More

    6 ತಿಂಗಳಿಂದ ಪ್ರೇಕ್ಷಕರ ಕಾಣದ ಚಿತ್ರಮಂದಿರ ಈಗ ಹೌಸ್​ಫುಲ್! ಇದು ಪ್ರಭಾಸ್​ ‘ಕಲ್ಕಿ’ ಪ್ರಭಾವ

    ವಿಜಯಪುರ: ನಿನ್ನೆ (ಜೂ.27) ಟಾಲಿವುಡ್​ ರೆಬೆಲ್ ಸ್ಟಾರ್​ ಪ್ರಭಾಸ್ ಮತ್ತು ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಅಭಿನಯದ ಬಹುನಿರೀಕ್ಷಿತ ಸೈನ್ಸ್​-ಫಿಕ್ಷನ್​, ಥ್ರಿಲ್ಲರ್ ‘ಕಲ್ಕಿ 2898 AD’ ಚಿತ್ರವು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದ್ದು, ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ನಾಗ್ ಅಶ್ವಿನ್ ನಿರ್ದೇಶನದ ಈ ಸಿನಿಮಾ ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆದ ಪ್ರಭಾಸ್​ ‘ಕಲ್ಕಿ’ ಬಾಕ್ಸ್​ ಆಫೀಸ್​ನಲ್ಲಿ ಕೂಡ ಅಬ್ಬರಿಸುತ್ತಿದೆ.

    ಇದನ್ನೂ ಓದಿ: ‘ಕುಸಿದ ಮೇಲ್ಛಾವಣಿ ಮೋದಿ ಆಡಳಿತದಲ್ಲಿ ನಿರ್ಮಿಸಿದ್ದಲ್ಲ’: ರಾಂ ಮೋಹನ್​ ನಾಯ್ಡು

    ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಕಲ್ಕಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಇತ್ತೀಚಿನ ದಿನಗಳಲ್ಲಿ ನಮಗೆಲ್ಲಾ ತಿಳಿದಿರುವಂತೆ ರಾಜ್ಯದಲ್ಲಿ ಸಿಂಗಲ್ ಸ್ಕ್ರೀನ್​​ ಥಿಯೇಟರ್​ಗಳು ಒಂದೊಂದೆ ಕಣ್ಮರೆಯಾಗುತ್ತಿದ್ದು, ಚಿತ್ರಮಂದಿರಗಳಿಗೆ ಉಳಿಗಾಲವಿಲ್ಲ ಎನ್ನುವಂತಾಗಿದೆ. ಅದರಲ್ಲೂ ಸಿಂಗಲ್​ ಸ್ಕ್ರೀನ್​ ಮಾಲೀಕರು ಪ್ರೇಕ್ಷಕರಿಲ್ಲದೆ, ಬಣಗುಡುತ್ತಿರುವ ಚಿತ್ರಮಂದಿರಗಳನ್ನು ನಡೆಸಲಾಗದೆ, ಅಂತ್ಯವಾಡುತ್ತಿದ್ದಾರೆ.

    ಸದ್ಯ ಇದೇ ರೀತಿ ವಿಜಯಪುರದಲ್ಲಿರುವ ಚಿತ್ರಮಂದಿರವೊಂದು ಕಳೆದ ಆರು ತಿಂಗಳಿಂದ ಜನರಿಲ್ಲದೆ, ಪ್ರದರ್ಶನಗಳಿಲ್ಲದೆ ಬಂದ್ ಆಗಿತ್ತು. ಆದರೆ, ಇದೀಗ ಪ್ರಭಾಸ್​ ಅಭಿನಯದ ‘ಕಲ್ಕಿ’ ಸಿನಿಮಾ ತೆರೆಕಂಡಿದ್ದೇ ತಡ, ಹಕ್ಕಿಗಳು ಕಾಣಿಸಿದ ಚಲನಚಿತ್ರಮಂದಿರದಲ್ಲಿ ಜನರ ನೂಕುನುಗ್ಗಲು ಸದ್ದು ಮಾಡಲಾರಂಭಿಸಿದೆ. ಈ ಹಿಂದೆ ಇದೆ ಪ್ರಭಾಸ್ ನಟನೆಯ ‘ಸಲಾರ್’ ಬಿಡುಗಡೆ ಸಂದರ್ಭದಲ್ಲಿ ಚಲನಚಿತ್ರ ಮಂದಿರಗಳು ಭರ್ತಿಯಾಗಿದ್ದು, ಆ ನಂತರದಲ್ಲಿ ಪ್ರೇಕ್ಷಕರಿಲ್ಲದೆ ಬಣಗುಡುತ್ತಿತ್ತು.

    ಇದನ್ನೂ ಓದಿ: ಹಾವೇರಿ ಭೀಕರ ಅಪಘಾತ; ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ ಸಿಎಂ, ಸಂತಾಪ ಸೂಚಿಸಿದ ಗಣ್ಯರು

    ಬಹಳಷ್ಟು ಸಂದರ್ಭದಲ್ಲಿ ಪ್ರೇಕ್ಷಕರಿಲ್ಲದೆ ಚಿತ್ರಮಂದಿರ ನಡೆಸದ ಪರಿಸ್ಥಿತಿ ನಿರ್ವಣವಾಗಿ, ಕೆಲವು ಬಾರಿ ಕೇವಲ 5ರಿಂದ 7 ಪ್ರೇಕ್ಷಕರಿಗಾಗಿ ಸಿನಿಮಾ ತೋರಿಸಿದ ಸಂದರ್ಭಗಳೂ ಇದ್ದವು. ಇದೀಗ ಪ್ರಭಾಸ್ ನಟನೆಯ ‘ಕಲ್ಕಿ’ ಸಿನಿಮಾ ಬಿಡುಗಡೆಯಾಗಿದ್ದು, ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಗುರುವಾರ ಬೆಳಗ್ಗೆ 7 ಗಂಟೆಗೆ ಪಟ್ಟಣದ ಗೌರಿಶಂಕರ ಚಲನಚಿತ್ರ ಮಂದಿರದ ಬಳಿ ಜನ ಕಲ್ಕಿ ಸಿನಿಮಾ ಟಿಕೆಟ್​ಗಾಗಿ ಕ್ಯೂ ನಿಂತಿದ್ದರು. ನಾಲ್ಕು ಆಟಗಳು ಗೌರಿಶಂಕರ್ ಥಿಯೇಟರ್​ನಲ್ಲಿ ಪ್ರದರ್ಶನವಾಗುತ್ತಿದ್ದು, ಚಿತ್ರಮಂದಿರ ಭರ್ತಿಯಾಗಿದೆ ಎಂಬ ಬೋರ್ಡ್​ನೊಂದಿಗೆ ಮಂದಹಾಸ ಬೀರಿದೆ.

    ಪ್ರೇಕ್ಷಕರ ಆಗಮನದಿಂದ ಗೌರಿಶಂಕರ ಚಿತ್ರಮಂದಿರದ ಮಾಲೀಕ ಎಂ.ಸತೀಶ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ. ಪ್ಯಾನ್ ಇಂಡಿಯಾ ಕಲ್ಕಿ ಚಿತ್ರದಲ್ಲಿ ಪ್ರಭಾಸ್​, ದೀಪಿಕಾ ಪಡುಕೋಣೆ, ದಿಶಾ ಪಟಾನಿ, ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಸೇರಿದಂತೆ ಮುಂತಾದವರ ತಾರಾಗಣವಿದೆ.

    ಭಾರತದ ಹೆಡ್​ ಕೋಚ್​ ಆಗುವುದಾದರೆ… ಗೌತಮ್ ಗಂಭೀರ್​ ಮುಂದಿಟ್ಟ 5 ಬೇಡಿಕೆಗಳಿಗೆ ದಂಗಾದ ಬಿಸಿಸಿಐ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts