ರಷ್ಯಾ ಮೇಲೆ ಬೃಹತ್​​ ಡ್ರೋನ್​ ದಾಳಿ ನಡೆಸಿದ ಯುಕ್ರೇನ್​​; ರಷ್ಯಾದ 40 ಕ್ಕೂ ಅಧಿಕ ಮಿಲಿಟರಿ ವಿಮಾನಗಳು ಪತನ! | Drone Attack

dk - 2025-06-01T174411.792
Published on: 

Drone Attack: ಯುಕ್ರೇನ್‌ನ ದೇಶೀಯ ಭದ್ರತಾ ಸಂಸ್ಥೆಯಾದ ಎಸ್‌ಬಿಯು, ಇಂದು (ಜೂ.1) ಭಾನುವಾರದಂದು ರಷ್ಯಾ ವಿರುದ್ಧ ಬೃಹತ್ ಡ್ರೋನ್ ದಾಳಿ ನಡೆಸಿ, ರಷ್ಯಾದ 40 ಕ್ಕೂ ಹೆಚ್ಚು ಮಿಲಿಟರಿ ವಿಮಾನಗಳನ್ನು ಹೊಡೆದುರುಳಿಸಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಒಂದು ವೀಡಿಯೊ ವೈರಲ್ ಆಗಿದ್ದು, ಅದರಲ್ಲಿ ಮಿಲಿಟರಿ ವಿಮಾನಗಳು ಬೆಂಕಿಗೆ ಆಹುತಿಯಾಗುತ್ತಿರುವುದನ್ನು ತೋರಿಸಲಾಗಿದ್ದು, ಅವು ರಷ್ಯಾದ Tu-95 ಹೆವಿ ಬಾಂಬರ್‌ಗಳಾಗಿದ್ದು, ಉಕ್ರೇನಿಯನ್ ಡ್ರೋನ್ ದಾಳಿಯಿಂದಾಗಿ ಅವು ಸುಟ್ಟುಹೋಗಿವೆ ಎಂದು ಆರೋಪಿಸಲಾಗಿದೆ.

ಯುಕ್ರೇನಿಯನ್ ಡ್ರೋನ್‌ಗಳು ಈ ಪ್ರದೇಶದ ಮೇಲೆ ದಾಳಿ ಮಾಡಿವೆ ಎಂದು ರಷ್ಯಾದ ಮುರ್ಮನ್ಸ್ಕ್ ಗವರ್ನರ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆಯ ಪ್ರತ್ಯೇಕ ವರದಿ ತಿಳಿಸಿದೆ.(ಏಜೆನ್ಸೀಸ್​)