More

    ಪೊಲೀಸರಿಂದ ನಾಗರಿಕರಿಗೆ ಬಂದೂಕು ತರಬೇತಿ! ಇಲ್ಲಿದೆ ಟ್ರೇನಿಂಗ್ ವಿವರ

    ವಿಜಯನಗರ: ವಿಜಯನಗರದ ಜಿಲ್ಲಾ ಪೊಲೀಸ್ ವತಿಯಿಂದ ನಾಗರಿಕರಿಗೆ ಬಂದೂಕು ತರಬೇತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಟ್ರೇನಿಂಗ್ ಪಡೆಯಲು ಇಚ್ಚಿಸುವವರು ತಮ್ಮ ಸಮೀಪದ ಪೊಲೀಸ್ ಠಾಣೆಗಳಲ್ಲಿ 03ರಿಂದ ಆಗಸ್ಟ್​ 15ರವರೆಗೆ ಅರ್ಜಿ ಸಲ್ಲಿಕೆ ಮಾಡಬಹುದು.

    ತರಬೇತಿ ಬೇಕು ಎನ್ನುವವರು ಏನೆಲ್ಲ ತರಬೇಕು? ಸೂಚನೆಗಳೇನು?

    ತರಬೇತಿಗೆ ಅರ್ಜಿ ಸಲ್ಲಿಕೆ ಮಾಡುವವರು 21 ವರ್ಷದ ಮೇಲ್ಪಟ್ಟವರಾಗಿರಬೇಕು. ಮೂರು ಪಾಸ್​ಪೋರ್ಟ್​ ಫೋಟೋ, ಮತದಾರರ ಗುರುತಿನ ಚೀಟಿ ತಂದಿರಬೇಕಾಗುತ್ತದೆ. ತರಬೇತಿ ಸಮಯದಲ್ಲಿ ಶಿಸ್ತು ಪಾಲನೆ ಮಾಡಬೇಕು. ಅಶಿಸ್ತು ಕಂಡು ಬಂದಲ್ಲಿ ತಕ್ಷಣವೇ ವಜಾ ಮಾಡಲಾಗುತ್ತದೆ.

    ತರಬೇತಿಗೆ ಬರುವಾಗ ಕಡ್ಡಾಯವಾಗಿ ಶೂ ಧರಿಸಬೇಕು. ಲುಂಗಿ, ಪಂಚೆ ಧರಿಸಲು ಅವಕಾಶವಿಲ್ಲ. ತರಬೇತಿಗೆ ಬರುವಾಗ ಸಣ್ಣ ನೋಟ್ ಪುಸ್ತಕ ತರಬೇಕು. ತರಬೇತಿಯ ಅಭ್ಯರ್ಥಿಗಳು ನಿಗದಿತ ಅರ್ಜಿ ಶುಲ್ಕ, ಮದ್ದುಗುಂಡುಗಳ ಶುಲ್ಕವನ್ನು ಭರಿಸಬೇಕು. ತರಬೇತಿಗೆ ಬರುವವರಲ್ಲಿ ದೃಷ್ಟಿದೋಷ ಇರಬಾರದು. ಮಾನಸಿಕವಾಗಿ ಹಾಗೂ ದೈಹಿಕವಾಗಿ ಉತ್ತಮವಾಗಿರಬೇಕು.

    ಇದನ್ನೂ ಓದಿ: ಡ್ರ್ಯಾಗನ್​ ಫ್ರೂಟ್ಸ್​ ನಿಯಮಿತ ಸೇವನೆಯಿಂದ ಎಷ್ಟೆಲ್ಲ ಲಾಭಗಳಿವೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ

    ಜತೆಗೆ ತರಬೇತಿ ಮುಗಿದ ಬಳಿಕ ಪ್ರಮಾಣ ಪತ್ರ ನೀಡಲಾಗುತ್ತದೆ. ಸಲ್ಲಿಕೆ ಮಾಡಿದ ಅರ್ಜಿಯನ್ನು ಪುರಸ್ಕಾರ ಅಥವಾ ತಿರಸ್ಕಾರ ಮಾಡುವ ಅಧಿಕಾರ ಜಿಲ್ಲಾ ಎಸ್ಪಿ ಹೊಂದಿರುತ್ತಾರೆ. ಬಂದೂಕು ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿಜಯನಗರ ಪೊಲೀಸ್ ವರಿಷ್ಠಾಧಿಕಾರಿ ಶ್ರಿ ಹರಿಬಾಬು ಬಿಎಲ್ ತಿಳಿಸಿದ್ದಾರೆ

    ಹೊಸಪೇಟೆ ಉಪವಿಭಾಗದ ನಾಗರಿಕರಿಗೆ 21-08-2023 ರಿಂದ 27-08-2023 ರವರೆಗೆ ಹೊಸಪೇಟೆಯ ಡಾ. ಪುನೀತ್ ರಾಜ್‍ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಬಂದೂಕು ತರಬೇತಿ ನೀಡಲಾಗುತ್ತದೆ.

    ಕೂಡ್ಲಿಗಿ ಮತ್ತು ಹರಪನಹಳ್ಳಿ ಉಪವಿಭಾಗದ ನಾಗರಿಕರಿಗೆ 28-08-2023 ರಿಂದ 03-09-2023 ರವರೆಗೆ ಹಗರಿಬೊಮ್ಮನ ಹಳ್ಳಿಯ ಸರ್ಕಾರಿ ಕಾಲೇಜು ಮೈದಾನದಲ್ಲಿ ತರಬೇತಿ ನೀಡಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts