More

    ಮನೆ ಒಳಾಂಗಣ ವಿನ್ಯಾಸಕ್ಕೆ ವರ್ಲಿ ಇರ್ಲಿ…

    ಪಂಕಜ ಕೆ.ಎಂ. ಬೆಂಗಳೂರು

    ಗ್ರಾಮೀಣ ಪ್ರದೇಶದ ಸಾಂಪ್ರದಾಯಿಕ ಕಲೆಯಾದ ಆಕರ್ಷಕ ‘ವರ್ಲಿ ಚಿತ್ತಾರ’ ಇದೀಗ ಮನೆಗೆ ಮಾತ್ರವಲ್ಲದೆ ಕ್ಯಾಂಪಸ್‌ಗಳು, ರೆಸ್ಟೋರೆಂಟ್, ಕಂಪನಿಗಳ ಒಳಾಂಗಣ ವಿನ್ಯಾಸದಲ್ಲೂ ಸ್ಥಾನ ಪಡೆದುಕೊಳ್ಳುತ್ತಿದೆ. ಕಲಾಸಕ್ತರನ್ನು ಆಕರ್ಷಿಸುತ್ತಿದೆ.

    ಇಂಡೋ- ವೆಸ್ಟರ್ನ್ ಪರಿಕಲ್ಪನೆಯ ಭಾಗವಾಗಿರುವ ವರ್ಲಿ ಚಿತ್ತಾರ ಆಧುನಿಕ ಮನೆಗಳ ಒಳಾಂಗಣ ವಿನ್ಯಾಸದಲ್ಲಿ ಬೇಡಿಕೆ ಪಡೆದುಕೊಂಡಿದೆ. ಗೋಡೆಗಳಿಗಷ್ಟೇ ಸೀಮಿತಗೊಳ್ಳದೆ ಅಲಂಕಾರಿಕ ವಸ್ತುಗಳ ಮೂಲಕವೂ ತನ್ನ ಛಾಪು ಮೂಡಿಸಿದೆ. ದೊಡ್ಡ ದೊಡ್ಡ ಕುಂಡ, ಹೂಕುಂಡ, ಕಾರ್ನರ್ ಹೂಜಿ, ವಾಲ್ ಹ್ಯಾಂಗಿಂಗ್, ಪ್ರತಿಮೆ ಸೇರಿ ಹಲವು ಬಗೆಯ ವರ್ಲಿ ಕಲಾವಸ್ತುಗಳು ಇಂದು ಒಳಾಂಗಣ ವಿನ್ಯಾಸದಲ್ಲಿ ವಿಶೇಷ ಪಾತ್ರ ವಹಿಸುತ್ತಿವೆ.

    ವರ್ಲಿ ಚಿತ್ತಾರದಲ್ಲಿ ಮಾನವಾಕೃತಿ, ಕಡ್ಡಿ, ಹಣ್ಣು, ಹೂವು, ಎಲೆ, ಸಂಗೀತ ಕಚೇರಿ, ನೃತ್ಯದ ಭಂಗಿ ಸೇರಿ ನಾನಾ ಬಗೆಯ ಚಿತ್ತಾರಗಳು ಗೋಡೆಗಳ ಮೆರುಗು ವೃದ್ಧಿಸುತ್ತಿವೆ. ಒಟ್ಟಾರೆ ಈ ಚಿತ್ತಾರವು ಮದುವೆ, ಬೇಟೆ, ಬೇಸಾಯ, ಮೀನುಗಾರಿಕೆ, ಕಲೆ, ಸಂಸ್ಕೃತಿ ಹೀಗೆ ಹಲವಾರು ಥೀಮ್‌ಗಳನ್ನು ಒಳಗೊಂಡಿರುತ್ತದೆ. ಒಳಾಂಗಣ, ಹೊರಾಂಗಣ, ಲಿವಿಂಗ್ ಹಾಗೂ ಬಾಲ್ಕನಿ ಹೀಗೆ ಒಂದೊಂದು ಗೋಡೆಯಲ್ಲಿ ಮೂಡುವ ಚಿತ್ತಾರಗಳು ಒಂದೊಂದು ಸಂದರ್ಭಗಳನ್ನು ಪರಿಚಯಿಸುತ್ತದೆ. ಹಾಗಾಗಿ ಹೋಟೆಲ್, ನರ್ಸರಿ ಶಾಲೆ, ಕಲಾ ಶಾಲೆ, ಮನೆ, ತೋಟದ ಮನೆಗಳಲ್ಲಿ ವರ್ಲಿ ಚಿತ್ತಾರ ಹೆಚ್ಚು ಬಳಕೆಯಾಗುತ್ತಿದೆ.

    ಈ ಅಪರೂಪದ ಕಲೆ ಫ್ಯಾಷನ್ ಕ್ಷೇತ್ರವನ್ನೂ ಆಕ್ರಮಿಸಿದ್ದು, ಸೀರೆ ಸೇರಿ ಬಟ್ಟೆಗಳಲ್ಲೂ ಕಾಣಬಹುದಾಗಿದೆ. ಇದೀಗ ಒಳಾಂಗಣ ವಿನ್ಯಾಸಕಾರರ ಮನ ಗೆದ್ದಿದೆ. ಹಾಗಾಗಿ ಅವರು ತಮ್ಮ ಪ್ಲಾನ್‌ಗಳಲ್ಲಿ ಹಾಗೂ ಭಾರತೀಯ ಸಾಂಪ್ರದಾಯಿಕ ವಿನ್ಯಾಸಗಳಲ್ಲಿ ವರ್ಲಿ ಚಿತ್ತಾರಗಳನ್ನು ಪರಿಚಯಿಸುತ್ತಿದ್ದಾರೆ.

    ವಿನ್ಯಾಸಪ್ರಿಯರಿಗೆ ಸಲಹೆಗಳು: ಒಳಾಂಗಣ ವಿನ್ಯಾಸದಲ್ಲಿ ಅಪ್ಪಟ ದೇಸಿ ಲುಕ್ ನೀಡುವ ವರ್ಲಿ ವಿನ್ಯಾಸವನ್ನು ಮನೆಯ ವಿನ್ಯಾಸಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ಆಯ್ಕೆ ಮಾಡಿಕೊಳ್ಳಬೇಕು. ನೋಡಲು ಒಂದೇ ತೆರನಾಗಿ ತರಹನಾಗಿ ಕಂಡರೂ ಚಿತ್ತಾರ ವಿಭಿನ್ನವಾಗಿರುವಂತೆ ಗಮನಹರಿಸಬೇಕು. ಚಿತ್ತಾರಗಳನ್ನು ಮೂಡಿಸುವಾಗ ಚೌಕಾಸಿ ಮಾಡದೆ ದೀರ್ಘಕಾಲ ಬಾಳಕೆ ಬರುವ ರೀತಿಯಲ್ಲಿ ಗುಣಮಟ್ಟದ ವರ್ಣಗಳನ್ನು ಬಳಸಬೇಕು.

    ವರ್ಲಿ ಚಿತ್ತಾರದ ಇತಿಹಾಸ: ವರ್ಲಿ ಚಿತ್ರಕಲೆಯು ಮಹಾರಾಷ್ಟ್ರದ ವರ್ಲಿ ಬುಡಕಟ್ಟು ಸಮುದಾಯದಿಂದ ಹುಟ್ಟಿಕೊಂಡ ಕಲೆಯ ಒಂದು ರೂಪ. 1970ರ ದಶಕದಲ್ಲಿ ಬುಡ್ಡಕಟ್ಟು ವಲಯಗಳಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿತ್ತು. ಈ ಚಿತ್ರಗಳನ್ನು ಮಣ್ಣು, ಇದ್ದಿಲು ಮತ್ತು ಹಸುವಿನ ಸಗಣಿ ಆಧಾರಿತ ಮೇಲ್ಮೆ ಗಳ ಮೇಲೆ ಚಿತ್ರಸಲಾಗುತ್ತಿತ್ತು. ನಿಧಾನವಾಗಿ ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಿತು. ನಂತರದಲ್ಲಿ ಶಾಲಾ- ಕಾಲೇಜುಗಳ ಗೋಡೆಗಳಲ್ಲಿ ಕಾಣಿಸಿಕೊಂಡಿತು. ಇದೀಗ ಮನೆ ಹಾಗೂ ಕಟ್ಟಡಗಳ ಒಳಾಂಗಣ ವಿನ್ಯಾಸದಲ್ಲಿ ವಿಶೇಷ ಪಾತ್ರ ವಹಿಸಿದೆ. ಸರಳ ಹಾಗೂ ಸುಂದರವಾಗಿ ಕಾಣುವ ಮತ್ತು ಆಳವಾಗಿ ಕಥೆ ಹೇಳುವ ಗುಣಗಳಿಂದ ಕೂಡಿರುವ ವರ್ಲಿ ಚಿತ್ತಾರ ಭಾರತದ ಸಾಂಸ್ಕೃತಿಕ ಪರಂಪರೆಯ ಪ್ರಮುಖ ಭಾಗವಾಗಿ ಬೆಳೆದು ಬಂದಿದೆ.

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts