More

    ಟಿ20 ವಿಶ್ವಕಪ್ 2024: ಮತ್ತೊಮ್ಮೆ ಎಡವಿದ ‘ಕಿಂಗ್’ ಕೊಹ್ಲಿ! ದಾಖಲೆಗಳ ಸರದಾರನಿಗೆ ತಪ್ಪದ…

    ಗುಯಾನ: ಇಲ್ಲಿನ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್​ ನಡುವಿನ ಸೆಮಿಫೈನಲ್​ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಇಂಗ್ಲೆಂಡ್​, ಬ್ಯಾಟ್ ಮಾಡುವಂತೆ ಭಾರತಕ್ಕೆ ಆಹ್ವಾನಿಸಿತು. ಅದರಂತೆಯೇ ಮೊದಲು ಬ್ಯಾಟಿಂಗ್​ಗೆ ಇಳಿದಿರುವ ಟೀಮ್ ಇಂಡಿಯಾ ಪರ ಆರಂಭಿಕ ಬ್ಯಾಟ್ಸ್​ಮನ್​ ಆಗಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕಣಕ್ಕಿಳಿದರು. ಈ ವೇಳೆ ಇಂಗ್ಲೆಂಡ್​ ವೇಗಿಗಳ ಆರ್ಭಟಕ್ಕೆ ಶರಣಾದ ಕಿಂಗ್ ಕೊಹ್ಲಿ, ಕೇವಲ 9 ರನ್​ ಗಳಿಸಿ, ಪೆವಿಲಿಯನ್​ನತ್ತ ಸಾಗಿದರು.

    ಇದನ್ನೂ ಓದಿ: ಅಂಗವಿಕಲರಿಗೆ ಬೆಳಕಾದ ಜನಮಂಗಲ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡುಗೆ

    ರೀಸ್ ಟೋಪ್ಲಿ ಬೌಲಿಂಗ್​ಗೆ ವಿಕೆಟ್ ಕಳೆದುಕೊಂಡ ವಿರಾಟ್, 9 ಎಸೆತಗಳಲ್ಲಿ ಕೇವಲ 9 ರನ್​ ಗಳಿಸಲಷ್ಟೇ ಶಕ್ತರಾದರು. ಪ್ರಾಯಶಃ ಈ ಪಂದ್ಯದಲ್ಲಿಯಾದರೂ ವಿರಾಟ್ ಅವರ ಅಬ್ಬರ ನೋಡಬಹುದು ಎಂದು ಅಪಾರ ನಿರೀಕ್ಷೆ ಹೊತ್ತುಬಂದಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಇದೀಗ ಮತ್ತೊಮ್ಮೆ ನಿರಾಸೆ ಉಂಟಾಗಿದೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆರಂಭದ ಮೊದಲ ಪಂದ್ಯದಿಂದಲೂ ಕಳಪೆ ಪ್ರದರ್ಶನ ತೋರುತ್ತ ಬಂದಿರುವ ಕೊಹ್ಲಿ, ಯಾಕಿಂತ ಆಟಕ್ಕಿಳಿದಿದ್ದಾರೆ ಎಂದು ಫ್ಯಾನ್ಸ್ ಪ್ರಶ್ನಿಸಲು ಪ್ರಾರಂಭಿಸಿದ್ದಾರೆ.

    ಪ್ರಸಕ್ತ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿರುವ ವಿರಾಟ್​, ಆಡಿದ ಅಷ್ಟು ಪಂದ್ಯಗಳಲ್ಲಿ ಕಡಿಮೆ ರನ್​ಗಳನ್ನು ಗಳಿಸಿದ್ದು, ಎರಡು ಬಾರಿ ಡಕ್ ಔಟ್ ಆಗಿ ಪೆವಿಲಿಯನ್​ನತ್ತ ಮುಖಮಾಡಿದ್ದಾರೆ. 7 ಪಂದ್ಯಗಳನ್ನಾಡಿರುವ ಕಿಂಗ್ ಕೊಹ್ಲಿ, 100.0 ಸ್ಟ್ರೈಕ್​ರೇಟ್​ನಡಿ ಕೇವಲ 66 ರನ್​ಗಳನ್ನು ಗಳಿಸಿದ್ದಾರೆ,(ಏಜೆನ್ಸೀಸ್). 

    ಎದೆಯಲ್ಲಿ ಕುದಿಯುತ್ತಿದ್ದ ಸೇಡು ಜ್ವಾಲೆಯಂತೆ ಸ್ಫೋಟ; ಈ ಕ್ಷಣಕ್ಕಾಗಿಯೇ ಕಾದು ಕುಳಿತಿದ್ದರು ಅಭಿಮಾನಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts