More

    ಯುನೈಟೆಡ್ ಆಸ್ಪತ್ರೆ: ಎಲ್ಲರಿಗೂ ಅತ್ಯಾಧುನಿಕ ಆರೋಗ್ಯ ನೀಡುವ ಆದ್ಯತೆಯ ಮೂಲಸ್ಥಳ

    ಪ್ರತಿವರ್ಷ ಯುನೈಟೆಡ್​ನಲ್ಲಿ ಆಚರಿಸುವ ವೈದ್ಯರ ದಿನ ಕೇವಲ ಕ್ಯಾಲೆಂಡರ್ ದಿನವಲ್ಲ, ಅದಕ್ಕಿಂತಲೂ ಹೆಚ್ಚಿನದು. ಹಿಂದಿನ ವರ್ಷಗಳ ಕಾರ್ಯಾಚರಣೆ ಅವಲೋಕಿಸುವ ದಿನ. ಹೀಗೆ ಮಾಡುವಾಗ ನಮ್ಮ ವೈದ್ಯರ ತಂಡವನ್ನು ಗೌರವಿಸುತ್ತೇವೆ. ಸ್ಪೆಷಲಿಸ್ಟ್​ಗಳು, ತಜ್ಞರು, ಸಲಹೆಗಾರರು, ಡ್ಯೂಟಿ ಡಾಕ್ಟರ್ಸ್​ ಸೇರಿ ನಮ್ಮ ವೈದ್ಯ ಸಮುದಾಯದ ಪ್ರತಿಯೊಬ್ಬ ದಣಿವರಿಯದ ವೃತ್ತಿಪರರ ಸಮರ್ಪಣೆ, ಪರಿಶ್ರಮ ಹಾಗೂ ಯುನೈಟೆಡ್​ ಬದ್ಧತೆಯನ್ನು ಸಾಕಾರಗೊಳಿಸುವಲ್ಲಿ ಅವರ ಕೊಡುಗೆಗಳಿಗೆ ವಂದಿಸುತ್ತೇವೆ. ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ನಮ್ಮ ಬೆಳವಣಿಗೆಯನ್ನು ಮುಂದುವರೆಸುವುದರ ಜತೆಗೆ ಜನರ ಅಗತ್ಯಗಳಿಗೆ ಅನುಗುಣವಾಗಿ ಹೊಸ ಅನ್ವೇಷಣೆ ಅಳವಡಿಸಿಕೊಳ್ಳುತ್ತಿದ್ದೇವೆ.

    ಮಾನಸಿಕ ಆಘಾತದ ಆರೈಕೆಗೆ ಬದ್ಧತೆ
    ಯುನೈಟೆಡ್ ಆರಂಭವಾದಗಿನಿಂದ ದಿ. ಡಾ. ಎಸ್. ಎಸ್. ಸಿದ್ಧಾರೆಡ್ಡಿಯವರ ದೂರದೃಷ್ಟಿಯಿಂದ ಪ್ರೇರಿತಗೊಂಡ ನಮಗೆ ನವಚೈತನ್ಯದ ಜೋಡಿಯಾದ ಡಾ. ವಿಕ್ರಂ ಸಿದ್ಧಾರೆಡ್ಡಿ ಮತ್ತು ಡಾ. ವೀಣಾ ಸಿದ್ಧಾರೆಡ್ಡಿಯವರ ನೇತೃತ್ವದಲ್ಲಿ ನಿಗದಿಪಡಿಸಿದ ಗುರಿಗಳ ಬಗ್ಗೆ ಶ್ರದ್ಧೆ ಹಾಗೂ ಸ್ಪಷ್ಟತೆಯಿತ್ತು. ಯುನೈಟೆಡ್ ಕೇವಲ ಗಣ್ಯರಿಗೆ ಮಾತ್ರವಲ್ಲದೇ ಪ್ರತಿ ಸಾಮಾನ್ಯ ಮನುಷ್ಯನಿಗೂ ಕೈಗೆಟುವಂತಿರಬೇಕು ಎನ್ನುವುದು. ಹಾಗಾಗಿ ನಮ್ಮ ತಂಡ ವೈದ್ಯಕೀಯ ನೆರವು ನೀಡಲು, ಆರೈಕೆ ಮಾಡಲು ಯಾವುದೇ ಗಡಿಮೀರಲು ಸಿದ್ಧ. 2012ರಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಪಘಾತಕ್ಕೆ ಸಂಬಂಧಿಸಿದ ಅತ್ಯಾಧುನಿಕ ಕ್ರಿಟಿಕಲ್ ಕೇರ್ ಬಗ್ಗೆ ಕೇಳಿರಲಿಲ್ಲ. ನಾವು ಅದನ್ನು ಸ್ಥಾಪಿಸಿದಾಗಿನಿಂದ ಇಲ್ಲಿಯವರೆಗೆ ಯಾವುದೇ ರೋಗಿಯೂ ಗುಣವಾಗದೇ ಹೊರಗುಳಿದಿಲ್ಲ. ನಮ್ಮ ಚಿಕಿತ್ಸೆಯ ಫಲಿತಾಂಶಗಳಲ್ಲಿನ ಗೆಲುವು 95% ಗಿಂತಲೂ ಹೆಚ್ಚಿವೆ ಎಂದು ಖಚಿತವಾಗಿ ಹೇಳಬಲ್ಲೆವು. ನಮ್ಮ ಧ್ಯೇಯವಾಕ್ಯವಾದ “ಚಿಕಿತ್ಸೆ ಮೊದಲು, ಬಿಲ್ಲಿಂಗ್ ನಂತರ” ಇದನ್ನು ಪ್ರತಿಯೊಂದು ರೋಗಿಗೆ ಅಳವಡಿಸುವ ಮೂಲಕ ಮಾನವೀಯತೆ ಮರೆದಿದ್ದೇವೆ. ಕೋವಿಡ್-19 ಮತ್ತೊಂದು ಮಹತ್ವದ ತಿರುವು. ಇದು ಜನರು ನಮ್ಮ ಮೇಲಿಟ್ಟ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿತು. ಯಾವುದೇ ಹಿಂಜರಿಕೆ, ಪೂರ್ವಾಗ್ರಹವಿಲ್ಲದೆ RT-PCR ಟೆಸ್ಟ್​ಗಳು, ಕೋವಿಡ್ ಚಿಕಿತ್ಸೆಗಾಗಿ ಅದರದ್ದೇ ಆಸ್ಪತ್ರೆ ರಚನೆ, ಸಾರ್ವಜನಿಕರಿಗೆ ಲಸಿಕೆಯ ಆಯ್ಕೆ ಸೇರಿದಂತೆ ಎಲ್ಲ ಸೇವೆಗಳನ್ನು ಆರಂಭಿಸಿದ ಈ ಪ್ರದೇಶದ ಮೊಟ್ಟಮೊದಲ ಖಾಸಗಿ ಆಸ್ಪತ್ರೆ ನಮ್ಮದು.

    ಹೃದಯದ ಆರೈಕೆಗೆ ಬಾಧ್ಯತೆ
    ಹೃದಯದ ಆರೈಕೆಗೆ ವಿಶೇಷ ಗಮನ ನೀಡಲೆಂದೇ ಕಲಬುರಗಿಯಲ್ಲಿ ಯುನೈಟೆಡ್ ಸೂಪರ್ ಸ್ಪೆಲಾಲಿಟಿ ಆಸ್ಪತ್ರೆಯ ಆರಂಭಿಸಲಾಗಿದೆ. ಹೃದಯಾಘಾತವು ಮೊದಲಿಗಿಂತಲೂ ಕಿರಿಯ ವಯಸ್ಸಿನ ಗುಂಪಿನಲ್ಲಿ ಕಂಡುಬಂದವು. ಇದಕ್ಕೆ ಕಾರಣ ಪ್ರಸ್ತುತ ಜೀವನಶೈಲಿಯ ಅಂಶಗಳೆಂದು ಯುನೈಟೆಡ್ ಬಲವಾಗಿ ಪ್ರತಿಪಾದಿಸಿತು. ಅದನ್ನು ತಡೆಗಟ್ಟಲು ವಿಶೇಷ ಸವಲತ್ತುಗಳನ್ನು ನೀಡುವುದಕ್ಕಾಗಿ ನಾವು ಯುನೈಟೆಡ್​ನ ಬಾಗಿಲುಗಳನ್ನು ಜನರಿಗಾಗಿ ತೆರೆದವಲ್ಲದೇ, ಹೃದಯದ ಆರೈಕೆಯ ಬಗ್ಗೆ ಅರ್ಥಮಾಡಿಸಲು, ನಿರ್ವಹಿಸಲು ನಮ್ಮನ್ನು ನಾವು ಜನರಿಗೆ ಅರ್ಪಿಸಿಕೊಂಡಿದ್ದೇವೆ. ಬೆಂಗಳೂರು ಹಾಗೂ ಕಲಬುರಗಿಯಲ್ಲಿರುವ ರೋಬಸ್ಟ್ ಕಾರ್ಡಿಯಾಕ್ ಕೇರ್ ಸೇರಿದಂತೆ, ನಮ್ಮ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಾವು ಕಾರ್ಡಿಯಾಕ್ ಪ್ಯಾಕೇಜ್ ಮತ್ತು ಕ್ಯಾಲ್ಸಿಯಂ ಸ್ಕೋರಿಂಗ್​ಗಳನ್ನು ನೀಡುತ್ತಿದ್ದೇವೆ.

    ಆರೋಗ್ಯಕ್ಕೆ ಹೊಸ ಮೈಲಿಗಲ್ಲು
    ಕಲ್ಯಾಣ ಕರ್ನಾಟಕ, ಬೆಂಗಳೂರು ಮತ್ತು ಇದರಾಚೆಗೂ ಅತ್ಯಂತ ವಿಶ್ವಾಸಾರ್ಹ ಬ್ರ್ಯಾಂಡ್ ಆಗಿ ಹೊರಹೊಮ್ಮುತ್ತಿರುವ ಯುನೈಟೆಡ್ ಆಸ್ಪತ್ರೆಗಳು ದಕ್ಷಿಣ ಭಾರತದ ಉದಯೋನ್ಮುಖ ಆಸ್ಪತ್ರೆ ಎಂದು ಗುರುತಿಸಿಕೊಂಡಿರುವುದನ್ನು ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ನಮಗೆ ಸಂದಿರುವ ಪ್ರಶಸ್ತಿಗಳಲ್ಲಿ ISO 41001:2008 ಪ್ರಮಾಣೀಕರಣದೊಂದಿಗೆ ನೀಡಲಾದ ಟೈಮ್ಸ್ ಗ್ರೂಪ್​ನ ಅತ್ಯುತ್ತಮ ಉದಯೋನ್ಮುಖ ಆಸ್ಪತ್ರೆ ಪ್ರಶಸ್ತಿ, ಮೂತ್ರಶಾಸ್ತ್ರದಲ್ಲಿನ ಶ್ರೇಷ್ಠ ಸೇವಾ ಪ್ರಶಸ್ತಿ ಮತ್ತು ಮೂಳೆಚಿಕಿತ್ಸೆಯುಲ್ಲಿ ಶ್ರೇಷ್ಠ ಸೇವಾ ಪ್ರಶಸ್ತಿಗಳು ಸೇರಿವೆ. ಪ್ರಸ್ತುತ ನಾವು ದಕ್ಷಿಣ ಭಾರತ ಮಲ್ಟಿ ಸ್ಪೆಷಾಲಿಟಿಯಲ್ಲಿ ನಂ:20, ತುರ್ತು ಮತ್ತು ಟ್ರೌಮಾ ನ್ಯಾಷನಲ್ ಮಲ್ಟಿ ಸ್ಪೆಷಾಲಿಟಿಯಲ್ಲಿ ನಂ:16 ಹಾಗೂ ಎಮರ್ಜಿಂಗ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಂ. 1 ನೇ ಸ್ಥಾನ ಪಡೆದಿದ್ದೇವೆ.

    ಯುನೈಟೆಡ್ ಅನ್ನು ಆರಂಭಿಸಿದಾಗಿನಿಂದಲೂ, ನಮ್ಮ ಗಮನವು ಪ್ರತಿಯೊಬ್ಬ ವ್ಯಕ್ತಿಯನ್ನು ತಲುಪುವಂತಹ ಆರೋಗ್ಯ ರಕ್ಷಣೆ ಒಳಗೊಂಡಿರುವುದಲ್ಲದೇ, ಅವು ಜನರ ಕೈಗೆಟಕುವಂತಿರಬೇಕೆಂಬ ಅಂಶದ ಮೇಲೆ ಕೇಂದ್ರೀಕೃತವಾಗಿದೆ. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಕಾಲಕಾಲಕ್ಕೆ ವೈದ್ಯಕೀಯ ಶಿಬಿರಗಳು, ದೂರದ ಪ್ರದೇಶಗಳಲ್ಲಿ ಕ್ಲಿನಿಕ್​ಗಳು, ಕೈಗೆಟಕುವ ಆರೋಗ್ಯ ಯೋಜನೆಗಳು, ಅನಾರೋಗ್ಯ ತಡೆಗಟ್ಟುವ ಯೋಜನೆಗಳು, ಉಚಿತ ಚಿಕಿತ್ಸಾ ಶಿಬಿರಗಳೊಂದಿಗೆ ಗ್ರಾಮೀಣ ಆರೋಗ್ಯ ರಕ್ಷಣೆಯಲ್ಲಿ ಕ್ರಾಂತಿಯನ್ನು ತರಬಹುದಾಗಿದೆ. ಯುನೈಟೆಡ್​ನಲ್ಲಿ ಯಾರು, ಯಾವಾಗ ಬೇಕಿದ್ದರೂ ಪ್ರವೇಶಿಸಬಹುದಾದಂತಹ “ಪಾತ್ ಬ್ರೇಕಿಂಗ್ ಹೆಲ್ತ್ ಕೇರ್” ನೊಂದಿಗೆ ಪ್ರತಿಯೊಬ್ಬರಿಗೂ ಆರೋಗ್ಯ ರಕ್ಷಣೆಯನ್ನು ನೀಡಲು ಬದ್ಧರಾಗಿದ್ದೇವೆ. ಇದು ನಮ್ಮ ಬಾಧ್ಯತೆಯಾಗಿದ್ದು ಇದನ್ನು ಮುಂದುವರಿಸುತ್ತೇವೆ. ಈ ವೈದ್ಯರ ದಿನದಂದು ನಾವು ಈ ಸಮಾನ ಉದ್ದೇಶ ಹೊಂದಿರುವ ನಮ್ಮ ಆಸ್ಪತ್ರೆಯ ವೈದ್ಯ ಬಳಗಕ್ಕೆ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇವೆ.

    ಇಂದು ವೈದ್ಯರ ದಿನ: ಡಾಕ್ಟರ್ಸ್​​ಗಳಿಗೂ ಇದೆ ಸಮಸ್ಯೆ! ಅರಿಯುವ ಪ್ರಯತ್ನ ಮಾಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts