More

    ಆ ಪ್ರಶಸ್ತಿಗೆ ವಿರಾಟ್​ ಅರ್ಹರಲ್ಲ! ಅದು ನಡೆದಿದ್ರೆ ಭಾರತದ ಪಾಲಿಗೆ ಕೊಹ್ಲಿಯೇ ವಿಲನ್… ಮಾಜಿ ಕ್ರಿಕೆಟಿಗನ ಹೇಳಿಕೆ

    ನವದೆಹಲಿ: ಟಿ20 ವಿಶ್ವಕಪ್​ ಎತ್ತಿ ಹಿಡಿಯುವ ಮೂಲಕ 17 ವರ್ಷಗಳ ಬಳಿಕ ಟೀಮ್ ಇಂಡಿಯಾ ಮತ್ತೆ ವಿಶ್ವ ಚಾಂಪಿಯನ್ ಆಗಿದೆ. ಈ ಮೆಗಾಟೂರ್ನಮೆಂಟ್‌ನಲ್ಲಿ ಭಾರತ ತಂಡವು ತನ್ನ ಒಟ್ಟಾರೆ ಪ್ರದರ್ಶನದಿಂದ ಎಲ್ಲರ ಗಮನ ಸೆಳೆಯಿತು. ಬ್ಯಾಟಿಂಗ್​, ಬೌಲಿಂಗ್​ ಮತ್ತು ಫೀಲ್ಡಿಂಗ್​ ಎಲ್ಲದರಲ್ಲೂ ಮುಂಚಿತು. ಪ್ರತಿಯೊಬ್ಬ ಆಟಗಾರನು ಕೂಡ ಪರಿಸ್ಥಿತಿಗಳಿಗೆ ಅನುಗುಣವಾಗಿ ಅದ್ಭುತ ಪ್ರದರ್ಶನ ನೀಡಿದರು.

    ಆದರೆ, ಈ ಬಾರಿಯ ವಿಶ್ವಕಪ್‌ನಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿದಿದ್ದ ವಿರಾಟ್ ಕೊಹ್ಲಿ, ಲೀಗ್, ಸೂಪರ್ 8 ಮತ್ತು ಸೆಮಿಫೈನಲ್‌ನಲ್ಲಿ ದಯನೀಯವಾಗಿ ವಿಫಲರಾಗಿದರು. ಆದರೆ, ನಿರ್ಣಾಯಕ ಫೈನಲ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ತಂಡಕ್ಕೆ ಪ್ರಶಸ್ತಿ ತಂದುಕೊಟ್ಟರು. ಅಂತಿಮ ಪಂದ್ಯದಲ್ಲಿ 76 ರನ್​ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಲ್ಲದೆ, ಪ್ಲೇಯರ್ ಆಫ್ ದಿ ಅವಾರ್ಡ್ ಕೂಡ ಪಡೆದರು. ಆದರೆ, ಕೊಹ್ಲಿ ಈ ಪ್ರಶಸ್ತಿಗೆ ಅರ್ಹರಲ್ಲ ಎಂದು ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಆಘಾತಕಾರಿ ಕಾಮೆಂಟ್ ಮಾಡಿದ್ದಾರೆ.

    ಪಂದ್ಯದಲ್ಲಿ ಬಳಿಕ ಇಎಸ್​ಪಿಎನ್​ಕ್ರಿಕ್​ಇನ್ಫೋ ಶೋನಲ್ಲಿ ಮಾತನಾಡಿದ ಭಾರತದ ಮಾಜಿ ಕ್ರಿಕೆಟಿಗ ಮತ್ತು ಖ್ಯಾತ ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಕರ್, ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರಿಗೆ ಪ್ಲೇಯರ್ ಆಫ್ ದಿ ಅವಾರ್ಡ್ ಪ್ರಶಸ್ತಿ ನೀಡಿದ್ದನ್ನು ಟೀಕಿಸಿದರು. ವಿರಾಟ್ ಅವರು ಈ ಪ್ರಶಸ್ತಿಗೆ ಅರ್ಹರಲ್ಲ ಎಂದು ಅನಿರೀಕ್ಷಿತ ಕಾಮೆಂಟ್​ಗಳನ್ನು ಮಾಡಿದರು.

    ಕೊಹ್ಲಿ ನಿಧಾನಗತಿಯ ಬ್ಯಾಟಿಂಗ್‌ನಿಂದಾಗಿಯೇ ಪಂದ್ಯದ ಗೆಲುವು ತ್ರಾಸದಾಯಕವಾಗಿತ್ತು. ಒಂದು ಹಂತದಲ್ಲಿ ವಿಜಯಲಕ್ಷ್ಮೀ ದಕ್ಷಿಣ ಆಫ್ರಿಕಾ ಕಡೆ ವಾಲಿದ್ದಳು. ಅದಕ್ಕೆ ಕಾರಣ ಕೊಹ್ಲಿಯ ಮಂದಗತಿ ಬ್ಯಾಟಿಂಗ್ ಎಂದು​ ಮಂಜ್ರೇಕರ್​ ಟೀಕಿಸಿದರು. ಒಂದು ವೇಳೆ ಟೀಮ್​ ಇಂಡಿಯಾ ಫೈನಲ್‌ನಲ್ಲಿ ಸೋತಿದ್ದರೆ ವಿರಾಟ್ ಕೊಹ್ಲಿ ಟೀಕೆಗಳನ್ನು ಎದುರಿಸುವುದು ಮಾತ್ರವಲ್ಲದೆ ವಿಲನ್ ಕೂಡ ಆಗುತ್ತಿದ್ದರು ಎಂದರು.

    ಫೈನಲ್ ಪಂದ್ಯದಲ್ಲಿ ಟೀಮ್​ ಇಂಡಿಯಾದ ಬ್ಯಾಟಿಂಗ್ ಉತ್ತಮವಾಗಿತ್ತು. ಆದರೆ ವಿರಾಟ್ ಕೊಹ್ಲಿ ನಿಧಾನಗತಿಯ ಬ್ಯಾಟಿಂಗ್‌ನಿಂದ ಪಂದ್ಯ ರೋಚಕವಾಯಿತು. ಕೊಹ್ಲಿಯ ಬ್ಯಾಟಿಂಗ್‌ನಿಂದ ಹಾರ್ದಿಕ್ ಪಾಂಡ್ಯರಂತಹ ಬಿಗ್ ಹಿಟ್ಟರ್‌ಗಳು ಕಡಿಮೆ ಎಸೆತಗಳನ್ನು ಆಡಬೇಕಾಯಿತು. ಆದರೆ ಪ್ಲೇಯರ್ ಆಫ್​ ದಿ ಮ್ಯಾಚ್​ ಪ್ರಶಸ್ತಿಯನ್ನು ಬೌಲರ್​ಗೆ ಕೊಡಬೇಕಾಯಿತು. ಏಕೆಂದರೆ, ಸೋಲಿನ ದವಡೆಯಲ್ಲಿದ್ದ ಪಂದ್ಯವನ್ನು ಭಾರತಕ್ಕೆ ದಕ್ಕುವಂತೆ ಮಾಡಿದ್ದು ಬೌಲರ್​ಗಳು. ಹೀಗಾಗಿ ಕೊಹ್ಲಿ ಪಂದ್ಯದ ಆಟಗಾರ ಪ್ರಶಸ್ತಿಗೆ ಅನರ್ಹರು ಎಂದು ಮಂಜ್ರೇಕರ್​ ಹೇಳಿದರು.

    ಆದರೆ, ಮಂಜ್ರೇಕರ್​ ಮಾತನ್ನು ಜಿಂಬಾಂಬ್ವೆ ದಿಗ್ಗಜ ಆ್ಯಂಡಿ ಫ್ಲವರ್ ನಿರಾಕರಿಸಿದರು. ಕೆರಿಬಿಯನ್​ ಪಿಚ್​ಗಳಲ್ಲಿ 176 ರನ್​ ಒಂದು ದೊಡ್ಡ ಮೊತ್ತವೆಂದರು. ಒಂದು ವೇಳೆ ಭಾರತ ಆ ಮೊತ್ತವನ್ನು ದಾಖಲಿಸದೇ ಹೋಗಿದ್ದರೆ ಮತ್ತೆ ಎಲ್ಲರು ಕೊಹ್ಲಿಯನ್ನು ಟೀಕಿಸುತ್ತಿದ್ದರು ಎಂದು ಆ್ಯಂಡಿ ಫ್ಲವರ್​ ಕೊಹ್ಲಿ ಪರ ಬ್ಯಾಟ್​ ಬೀಸಿದರು. (ಏಜೆನ್ಸೀಸ್​)

    ಇದನ್ನು ಸಾಧಿಸಲೇಬೇಕು… ಕೋಚ್​ ಹುದ್ದೆ ತೊರೆಯುವಾಗ​ ಕೊಹ್ಲಿಗೆ ಮತ್ತೊಂದು ಟಾರ್ಗೆಟ್ ನೀಡಿದ​ ದ್ರಾವಿಡ್​!​

    ವಿಚ್ಛೇದಿತ ಖ್ಯಾತ ಯೂಟ್ಯೂಬರ್​ ಜತೆ ನಟಿ ಸುನೈನಾ ನಿಶ್ಚಿತಾರ್ಥ! ನಿಗೂಢ ಫೋಟೋ ರಹಸ್ಯ ಬಯಲು

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts