More

    ಕುಸಿದ ನೀರಿನ ಟ್ಯಾಂಕ್: ಇಬ್ಬರು ಮೃತ್ಯು- 13 ಮಂದಿಗೆ ಗಾಯ

    ಲಖನೌ: ನೀರಿನ ಟ್ಯಾಂಕ್ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದು, ಇಬ್ಬರು ಮಹಿಳೆಯರು ಮೃತಪಟ್ಟು, 13 ಮಂದಿ ಗಾಯಗೊಂಡಿದ್ದಾರೆ. ಘಟನೆ ಉತ್ತರ ಪ್ರದೇಶದ ಮಥುರಾದ ಕೃಷ್ಣವಿಹಾರ್‌ನ ಆವಾಸ್ ವಿಕಾಸ್ ಕಾಲೋನಿಯಲ್ಲಿ ಭಾನುವಾರ ಸಂಜೆ ನಡೆದಿದೆ.

    ಇದನ್ನೂ ಓದಿ: ರೋಹಿತ್​ ಶರ್ಮ-ವಿರಾಟ್​ ಕೊಹ್ಲಿ ಅಭಿಮಾನಿಗಳಿಗೆ ಗುಡ್​ ನ್ಯೂಸ್​: ಮಹತ್ವದ ಘೋಷಣೆ ಮಾಡಿದ ಜಯ್​ ಷಾ!

    ಟ್ಯಾಂಕ್​ ಶಿಥಿಲಗೊಂಡಿತ್ತು. ಆದರೆ ಅದೇ ಟ್ಯಾಂಕ್​ಗೆ ನೀರು ತುಂಬಿಸಲಾಗುತ್ತಿತ್ತು. ಭಾನುವಾರ ಸಂಜೆ ಸಹ ಟ್ಯಾಂಕ್​ ತುಂಬಿ ನೀರು ಹೊರಬರುತ್ತಿತ್ತು. ಆಗ ನೀರಿನ ಭಾರಕ್ಕೆ ಟ್ಯಾಂಕ್ ಕುಸಿದು ಬಿದ್ದಿದೆ. ಸಮೀಪದ ಹಲವು ಮನೆಗಳು ಸಹ ಟ್ಯಾಂಕ್​ನ ಅವಶೇಷಗಳಡಿ ಸಿಲುಕಿ ಕುಸಿದಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

    ಟ್ಯಾಂಕಿನಲ್ಲಿದ್ದ ನೀರು, ಕಸ ಸೇರಿ ಹಲವು ಮನೆಗಳಿಗೆ ನುಗ್ಗಿ ವಿದ್ಯುತ್ ಉಪಕರಣಗಳಿಗೆ ತೀವ್ರ ಹಾನಿಯಾಗಿದೆ. ಟ್ಯಾಂಕ್ ಇದ್ದ ರಸ್ತೆಯಲ್ಲಿನ ಹಲವು ವಾಹನಗಳಿಗೂ ಹಾನಿಯಾಗಿದೆ. ಸೇನೆ ಮತ್ತು ಎನ್‌ಡಿಆರ್‌ಎಫ್ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ. ನಾಲ್ಕು ವರ್ಷಗಳ ಹಿಂದೆ ಜಲ ನಿಗಮ ಕಾಲೋನಿ ಮಧ್ಯದಲ್ಲಿ ಈ ನೀರಿನ ಟ್ಯಾಂಕ್ ನಿರ್ಮಿಸಲಾಗಿತ್ತು ಎನ್ನಲಾಗಿದೆ. ಈ ಟ್ಯಾಂಕ್ ನಿರ್ಮಾಣದ ನಂತರ ಅದನ್ನು ನಗರಸಭೆಗೆ ಹಸ್ತಾಂತರಿಸಲಾಗಿತ್ತು. ಈ ಹಿಂದೆ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಕಾಲೋನಿ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದರು.

    ಘಟನೆಯಿಂದ ಎಚ್ಚೆತ್ತ ಉತ್ತರ ಪ್ರದೇಶ ಸರ್ಕಾರ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದೆ. ಮೃತರ ಕುಟುಂಬಗಳಿಗೆ 2 ಲಕ್ಷ ರೂ. ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ ಸಾವಿರ 50ರೂ. ಪರಿಹಾರವನ್ನು ಘೋಷಿಸಿದೆ.

    ಈ ಅವಘಡ ದಿಢೀರ್ ಆಗಿ ಸಂಭವಿಸಿದೆಯೇ ಅಥವಾ ಉದ್ದೇಶಪೂರ್ವಕವಾಗಿ ಯಾರಾದರೂ ಈ ಕೃತ್ಯ ಎಸಗಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

    ‘ಹೌದು, ನಾನು ಕುಡಿದಿದ್ದೇನೆ’: ಪಬ್​ನಿಂದ ಹೊರಬಂದ ನಟಿ ಆಡಿದ ಮಾತು ವೈರಲ್​..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts