More

    ಊಟದ ನಂತರ ಯಾಕೆ ವಾಕಿಂಗ್​ ಮಾಡಬೇಕು? ಇಲ್ಲಿದೆ ನೋಡಿ 5 ಪ್ರಮುಖ ಕಾರಣಗಳು…

    ಊಟ ಮಾಡಿದ ನಂತರ ನಡೆಯುವ ಅಭ್ಯಾಸ ನಿಮಗಿದೆಯೇ? ಇಲ್ಲವಾದರೆ, ಊಟವಾದ ಮೇಲೆ ಸ್ವಲ್ಪ ಹೊತ್ತು ನಡೆಯುವುದನ್ನು ಇಂದಿನಿಂದಲೇ ರೂಢಿ ಮಾಡಿಕೊಳ್ಳಿ. ನಿರ್ಲಕ್ಷಿಸಿದರೆ ಆರೋಗ್ಯ ತೊಂದರೆಗೆ ಸಿಲುಕಬೇಕಾಗುತ್ತದೆ. ಅನೇಕ ಜನರು ತಿಂದ ನಂತರ ನಿದ್ರೆಗೆ ಜಾರುತ್ತಾರೆ. ಆದರೆ, ಇದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ.

    ಆರೋಗ್ಯಕರ ಜೀರ್ಣಕ್ರಿಯೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಪ್ರತಿ ಊಟದ ನಂತರ ಸ್ವಲ್ಪ ನಡೆಯುವುದನ್ನು ಮಿಸ್​ ಮಾಡಬೇಡಿ. ದಿನವೂ ವ್ಯಾಯಾಮ ಮಾಡುವುದು, ತಿಂದ ನಂತರ ಒಂದು ಸಣ್ಣ ನಡಿಗೆ ಅದ್ಭುತ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಏನೆಲ್ಲ ಪ್ರಯೋಜನಗಳನ್ನು ನೀಡುತ್ತದೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

    1. ಉತ್ತಮ ಜೀರ್ಣಕ್ರಿಯೆ: ತಿಂದ ನಂತರ ನಡೆಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ವಾಕಿಂಗ್ ಹೊಟ್ಟೆಯ ಸ್ನಾಯುಗಳು ಮತ್ತು ಕರುಳುಗಳನ್ನು ಉತ್ತೇಜಿಸುವ ಮೂಲಕ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಆಹಾರವು ವೇಗವಾಗಿ ಚಲಿಸಲು ಅನುವು ಮಾಡಿಕೊಡುತ್ತದೆ. ಇದು ಎದೆಯುರಿ, ಮಲಬದ್ಧತೆ, ಹೊಟ್ಟೆ ಉಬ್ಬರ, ಆಮ್ಲೀಯತೆ, ಉದರಶೂಲೆ ನೋವಿನಂತಹ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.

    2. ಸಕ್ಕರೆ ಮಟ್ಟ ನಿಯಂತ್ರಣ: ಮಧುಮೇಹ ರೋಗಿಗಳು ಊಟದ ನಂತರ ನಡೆಯುವುದು ಬಹಳ ಮುಖ್ಯ. ಊಟದ ನಂತರ ವ್ಯಾಯಾಮ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಅಲ್ಲದೆ, ದಿನವಿಡೀ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಧಾರಿಸುತ್ತದೆ.

    3. ಆರೋಗ್ಯಕರ ತೂಕ: ನಡೆಯುವುದು ಸುಲಭವಾದ ವ್ಯಾಯಾಮ. ಕ್ಯಾಲೊರಿಗಳನ್ನು ಕರಗಿಸುವಲ್ಲಿ ಸಹಾಯ ಮಾಡುತ್ತದೆ. ಇದರಿಂದ ತ್ವರಿತವಾಗಿ ತೂಕವನ್ನು ಕಳೆದುಕೊಳ್ಳಬಹುದು. ವಾಕಿಂಗ್ ಮಾನಸಿಕ ಆರೋಗ್ಯಕ್ಕೂ ಒಳ್ಳೆಯದು. ಅಲ್ಲದೆ, ಇದು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಶಕ್ತಿಯ ಮಟ್ಟವನ್ನು ಸುಧಾರಿಸುತ್ತದೆ. ಇದು ನಿಮ್ಮ ಸ್ನಾಯುಗಳು ಮತ್ತು ಮೂಳೆಗಳನ್ನು ಬಲಪಡಿಸುವಂತಹ ಅನೇಕ ಇತರ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ.

    See also  ಜಿಲ್ಲೆಯ 2.75 ಲಕ್ಷ ಮಕ್ಕಳ ಆರೋಗ್ಯ ತಪಾಸಣೆ

    4. ರಕ್ತದೊತ್ತಡ ನಿಯಂತ್ರಣ: ಊಟದ ನಂತರ ನಡೆಯುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಬಹುದು ಎಂದು ಕೆಲವು ಅಧ್ಯಯನಗಳು ತೋರಿಸಿವೆ. ನೀವು ಅಧಿಕ ರಕ್ತದೊತ್ತಡ ಹೊಂದಿದ್ದರೆ, ಆಹಾರ ಸೇವಿಸಿದ ನಂತರ ನಿಯಮಿತವಾಗಿ ನಡೆಯುವುದು ತುಂಬಾ ಒಳ್ಳೆಯದು. ಆರೋಗ್ಯಕರ ರಕ್ತದೊತ್ತಡವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

    5. ಉತ್ತಮ ನಿದ್ರೆ: ವಾಕಿಂಗ್ ನಿಮ್ಮ ದೇಹದ ಸಮಸ್ಯೆಗಳನ್ನು ನಿವಾರಿಸುತ್ತದೆ. ನಿದ್ರಾಹೀನತೆಯ ಸಮಸ್ಯೆಯನ್ನು ನಿಯಂತ್ರಿಸುತ್ತದೆ. ತಿಂದ ನಂತರ ಜೀರ್ಣಕಾರಿ ಅಸ್ವಸ್ಥತೆಗಳನ್ನು ಪರಿಹರಿಸುತ್ತದೆ. ಈ ಮೂಲಕ ಉತ್ತಮ ನಿದ್ರೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

    ಗಮನಿಸಬೇಕಾದ ಸಂಗತಿ ಏನೆಂದರೆ, ಊಟ ಮತ್ತು ವಾಕಿಂಗ್ ನಡುವೆ 10 ರಿಂದ 15 ನಿಮಿಷಗಳ ಅಂತರವಿರಬೇಕು. ಅಲ್ಲದೆ, ನೀವು ಯಾವುದೇ ಅಸ್ವಸ್ಥತೆಯನ್ನು ಅನುಭವಿಸಿದರೆ ವಾಕಿಂಗ್ ವೇಗವನ್ನು ನಿಧಾನಗೊಳಿಸಿ.

    ಗಮನಿಸಿ: ಈ ಆರೋಗ್ಯ ಮಾಹಿತಿಯು ಕೇವಲ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಯಾವುದೇ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರೆ ಮೊದಲು ವೈದ್ಯರನ್ನು ಸಂಪರ್ಕಿಸಿ. ವೈದ್ಯರನ್ನು ಸಂಪರ್ಕಿಸಿದ ನಂತರವೇ ಇಂತಹ ಆರೋಗ್ಯ ಪರಿಹಾರಗಳನ್ನು ಅನುಸರಿಸುವುದು ಉತ್ತಮ.

    ಈ ರೀತಿ ಹಲ್ಲು ಉಜ್ಜುತ್ತಿದ್ದರೆ ಇಂದೇ ಎಚ್ಚೆತ್ತುಕೊಳ್ಳಿ! ಹೃದ್ರೋಗ, ಮಧುಮೇಹದ ಅಪಾಯ ಹೆಚ್ಚು

    ಏಲಕ್ಕಿಯ ನೀರು ಕುಡಿಯುವುದರಿಂದ ಇಷ್ಟೆಲ್ಲಾ ಪ್ರಯೋಜನಗಳಿವೆಯಾ? ಇಲ್ಲಿದೆ ಅಚ್ಚರಿಯ ಮಾಹಿತಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts