More

    ವಚನ ಸಾಹಿತ್ಯಕ್ಕೆ ಅನನ್ಯ ಕೊಡುಗೆ

    ಕಂಪ್ಲಿ: ಜನ ಸಾಮಾನ್ಯರಿಗೆ ವಚನ ಸಾಹಿತ್ಯ ತಲುಪಿಸುವಲ್ಲಿ ಡಾ.ಫ.ಗು.ಹಳಕಟ್ಟಿ ಅವರ ಪಾತ್ರ ಪ್ರಮುಖವಾಗಿದೆ ಎಂದು ತಹಸೀಲ್ದಾರ್ ಶಿವರಾಜ ಹೇಳಿದರು.

    ಇದನ್ನೂ ಓದಿ: ವಚನ ಸಾಹಿತ್ಯಕ್ಕೆ ಅನನ್ಯ ಕೊಡುಗೆ

    ತಹಸೀಲ್ದಾರ್ ಸಭಾಂಗಣದಲ್ಲಿ ನಡೆದ ಫ.ಗು.ಹಳಕಟ್ಟಿ ಜಯಂತಿ ನಿಮಿತ್ತ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.

    ಹಳಕಟ್ಟಿ ಅವರು ವಚನ ಸಾಹಿತ್ಯವನ್ನು ಸಂಶೋಧಿಸಿ, ಸಂಪಾದನೆಯೊಂದಿಗೆ ಪ್ರಚಾರ ಕಾರ್ಯ ಕೈಗೊಂಡಿದ್ದರಿಂದ ನಾಡಿನಾದ್ಯಂತ ಪಸರಿಸಲು ಸಾಧ್ಯವಾಯಿತು. ವಚನ ಸಾಹಿತ್ಯ ಮುದ್ರಣಕ್ಕಾಗಿ ಸ್ವಂತ ಮನೆ ಮಾರಿ ಮುದ್ರಾಣಾಲಯ ಸ್ಥಾಪಿಸಿದ್ದರಿಂದ ಸಾಹಿತ್ಯ ಕ್ರಾಂತಿಯಾಯಿತು ಎಂದರು.

    ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಪ್ರಕಾಶ್ ಮಾತನಾಡಿ, ವಚನ ಸಾಹಿತ್ಯವನ್ನು ಸಂರಕ್ಷಿಸಿ, ಪೋಷಿಸಲು ಹಳಕಟ್ಟಿಯವರು ಜೀವನಪೂರ್ತಿ ಶ್ರಮಿಸಿದ್ದಾರೆ. 1926ರ ಬಳ್ಳಾರಿಯಲ್ಲಿ ಜರುಗಿದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆವಹಿಸಿದ್ದು ಜಿಲ್ಲೆಗೆ ದೊರೆತ ಗೌರವವಾಗಿದೆ ಎಂದರು.

    ಗ್ರೇಡ್-2 ತಹಸೀಲ್ದಾರ್ ಎಂ.ಆರ್.ಷಣ್ಮುಖ, ಉಪ ತಹಸೀಲ್ದಾರ್ ಬಿ.ರವೀಂದ್ರಕುಮಾರ್, ಶಿರಸ್ತೆದಾರ ಜಿ.ಪಂಪಾಪತಿ, ಎಸ್.ಡಿ.ರಮೇಶ್, ಆರ್.ಒ.ಜಗದೀಶ, ಕಸಾಪ ತಾಲೂಕು ಪದಾಧಿಕಾರಿಗಳಾದ ಎಸ್.ಡಿ.ಬಸವರಾಜ, ಅಶೋಕ ಕುಕನೂರು, ಎಲಿಗಾರ ವೆಂಕಟರೆಡ್ಡಿ, ಜಿ.ಚಂದ್ರಶೇಖರಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts