣ್ಣವಾಗಿರುವ ಆಸಿಸ್, ಸೆಮಿಸ್ ಅವಕಾಶಕ್ಕಾಗಿ ಬಾಂಗ್ಲಾದೇಶ-ಅಫ್ಘಾನ್ ಪಂದ್ಯದ ಮೇಲೆ ಭಾರೀ ಅವಲಂಬಿತವಾಗಿತ್ತು. ಆದ್ರೆ, ಆ ಆಸೆಯೂ ಕೂಡ ಈಗ ಛಿದ್ರವಾಗಿದೆ.

    ಇದನ್ನೂ ಓದಿ: ಸಿಎಂ ಭೇಟಿಯಾದ ರೇಣುಕಸ್ವಾಮಿ ತಂದೆ-ತಾಯಿ; ಸಿದ್ದರಾಮಯ್ಯ ಬಳಿ ಮಾಡಿಕೊಂಡ ಮನವಿ ಇದು

    ನಿನ್ನೆ ಆಸಿಸ್​ ಪಡೆಗೆ ಮರೆಯಲಾಗದ ನೆನಪಾಗಿ ಕಾಡಿದ ರೋಹಿತ್​ ಶರ್ಮ, ಬೌಂಡರಿ ಹಾಗೂ ಸಿಕ್ಸರ್​ಗಳನ್ನು ಸಿಡಿಸುವ ಮೂಲಕ ಆಸ್ಟ್ರೇಲಿಯಾ ಬೌಲರ್​ಗಳ ಬೆವರಿಳಿಸಿದರು. ಒಂದೇ ಪಂದ್ಯದಲ್ಲಿ 6 ದಾಖಲೆಗಳನ್ನು ತಮ್ಮ ಹೆಸರಿಗೆ ಸೇರಿಸಿಕೊಂಡ ಹಿಟ್​ಮ್ಯಾನ್, ರೋಹಿತ್ ಅಂದ್ರೆ ಯಾರು ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದರು.

    ನಿರ್ಣಾಯಕ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ರೋಹಿತ್​ಗೆ ಕ್ರಿಕೆಟ್ ಅಭಿಮಾನಿಗಳಿಂದ ಮೆಚ್ಚುಗೆ, ಪ್ರಶಂಸೆಗಳು ವ್ಯಕ್ತವಾಯಿತು. ಕೆಲವರು ಇದು ಒಬ್ಬ ನಾಯಕ ಇನ್ನಿಂಗ್ಸ್​ ಅಂದರೆ, ಇನ್ನೂ ಕೆಲವರು ಅಂದು ಎದೆಯಲ್ಲಿದ್ದ ಸೋಲಿನ ಸೇಡನ್ನು ಜ್ವಾಲೆಯಂತೆ ಈ ಪಂದ್ಯದಲ್ಲಿ ಸ್ಪೋಟಗೊಳಿಸಿದ್ದೀರಿ. ಈಗ ಆಸಿಸ್​ಗೆ ಆ ಬಿಸಿ ಮುಟ್ಟಿದೆ ಬಿಡಿ ಎಂದು ಹಾಸ್ಯಸ್ಪದವಾಗಿ ಕಮೆಂಟ್ ಮಾಡಿದ್ದಾರೆ.

    2023ರ ವಿಶ್ವಕಪ್​ ಟೂರ್ನಿಯಲ್ಲಿ ಸತತ ಗೆಲುವು ನೋಡಿಕೊಂಡೆ ಫೈನಲ್​ಗೆ ಲಗ್ಗೆಯಿಟ್ಟಿದ್ದ ಟೀಂ ಇಂಡಿಯಾ, ಅಂತಿಮ ಹಣಾಹಣಿಯಲ್ಲಿ ಇದೇ ಆಸ್ಟ್ರೇಲಿಯಾ ಎದುರು ಫೈನಲ್ ಪಂದ್ಯವನ್ನಾಡಿತು. ವಿಶ್ವಕಪ್ ಕಿರೀಟ ಭಾರತದ ಮುಡಿಗೇರಲಿದೆ ಎಂದೇ ಕನಸು ಕಂಡಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಅಂದು ಟೀಂ ಇಂಡಿಯಾ ಸೋಲು ಅತೀವ ನೋವನ್ನು ತಂದೊಡ್ಡಿತು. ಕಳೆದ ವರ್ಷ ನವೆಂಬರ್ 19ರಂದು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಏಕದಿನ ವಿಶ್ವಕಪ್ ಫೈನಲ್​ನಲ್ಲಿ ಅಂತಿಮವಾಗಿ 6 ವಿಕೆಟ್​ಗಳ ಅಂತರದಿಂದ ಭಾರತ ಆಸಿಸ್ ವಿರುದ್ಧ ಸೋಲುಂಡಿತು.

    ಇದನ್ನೂ ಓದಿ: ಸಾಗರ್ ಖಂಡ್ರೆ ಮುಸ್ಲಿಮರ ಮತಗಳಿಂದ ಗೆದ್ದಿದ್ದಾರೆ ಎಂಬ ತಮ್ಮ ಹೇಳಿಕಯನ್ನು ಸಮರ್ಥಿಸಿಕೊಂಡ ಜಮೀರ್​ ಅಹ್ಮದ್​ ಖಾನ್​

    ಈ ಸೋಲು ಅಂದಿನಿಂದಲೂ ರೋಹಿತ್ ಶರ್ಮಾಗೆ ಕಾಡುತ್ತಿತ್ತು. ಟೂರ್ನಿ ಪೂರ ಉತ್ತಮ ಪ್ರದರ್ಶನ ನೀಡುತ್ತ ಬಂದಿದ್ದ ತಮ್ಮ ತಂಡ, ಆಸ್ಟ್ರೇಲಿಯಾ ವಿರುದ್ಧ ಸೋತಿದ್ದು, ಬಹಳ ನೋವನ್ನು ಕೊಟ್ಟಿದೆ ಎಂದು ಹಲವು ಸಂದರ್ಶನದಲ್ಲಿ ರೋಹಿತ್ ಮನಬಿಚ್ಚಿ ಮಾತನಾಡಿದ್ದರು. ಆ ಸೋಲನ್ನು ಮರೆಯಲಾಗದ ನೆನಪು ಎಂದೇ ಅನೇಕರು ಭಾವಿಸಿದ್ದರು. ಆದರೆ, ನಿನ್ನೆ ನಡೆದ ರೋಚಕ ಪಂದ್ಯದಲ್ಲಿ ಆಸಿಸ್​ ಪಡೆಯನ್ನು ಬಗ್ಗುಬಡಿದ ಟೀಮ್ ಇಂಡಿಯಾಗೆ ರೋಹಿತ್ ಕೊಡುಗೆ ಅವಿಸ್ಮರಣಿಯ. ಈ ಗೆಲುವನ್ನು ಸಂಭ್ರಮಿಸಿದ ಕ್ರಿಕೆಟ್ ಅಭಿಮಾನಿಗಳು, ಆಸ್ಟ್ರೇಲಿಯಾ ತಂಡಕ್ಕೆ ಯಾವ ಉತ್ತರ ಕೊಡಬೇಕಿತ್ತೋ, ಅದನ್ನು ಕೊಟ್ಟಿದ್ದೀರಿ. ಈಗ ಈ ಕ್ಷಣ ಮರೆಯಲು ಅವರಿಂದ ಸಾಧ್ಯವಿಲ್ಲ ಎಂದು ಸಾಲು ಸಾಲು ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).

    ಸಿಎಂ ಭೇಟಿಯಾದ ರೇಣುಕಸ್ವಾಮಿ ತಂದೆ-ತಾಯಿ; ಸಿದ್ದರಾಮಯ್ಯ ಬಳಿ ಮಾಡಿಕೊಂಡ ಮನವಿ ಇದು

    ಟೀಮ್​ ಇಂಡಿಯಾದ 11 ಆಟಗಾರರೂ ಸಹ ಈ ‘ಕಳ್ಳತನ’ದಲ್ಲಿ ಭಾಗಿ! ದೆಹಲಿ ಪೊಲೀಸ್​ ಟ್ವೀಟ್ ವೈರಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts