More

    ಟಿ20 ವಿಶ್ವಕಪ್​ನಲ್ಲಿ ಕೊಹ್ಲಿ ಸತತ ವೈಫಲ್ಯ! ಅಸಲಿ ಕಾರಣ ಬಿಚ್ಚಿಟ್ಟು ವಿರಾಟ್​ರನ್ನು ಹೊಗಳಿದ ರಾಹುಲ್​ ದ್ರಾವಿಡ್​

    ನವದೆಹಲಿ: ಇಂಗ್ಲೆಂಡ್ ವಿರುದ್ಧ ನಿನ್ನೆ (ಜೂನ್​ 27) ನಡೆದ ಟಿ20 ವಿಶ್ವಕಪ್​ ಸೆಮಿಫೈನಲ್ ಪಂದ್ಯದಲ್ಲಿ ಟೀಮ್​ ಇಂಡಿಯಾ ಸೂಪರ್​ ಗೆಲುವು ಸಾಧಿಸುವ ಮೂಲಕ ಫೈನಲ್​ಗೆ ಲಗ್ಗೆ ಇಟ್ಟಿದೆ. 2022ರ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಸೋಲಿಗೆ ರೋಹಿತ್​ ಶರ್ಮ ಪಡೆ ನಿನ್ನೆ ಸೇಡು ತೀರಿಸಿಕೊಂಡಿದೆ. ಈ ಗೆಲುವಿನೊಂದಿಗೆ ಶನಿವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಫೈನಲ್​ ಪಂದ್ಯಕ್ಕೆ ಭಾರತ ತಂಡ ಸಜ್ಜಾಗಿದೆ.

    ಇನ್ನು ಈ ಟೂರ್ನಿಯಲ್ಲಿ ಕಳಪೆ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ, ಸಮಿಫೈನಲ್​ ಪಂದ್ಯದಲ್ಲೂ ಅದೇ ಫಾರ್ಮ್ ಮುಂದುವರೆಸಿದರು. ಇಂಗ್ಲೆಂಡ್ ವಿರುದ್ಧ ಕೇವಲ 9 ರನ್ ಗಳಿಸಿ ಔಟಾದರು. ಕೊಹ್ಲಿ ಸತತ ವೈಫಲ್ಯದ ಬೆನ್ನಲ್ಲೇ ಟೀಮ್​ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್​ ಪ್ರತಿಕ್ರಿಯಿಸಿದ್ದು, ಕುತೂಹಲಕಾರಿ ಕಾಮೆಂಟ್ ಮಾಡಿದ್ದಾರೆ ಮತ್ತು ಕೊಹ್ಲಿ ಅವರನ್ನು ಕೊಂಡಾಡಿದ್ದಾರೆ.

    ವಿರಾಟ್ ಕೊಹ್ಲಿ ಎಂಥಾ ಶ್ರೇಷ್ಠ ಆಟಗಾರ ಎಂಬುದು ನಮಗೆಲ್ಲರಿಗೂ ಗೊತ್ತು. ಆದಾಗ್ಯೂ, ಕೆಲವೊಮ್ಮೆ ಆಡುವಾಗ ಹೆಚ್ಚು ರಿಸ್ಕ್ ತೆಗೆದುಕೊಳ್ಳುವುದರಿಂದ ಪ್ರತಿ ಬಾರಿಯೂ ಅದು ಕೂಡಿ ಬರುವುದಿಲ್ಲ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಆಕ್ರಮಣಕಾರಿ ಕ್ರಿಕೆಟ್ ಆಡಲು ಪ್ರಯತ್ನಿಸಿದರು. ಇನ್ನಿಂಗ್ಸ್​ ಆರಂಭದಲ್ಲಿ ಅವರು ಅದ್ಭುತ ಸಿಕ್ಸರ್ ಬಾರಿಸಿದರು. ಆದರೆ, ದುರದೃಷ್ಟವಶಾತ್ ಮುಂದಿನ ಚೆಂಡು ಸ್ವಲ್ಪ ಹೆಚ್ಚು ಸೀಮ್ ಆಗಿತ್ತು. ಆದರೆ, ಅವರ ಉದ್ದೇಶ ಚೆನ್ನಾಗಿಯೇ ಇತ್ತು. ಆಕ್ರಮಣಕಾರಿ ಉದ್ದೇಶದಿಂದ ಆಡುತ್ತಿರುವ ಕೊಹ್ಲಿಯನ್ನು ಮೆಚ್ಚಲೇಬೇಕು. ಕೊಹ್ಲಿ ತೋರಿದ ಉದ್ದೇಶ ಇತರ ಆಟಗಾರರಿಗೆ ಮಾದರಿಯಾಗಲಿದೆ. ಆದರೆ, ಒಂದಂತೂ ಖಚಿತವಾಗಿ ಹೇಳಬಲ್ಲೆ ಫೈನಲ್​ನಲ್ಲಿ ಕೊಹ್ಲಿಯಿಂದ ಬೃಹತ್ ಇನ್ನಿಂಗ್ಸ್ ಬರಲಿದೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.

    ಇಡೀ ಟೂರ್ನಿಯಲ್ಲಿ ಕೊಹ್ಲಿ ಅವರ ಗರಿಷ್ಠ ಸ್ಕೋರ್ 37 ರನ್. ಅವರು ಬಾಂಗ್ಲಾದೇಶ ವಿರುದ್ಧದ ಸೂಪರ್ 8 ಪಂದ್ಯದಲ್ಲಿ ಈ ಸ್ಕೋರ್​ ಮಾಡಿದರು. ಆದರೆ, ಈ ಟೂರ್ನಿಯಲ್ಲಿ ಕೊಹ್ಲಿ ತಮ್ಮ ನಿರೀಕ್ಷೆಯ ಮಟ್ಟಕ್ಕೆ ಆಡುತ್ತಿಲ್ಲ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಆದರೆ, ಆಕ್ರಮಣಕಾರಿ ಆಟವಾಡುತ್ತಲೇ ಕೊಹ್ಲಿ ಬೇಗನೇ ಔಟಾಗುತ್ತಿದ್ದಾರೆ ಎನ್ನುತ್ತಾರೆ ಕ್ರಿಕೆಟ್ ತಜ್ಞರು.

    ಇನ್ನು ಟೀಮ್​ ಇಂಡಿಯಾ ಈ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್‌ಗೆ ಆರಂಭಿಕ ಜೊತೆಗಾರನಾಗಿ ಯಶಸ್ವಿ ಜೈಸ್ವಾಲ್ ಬದಲು ಕೊಹ್ಲಿಯನ್ನು ಆಡಿಸುತ್ತಿದೆ. ಇದು ಕೊಹ್ಲಿ ಮೇಲೆ ಒಂದಿಷ್ಟು ಒತ್ತಡವನ್ನೂ ಹೇರುತ್ತಿರುವುದು ನಿಜ. ಆದರೆ, ಕೊಹ್ಲಿಗೆ ಆರಂಭಿಕರಾಗಿ ಆಡುವುದು ಹೊಸದಲ್ಲ. ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಓಪನರ್ ಆಗಿ ಆಡಿರುವ ಕೊಹ್ಲಿ ಟೀಮ್​ ಇಂಡಿಯಾ ಪರ ಹಲವು ಬಾರಿ ಆರಂಭಿಕರಾಗಿ ಆಡಿರುವ ಅನುಭವ ಇದೆ. (ಏಜೆನ್ಸೀಸ್​)

    ಕಳಪೆ ಫಾರ್ಮ್‌ನಲ್ಲಿರುವ ಕೊಹ್ಲಿಯನ್ನು ಬೆಂಬಲಿಸುತ್ತೀರಾ? ರೋಹಿತ್​ ಶರ್ಮ ಕೊಟ್ಟ ಉತ್ತರ ವೈರಲ್​

    ಅಂದು ರೋಹಿತ್ ಮಾಡಿದ ಪ್ಲಾನ್​ ಯಾರಿಗೂ ಅರ್ಥವಾಗಲಿಲ್ಲ ಇಂದು ಅದೇ ಪ್ಲಾನ್​ ಫೈನಲ್​​ ಎಂಟ್ರಿಗೆ ಕಾರಣವಾಯ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts