More

    ಕಾಡಿನಿಂದ ನಾಡಿಗೆ ಬಂದ ಚಿರತೆ: ಮೈದಡವಿ, ಸೆಲ್ಫಿ ತೆಗೆದುಕೊಂಡ ಗ್ರಾಮಸ್ಥರು..!

    ದೇವಾಸ್: ಚಿರತೆ ಕಂಡರೆ ಜನ ಹೆದರುತ್ತಾರೆ, ಆದರೆ ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ಜನರು ಚಿರತೆ ಸವಾರಿ ಮತ್ತು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಇದು ಕೇಳಲು ಸ್ವಲ್ಪ ವಿಚಿತ್ರವೆನಿಸಿದರೂ ನಿಜವಾಗಿ ನಡೆದ ಸತ್ಯ ಘಟನೆಯಾಗಿದೆ.

    ಇದನ್ನೂ ಓದಿ: ದಿನನಿತ್ಯ ಕ್ಯಾರೆಟ್ ತಿಂದರೆ, ಜ್ಯೂಸ್ ಕುಡಿದರೆ ಈ ಎಲ್ಲಾ ಸಮಸ್ಯೆಗಳು ದೂರವಾಗುತ್ತೆ..

    ದೇವಾಸ್ ಜಿಲ್ಲೆಯ ಟೊಂಕುರ್ಡ್ ತಹಸಿಲ್‌ನ ಪೀಪಾಲ್‌ರಾವನ್ ಪೊಲೀಸ್ ಠಾಣೆಯಲ್ಲಿರುವ ಪ್ರಸಿದ್ಧ ಮಾ ಬಿಜಸಾನಿ ಮಾತಾ ದೇವಸ್ಥಾನದ ಬಳಿ ಚಿರತೆಯೊಂದು ಕಾಣಿಸಿಕೊಂಡಿದೆ. ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಗ್ರಾಮಸ್ಥರು ಚಿರತೆಯನ್ನು ನೋಡಿ ಕಂಡು ಹೆದರಿದ್ದಾರೆ. ಆ ಬಳಿಕ ಈ ಸುದ್ದಿ ಗ್ರಾಮದಲ್ಲಿ ಹಬ್ಬಿದ್ದು, ಗ್ರಾಮಸ್ಥರು ಅದನ್ನು ಓಡಿಸಬೇಕೆಂದು ಯೋಚಿಸಿ ಗುಂಪಾಗಿ ಚಿರತೆ ಬಳಿ ಬಂದಿದ್ದಾರೆ. ಗ್ರಾಮಸ್ಥರು ಓಡಿಸಲು ಯತ್ನಿಸಿದರೂ ಸಹಿತ ಅದು ತನ್ನ ಸ್ಥಳದಿಂದ ಕದಲದೇ ಸುಮ್ಮನೆ ಕುಳಿತಿತ್ತು. ಬಹಳ ಹೊತ್ತಾದರೂ ಚಿರತೆ ಏನೂ ಮಾಡದಿದ್ದಾಗ ಗ್ರಾಮಸ್ಥರು ಅದರ ಬಳಿ ಹೋಗುವ ದೈರ್ಯ ತೋರಿದ್ದಾರೆ.

    ಗ್ರಾಮಸ್ಥರು ದೂರದಲ್ಲಿಯೇ ಕಾದು ಕುಳಿತರೂ ಸಹ ಚಿರತೆ ಕುಳಿತಲ್ಲಿಯೇ ಕುಳಿತಿತ್ತು. ಇದಾದ ನಂತರ ಗ್ರಾಮಸ್ಥರು ಚಿರತೆ ಅನಾರೋಗ್ಯದಿಂದ ಬಳಲುತ್ತಿರಬೇಕೆಂದು ಭಾವಿಸಿ ಗುಂಪು ಕಟ್ಟಿಕೊಂಡು ಅದರೆಡೆಗೆ ಹೋಗಿದ್ದಾರೆ. ಆದರೆ, ಗುಂಪಿನಲ್ಲಿದ್ದ ಕೆಲವರು ಚಿರತೆ ಕಾಣಿಸಿಕೊಂಡ ಬಗ್ಗೆ ಅರಣ್ಯ ಇಲಾಖೆ ತಂಡಕ್ಕೆ ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: ನಕಲಿ ಬಾಬಾ ಬಳಿ ಹೋದ ನವ ವಧುವಿಗೆ ಕಾದಿತ್ತು ಶಾಕ್​..!

    ಇಷ್ಟೊಂದು ಶಾಂತ ಚಿರತೆಯನ್ನು ಗ್ರಾಮಸ್ಥರು ನೋಡಿರದ ಗ್ರಾಮಸ್ಥರು ಚಿರತೆಯೊಂದಿಗೆ ಆಟವಾಡಲು ಶುರು ಮಾಡಿದ್ದಾರೆ. ಕೆಲವರು ಇದೇ ಸಂದರ್ಭ ಬಳಸಿಕೊಂಡು ಚಿರತೆಯೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಇನ್ನು ಕೆಲವರು ಅದರ ಮೈದಡವಿದ್ದಾರೆ. ಕೊನೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿದಾಗ ಚಿರತೆಯ ಆರೋಗ್ಯ ಚೆನ್ನಾಗಿಲ್ಲ. ಇದಕ್ಕೆ ಚಿಕಿತ್ಸೆ ಅಗತ್ಯವಿದೆ ಎಂದು ಹೇಳಿ ಬೋನಿನಲ್ಲಿ ಕೊಂಡೊಯ್ದಿದ್ದಾರೆ.(ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts