More

    ಕಳಪೆ ಫಾರ್ಮ್​​ ದಿನಗಳನ್ನು ನೆನೆದು ದ್ರಾವಿಡ್​ ಮುಂದೆ ವಿರಾಟ್​​​ ಭಾವುಕ! ಹೇಳಿಕೊಂಡ ಮಾತುಗಳಿವು

    ನವದೆಹಲಿ: ಬಾರ್ಬಡೋಸ್​ನಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಬೀಗಿದ ಟೀಮ್ ಇಂಡಿಯಾ, ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ 17 ವರ್ಷಗಳ ನಂತರ ಟಿ20 ವಿಶ್ವಕಪ್ ಟ್ರೋಫಿಗೆ ಮುತ್ತಿಟ್ಟಿತು. ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಬ್ಯಾಟಿಂಗ್ ಮಾಡುತ್ತಿದ್ದ ಟೀಮ್ ಇಂಡಿಯಾ ಆರಂಭಿಕ ಹಂತದಲ್ಲೇ ರೋಹಿತ್​ ಶರ್ಮ, ರಿಷಭ್ ಪಂತ್ ಮತ್ತು ಸೂರ್ಯಕುಮಾರ್ ಯಾದವ್​ರನ್ನು ಐದು ಓವರ್​ ಅಂತ್ಯದೊಳಗೆ​ ಕಳೆದುಕೊಂಡಿತು. ಆಗ ಭಾರತಕ್ಕೆ ಆಸರೆಯಾಗಿದ್ದು, ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ಅವರ ಆಕರ್ಷಕ ಆರ್ಧಶತಕ.

    ಇದನ್ನೂ ಓದಿ: ಕಬ್ಬಿನ ಬೀಜದ ದರ ಗಗನಕ್ಕೆ! 

    ದಕ್ಷಿಣ ಆಫ್ರಿಕಾ ವಿರುದ್ಧ 59 ಎಸೆತಗಳಲ್ಲಿ 76 ರನ್ ಸಿಡಿಸಿದ ವಿರಾಟ್​, ತಂಡದ ಗೆಲುವಿಗೆ ಪ್ರಮುಖ ಕಾರಣರಾಗಿ ಹೊರಹೊಮ್ಮಿದರು. 17 ವರ್ಷಗಳ ಬಳಿಕ ಟಿ20 ವಿಶ್ವಕಪ್​ ಟ್ರೋಫಿ ಎತ್ತಿಹಿಡಿದ ಭಾರತಕ್ಕೆ ಕ್ರಿಕೆಟ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ವಿರಾಟ್​ ಟ್ರೋಫಿ ಹಿಡಿದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಹರಿದಾಡಿದ್ದು, ಕೊಹ್ಲಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿವೆ. ಆದ್ರೆ, ಈ ಹಿಂದೆ ವಿಶ್ವಕಪ್ ಪಂದ್ಯಗಳಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದರು ಎಂಬ ಕಾರಣಕ್ಕೆ ವ್ಯಾಪಕ ಅಸಮಾಧಾನಗಳು ವ್ಯಕ್ತವಾಗಿತ್ತು.

    ಈ ಬಾರಿಯ ವಿಶ್ವಕಪ್ ಟೂರ್ನಿಯ ಆರಂಭದ ಪಂದ್ಯದಿಂದಲೂ ರೋಹಿತ್ ಶರ್ಮ ಜತೆ ಓಪನಿಂಗ್ ಬಂದ ವಿರಾಟ್​, ಫೈನಲ್ ಪಂದ್ಯ ಹೊರತುಪಡಿಸಿ ಉಳಿದೆಲ್ಲಾ ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರುವಲ್ಲಿ ಸತತವಾಗಿ ವಿಫಲರಾದರು. ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಪರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವುದರ ಜತೆ ಅತ್ಯಧಿಕ ರನ್​ ಗಳಿಸಿ, ಸ್ಟಾರ್ ಆಟಗಾರನಾಗಿ ಮಿಂಚಿದ್ದರು.

    See also  ಭಾರತಕ್ಕೆ ಬೃಹತ್ ಮೊತ್ತದ ಸವಾಲು ನೀಡಿದ ಇಂಗ್ಲೆಂಡ್

    ಇದನ್ನೂ ಓದಿ: ಗ್ರಾಪಂ ಸ್ವತಂತ್ರ ನಿರ್ವಹಣೆಗೆ ಉದ್ಯೋಗ ಖಾತ್ರಿ ಯೋಜನೆ ಸಹಕಾರಿ

    ಆದರೆ, ವಿಶ್ವಕಪ್ ಟೂರ್ನಿಯಲ್ಲಿ ಈ ಲೆಕ್ಕಾಚಾರಗಳು ತಲೆಕೆಳಗಾಗಿದ್ದು, ಬ್ಯಾಕ್ ಟು ಬ್ಯಾಕ್ ವಿಫಲ ಪ್ರದರ್ಶನ ತೋರಿದರು. ಇದರಿಂದ ತೀವ್ರ ಬೇಸರಕ್ಕೆ ಒಳಗಾಗಿದ್ದ ವಿರಾಟ್​, ಈ ಬಗ್ಗೆ ಟೀಮ್ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್​ ಅವರೊಂದಿಗೆ ಚರ್ಚೆ ಮಾಡಿದ್ದರಂತೆ. ಸ್ವತಃ ಇದನ್ನು ಕೊಹ್ಲಿ ಅವರೇ ಹೇಳಿಕೊಂಡಿದ್ದು, “ಹೌದು, ನೀವು ಕೆಲವೊಮ್ಮೆ ನಿಮ್ಮ ಕಂಫರ್ಟ್​ ಝೋನ್​ನಿಂದ ಹೊರಬರಬೇಕಾಗುತ್ತದೆ. ನನ್ನ ತಲೆಯಲ್ಲಿ ಮುಂದಿನ ಪಂದ್ಯದಲ್ಲಿ ಹೇಗೆ ಪ್ರದರ್ಶನ ಕೊಡಬೇಕು ಎಂಬುದು ಮಾತ್ರ ಓಡುತ್ತಿತ್ತು. ಯಾವಾಗ ಇದು ಆಗುತ್ತಿರಲಿಲ್ಲವೋ, ಆಗ ರಾಹುಲ್​ ಅವರ ಬಳಿ ಹೇಳಿಕೊಳ್ಳುತ್ತಿದ್ದೆ” ಎಂದಿದ್ದಾರೆ.

    “ನಾನು ರಾಹುಲ್ ದ್ರಾವಿಡ್ ಅವರಿಗೆ ಹೇಳಿದೆ, ಯಾಕೋ ನನ್ನ ಆತ್ಮವಿಶ್ವಾಸ ಕುಗ್ಗಿದೆ. ಇದರಿಂದ ಹೊರಬರಬೇಕು. ಉತ್ತಮ ಪ್ರದರ್ಶನ ಕೊಡಬೇಕು ಎಂದಿದ್ದೆ. ಆದರೆ, ಏನೇನೂ ಆಗಬೇಕೋ ಆದೆಲ್ಲವೂ ಇಂದು ಆಗಿದೆ” ಎಂದು ಕೊಹ್ಲಿ ತಮ್ಮ ಮನದಾಳದ ಮಾತನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).

    ಅಂದು ಅವಮಾನ ಇಂದು ಸನ್ಮಾನ: ಇದಕ್ಕೆ ಹೇಳೋದು… ಹಾರ್ದಿಕ್​ಗೆ ಫ್ಯಾನ್ಸ್ ಕೊಟ್ಟ ಸಂದೇಶವಿದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts