More

    ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕೊಹ್ಲಿ ನಿವೃತ್ತಿ ಘೋಷಣೆ ಹಿಂದಿರುವ ಅಸಲಿ ಕಾರಣ ಇದು! ಬಿಸಿಸಿಐ ವಿರುದ್ಧ ಆಕ್ರೋಶ

    ನವದೆಹಲಿ: ಟಿ20 ವಿಶ್ವಕಪ್​ ಟೂರ್ನಿಯ ಲೀಗ್​ ಪಂದ್ಯಗಳಲ್ಲಿ ರನ್​​ ಗಳಿಸಲು ಪರದಾಡಿದ್ದ ವಿರಾಟ್​ ಕೊಹ್ಲಿ ಮೇಲೆ ಬಹುತೇಕ ಮಾಜಿ ಕ್ರಿಕೆಟಿಗರು ಕಿಡಿಕಾರಿದ್ದರು. ಆದರೆ, ನಾಯಕ ರೋಹಿತ್​ ಶರ್ಮ ಮತ್ತು ಕೋಚ್​ ರಾಹುಲ್​ ದ್ರಾವಿಡ್​ ಮಾತ್ರ ಭರವಸೆ ಇಟ್ಟುಕೊಂಡಿದ್ದರು. ಇಂಗ್ಲೆಂಡ್​ ವಿರುದ್ಧ ನಡೆದ ಸೆಮಿಫೈನಲ್​ನಲ್ಲಿ ಕೇವಲ 9 ರನ್​ ಗಳಿಸಿ ಔಟಾಗುವ ಮೂಲಕ ಕಣ್ಣೀರಿಟ್ಟದ್ದ ಕೊಹ್ಲಿಯನ್ನು ದ್ರಾವಿಡ್​ ಮತ್ತು ರೋಹಿತ್​ ಸಮಾಧಾನ ಮಾಡಿದ್ದರು. ಕೊಹ್ಲಿಯ ಕಳಪೆ ಫಾರ್ಮ್​ ಬಗ್ಗೆ ವರದಿಗಾರರು ಪ್ರಶ್ನಿಸಿದಾಗ ಆತನೊಬ್ಬ ಸ್ಟಾರ್​ ಪ್ಲೇಯರ್​, ಕ್ರಿಕೆಟ್​ ವೃತ್ತಿ ಜೀವನದ ಒಂದು ಹಂತದಲ್ಲಿ ಎಲ್ಲರು ಕಳಪೆ ಫಾರ್ಮ್​ ಎದುರಿಸುತ್ತಾರೆ. ಫೈನಲ್​ನಲ್ಲಿ ಕೊಹ್ಲಿ ದೊಡ್ಡ ಇನ್ನಿಂಗ್ಸ್​ ಆಡಲಿದ್ದಾರೆ ಎಂದು ರೋಹಿತ್​ ಹೇಳಿದ್ದರು. ಅದೇ ರೀತಿ ಕೊಹ್ಲಿ 76 ರನ್​ ಗಳಿಸುವ ಮೂಲಕ ಫೈನಲ್​ನಲ್ಲಿ ಅಕ್ಷರಶಃ ಅಬ್ಬರಿಸಿದರು ಮತ್ತು ಟಿ20 ವಿಶ್ವಕಪ್​ ಗೆಲುವಿನಲ್ಲಿ ಪ್ರಮುಖ ಕಾರಣರಾದರು.

    ನಿನ್ನೆ (ಜೂನ್​ 29) ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಫೈನಲ್​ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್​ ಇಂಡಿಯಾ 34 ರನ್​ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕ್ಕಿತ್ತು. ಈ ವೇಳೆ ಕೊಹ್ಲಿ ಜತೆಗೂಡಿದ ಅಕ್ಷರ್ ಪಟೇಲ್ ಭಾರತಕ್ಕೆ ನೆರವಾದರು. ಟೀಮ್​ ಇಂಡಿಯಾ ವಿಶ್ವಕಪ್ ಗೆಲ್ಲುವಲ್ಲಿ ಇವರಿಬ್ಬರ ಜೊತೆಯಾಟ ನಿರ್ಣಾಯಕವಾಗಿತ್ತು. ವಿಶ್ವಕಪ ಗೆದ್ದ ನಂತರ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಮಾದರಿ ಪಂದ್ಯಗಳಿಗೆ ನಿವೃತ್ತಿ ಘೋಷಿಸಿದರು. ಕೊಹ್ಲಿಯ ಈ ನಿರ್ಧಾರದಿಂದ ಒಂದು ಕ್ಷಣ ಎಲ್ಲರು ಶಾಕ್​ ಆದರು. ಇಷ್ಟು ಬೇಗ ಕೊಹ್ಲಿ ನಿವೃತ್ತಿ ಕೊಡಬೇಕಾಗಿರಲಿಲ್ಲ. ಇನ್ನು ನಾಲ್ಕೈದು ವರ್ಷ ಆಡುವ ಸಾಮರ್ಥ್ಯ ಅವರಲ್ಲಿದೆ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಕೊಹ್ಲಿ ನಿವೃತ್ತಿಗೆ ಅವರೇ ಕಾರಣವೇ? ಅಥವಾ ಬಿಸಿಸಿಐಗೆ ಮೊದಲೇ ಎಲ್ಲವೂ ಗೊತ್ತಿತ್ತಾ? ಎಂಬ ಅನುಮಾನವನ್ನು ನೆಟ್ಟಿಗರು ವ್ಯಕ್ತಪಡಿಸುತ್ತಿದ್ದಾರೆ.

    ಟೀಮ್ ಇಂಡಿಯಾ 2024ರ ಟಿ20 ವಿಶ್ವಕಪ್ ಟ್ರೋಫಿಗೆ ಹೆಮ್ಮೆಯಿಂದ ಚುಂಬಿಸಿದೆ. ಶನಿವಾರ (ಜೂನ್​ 29) ವೆಸ್ಟ್​ಇಂಡೀಸ್​ನ ಬಾರ್ಬಡೋಸ್​ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪ್ರಶಸ್ತಿ ಹೋರಾಟದಲ್ಲಿ 7 ರನ್‌ಗಳ ರೋಚಕ ಜಯವನ್ನು ದಾಖಲಿಸಿದೆ. ಆ ಮೂಲಕ 13 ವರ್ಷಗಳ ವಿಶ್ವಕಪ್ ಕನಸು ನನಸಾಗಿದೆ. ಇದೇ ಸಂದರ್ಭದಲ್ಲಿ ಈ ಟೂರ್ನಿಯ ಎಲ್ಲ ಪಂದ್ಯಗಳಲ್ಲಿ ವಿಫಲರಾಗಿ ಟೀಕೆಗಳನ್ನು ಎದುರಿಸಿದ್ದ ಕಿಂಗ್ ಕೊಹ್ಲಿ ಫೈನಲ್ ಪಂದ್ಯದಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿದರು. 34 ರನ್​ಗೆ 3 ನಿರ್ಣಾಯಕ ವಿಕೆಟ್ ಕಳೆದುಕೊಂಡು ಟೀಮ್​ ಇಂಡಿಯಾ ಸಂಕಷ್ಟದಲ್ಲಿದ್ದಾಗ ಅಕ್ಷರ್ ಪಟೇಲ್ ಜತೆಗೂಡಿ ಕೊಹ್ಲಿ ರನ್​ ಮಳೆ ಹರಿಸಿದರು. ಈ ಪಂದ್ಯದಲ್ಲಿ 59 ಎಸೆತಗಳನ್ನು ಎದುರಿಸಿದ ಕೊಹ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 76 ರನ್ ಗಳಿಸಿದರು. ಈ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಟೀಮ್​ ಇಂಡಿಯಾ ವಿಶ್ವಕಪ್ ಗೆದ್ದ ಬೆನ್ನಲ್ಲೇ ವಿರಾಟ್ ಕೊಹ್ಲಿ ಅನಿರೀಕ್ಷಿತ ನಿರ್ಧಾರ ಕೈಗೊಂಡರು.

    ಇದು ನನ್ನ ಕೊನೆಯ ವಿಶ್ವಕಪ್ ಮತ್ತು ಟಿ20 ಪಂದ್ಯವೂ ಆಗಿದೆ. ಯುವ ಕ್ರಿಕೆಟಿಗರಿಗೆ ಅವಕಾಶ ನೀಡಲು ಹಿಂದೆ ಸರಿಯುತ್ತಿದ್ದೇನೆ ಎಂದು ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಹೇಳಿದರು. ಇನ್ನು ಮುಂದೆ ಟಿ20ಯಲ್ಲಿ ವಿರಾಟ್ ಕಾಣಿಸಿಕೊಳ್ಳುವುದಿಲ್ಲ ಎಂದು ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಕ್ರೀಡಾ ವಲಯದಲ್ಲಿ ವಿಷಯವೊಂದು ಚರ್ಚೆಗೆ ಗ್ರಾಸವಾಗಿದೆ. ವಿರಾಟ್ ಕೊಹ್ಲಿಗೆ ನಿವೃತ್ತಿಯಾಗಲು ಕಾರಣವೇನು? ಇದೆಲ್ಲ ಬಿಸಿಸಿಐಗೆ ಮೊದಲೇ ಗೊತ್ತಿತ್ತಾ? ಕೊಹ್ಲಿ ನಿವೃತ್ತಿಗೆ ಗೌತಮ್ ಗಂಭೀರ್ ಕಾರಣ ಎಂಬ ಪ್ರಶ್ನೆಯನ್ನು ನೆಟ್ಟಿಗರು ಎತ್ತುತ್ತಿದ್ದಾರೆ.

    ಟಿ20 ವಿಶ್ವಕಪ್ ನಂತರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಟಿ20 ಸ್ವರೂಪಕ್ಕೆ ವಿದಾಯ ಹೇಳಲಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು ಮತ್ತು ಅದು ಸಂಭವಿಸಿತು ಕೂಡ. ಆದರೆ ವಿರಾಟ್ ಕೊಹ್ಲಿ ಅವರ ಫಿಟ್ನೆಸ್ ನೋಡಿದರೆ ಅವರು ಇನ್ನೂ ಕೆಲವು ವರ್ಷಗಳ ಕಾಲ ಟಿ20ಯಲ್ಲಿ ಮುಂದುವರಿಯುವ ಸಾಮರ್ಥ್ಯ ಇದೆ. ಆದರೆ, ಕೊಹ್ಲಿ ದಿಢೀರನೇ ಏಕೆ ನಿವೃತ್ತಿ ಘೋಷಿಸಿದರು? ಈ ಸೆನ್ಸೇಷನಲ್ ನಿರ್ಧಾರದ ಹಿಂದೆ ಗೌತಮ್ ಗಂಭೀರ್ ಕೈವಾಡ ಇದೆ ಎಂದು ಕ್ರೀಡಾಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

    ಟೀಮ್​ ಇಂಡಿಯಾದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಹೆಸರನ್ನು ಬಹುತೇಕ ಅಂತಿಮಗೊಳಿಸಲಾಗಿದೆ ಎಂಬ ವರದಿಗಳಿವೆ. ಒಂದು ವೇಳೆ ನಾನು ಮುಖ್ಯ ಕೋಚ್ ಆದರೆ, ಹಿರಿಯರನ್ನು ತೆಗೆದುಹಾಕಲು ಹಿಂಜರಿಯುವುದಿಲ್ಲ ಎಂದು ಗಂಭೀರ್, ಬಿಸಿಸಿಐಗೆ ಹೇಳಿದ್ದಾರೆ ಎನ್ನಲಾಗಿದೆ. ಮೇಲಾಗಿ ಗಂಭೀರ್ ಮತ್ತು ವಿರಾಟ್ ನಡುವೆ ಜಗಳ ನಡೆದಿರುವುದು ಗೊತ್ತಿಲ್ಲದ ಸಂಗತಿಯೇನಲ್ಲ. ವಿರಾಟ್ ಕೊಹ್ಲಿ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಂಡಿದ್ದಾರೆಂದು ತೋರುತ್ತದೆ. ಇದೆಲ್ಲವೂ ಬಿಸಿಸಿಐ ಗೊತ್ತಿದೆ ಎಂದು ನೆಟಿಜನ್‌ಗಳು ಆರೋಪಿಸುತ್ತಿದ್ದಾರೆ. (ಏಜೆನ್ಸೀಸ್​)

    ಟಿ20 ವಿಶ್ವಕಪ್​ ಗೆದ್ದ ಬೆನ್ನಲ್ಲೇ ಪಿಚ್​ನಲ್ಲಿನ ಮಣ್ಣು ತಿಂದ ರೋಹಿತ್​ ಶರ್ಮ! ಹಿಟ್​ಮ್ಯಾನ್ ನಡೆಗೆ ಎಲ್ಲೆಡೆ ಮೆಚ್ಚುಗೆ​

    ನಾವು ಗೆಲ್ಲಬಹುದಿತ್ತು ಆದರೆ…; ಫೈನಲ್​ ಸೋಲಿನ ಕುರಿತು ದಕ್ಷಿಣ ಆಫ್ರಿಕಾ ನಾಯಕ ಮಾರ್ಕ್ರಮ್​ ಹೇಳಿದ್ದಿಷ್ಟು

    ಆ ಘಟನೆಗಳನ್ನು ನೆನೆಸಿಕೊಂಡರೆ ಈಗಲೂ…; ಟಿ20 ವಿಶ್ವಕಪ್​ ಗೆಲುವಿನ ಬಳಿಕ ಹಾರ್ದಿಕ್​ ಪಾಂಡ್ಯ ಭಾವುಕ ನುಡಿ

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts