More

    ಗಾಂಧಿನಗರದಲ್ಲಿ ಪಾಲನೆಯಾಗದ ನೋ ಪಾರ್ಕಿಂಗ್ ವಲಯ

    ಬೆಂಗಳೂರು: ಫ್ರೀಡಂ ಪಾರ್ಕ್‌ನಲ್ಲಿ ಹೊಸದಾಗಿ ಪಾರ್ಕಿಂಗ್ ಸಂಕೀರ್ಣ ಆರಂಭವಾದ ಬೆನ್ನಲ್ಲೇ ಗಾಂಧಿನಗರದ ಸುತ್ತಮುತ್ತ ಒಂದು ಕಿ.ಮೀ. ಸುತ್ತಮುತ್ತ ನೋ ಪಾರ್ಕಿಂಗ್ ವಲಯ ಆದೇಶ ಹೊರಡಿಸಿದ್ದರೂ, ಭಾನುವಾರ ಇಲ್ಲಿನ ಹಲವು ರಸ್ತೆಗಳಲ್ಲಿ ನಾಗರಿಕರು ತಮ್ಮ ವಾಹನಗಳನ್ನು ನಿಲುಗಡೆ ಮಾಡಿದ್ದರೂ ಅವುಗಳನ್ನು ತೆರವುಗೊಳಿಸುವಲ್ಲಿ ಟ್ರಾಫಿಕ್ ಪೊಲೀಸರು ಯಾವ ಕ್ರಮವನ್ನೂ ಕೈಗೊಳ್ಳದಿರುವುದು ಅಚ್ಚರಿ ಮೂಡಿಸಿದೆ.

    ಗಾಂಧಿನಗರದಲ್ಲಿ ಸಂಚಾರ ದಟ್ಟಣೆ ನಿವಾರಿಸುವ ಹಿನ್ನೆಲೆಯಲ್ಲಿ ಹೊಸ ಪಾರ್ಕಿಂಗ್ ತಾಣದಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಇತರ ರಸ್ತೆಗಳಲ್ಲಿ ನಿಲುಗಡೆ ಮಾಡಿದರೆ ವಾಹನಗಳನ್ನು ಟೋಲ್ ಮಾಡಲು ಪೊಲೀಸರು ಆಲೋಚಿಸಿದ್ದರು. ಆದರೆ, ರಜಾದಿನವಾದ ಭಾನುವಾರ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಇತ್ತ ಬಂದಿರಲಿಲ್ಲ. ಕೆಲವರು ಮಾತ್ರ ತಮ್ಮ ವಾಹನಗಳನ್ನು ರಸ್ತೆಗಳಲ್ಲಿ ನಿಲ್ಲಿಸಿ ಹೋಗಿದ್ದರು. ಅವುಗಳಿಗೆ ದಂಡ ಹಾಕುವ ಬದಲು ಸೋಮವಾರದಿಂದ ಎಚ್ಚರಿಕೆಯೊಂದಿಗೆ ಕಟ್ಟುನಿಟ್ಟಾಗಿ ಆದೇಶ ಪಾಲಿಸಲು ಪೊಲೀಸರು ಮುಂದಾಗಲಿದ್ದಾರೆ.

    ಹೊಸ ಪಾರ್ಕಿಂಗ್ ಸಂಕೀರ್ಣ ಲೋಕಾರ್ಪಣೆಯಾಗಿ ಎರಡು ಮಾತ್ರ ಕಳೆದಿದೆ. ಇದು ಇನ್ನೂ ಹೆಚ್ಚಿನ ಮಂದಿಗೆ ತಿಳಿದಿಲ್ಲ. ಇದರಿಂದಾಗಿ ಗಾಂಧಿನಗರ ಒಳ ರಸ್ತೆಗಳಲ್ಲಿ ಸಾರ್ವಜನಿಕರು ತಮ್ಮ ವಾಹನಗಳನ್ನು ನಿಲ್ಲಿಸುವುದನ್ನು ಮುಂದುವರಿಸಿದ್ದಾರೆ. ಜತೆಗೆ ಶನಿವಾರ ಹೈಕೋರ್ಟ್‌ಗೆ ರಜೆ ಇದ್ದ ಕಾರಣ ವಕೀಲರ ಸಮೂಹ ಇತ್ತ ಬಂದಿರಲಿಲ್ಲ. ಹೀಗಾಗಿ ಎಂದಿನ ಜನಸಂದಣಿ ಕಾಣಲಿಲ್ಲ. ಇದು ಕೂಡ ಪಾರ್ಕಿಂಗ್ ನಿಷೇಧ ಆದೇಶವನ್ನು ಜಾರಿಗೆ ತರಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.

    ಸಂಕೀರ್ಣ ಉದ್ಘಾಟನೆ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಗಾಂಧಿನಗರದ ಸುತ್ತಮತ್ತು 1 ಕಿ.ಮೀ. ವ್ಯಾಪ್ತಿಯಲ್ಲಿ ವಾಹನಗಳ ಪಾರ್ಕಿಂಗ್‌ಗೆ ಅವಕಾಶ ಇರುವುದಿಲ್ಲ. ಇದನ್ನು ಕಟ್ಟುನಿಟ್ಟಾಗಿ ಅನುಸರಿಸಲು ಪೊಲೀಸರು ಆದೇಶ ಹೊರಡಿಸಲಿದ್ದಾರೆ. ಇದಕ್ಕೆ ನಾಗರಿಕರು ಸ್ಪಂದಿಸಬೇಕು ಎಂದು ಮನವಿ ಮಾಡಿದ್ದರು. ಅಲ್ಲದೆ ನಿಲುಗಡೆ ಸ್ಥಳದಿಂದ ಮೆಜೆಸ್ಟಿಕ್, ಸಿಟಿ ಸಿವಿಲ್ ಕೋರ್ಟ್ ಸೇರಿ ಇನ್ನಿತರ ಸ್ಥಳಗಳಿಗೆ ತೆರಳಲು ಉಚಿತ ವಾಹನದ ವ್ಯವಸ್ಥೆ ಮಾಡಲಾಗಿದೆ. ಸಂಕೀರ್ಣದಲ್ಲಿ ವಾಹನ ಪಾರ್ಕಿಂಗ್ ಮಾಡಿ ಸಮೀಪದ ಸ್ಥಳಗಳಿಗೆ ಹೋಗಿ ಬರಲು ಉಚಿತ ವಾಹನ ವ್ಯವಸ್ಥೆ ಇರುವುದರಿಂದ ಹೊಸ ವ್ಯವಸ್ಥೆ ಸಲತೆ ಕಾಣಲಿದೆ ಎಂದು ರೈಟ್ ಪಾರ್ಕಿಂಗ್ ಕಂಪನಿಯ ಪ್ರತಿನಿಧಿಗಳು ಪ್ರತಿಕ್ರಿಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts