More

    ತಿರುಪತಿ ಭಕ್ತರಿಗೆ ಗುಡ್ ನ್ಯೂಸ್.. ಟಿಟಿಡಿ ಉಚಿತ ಬಸ್ಸುಗಳು!

    ತಿರುಪತಿ: ಕಲಿಯುಗ ವೈಕುಂಠ ತಿರುಪತಿ-ತಿರುಮಲೆಯಲ್ಲಿ ಶ್ರೀವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ಬೇಸಿಗೆ ರಜೆ, ವಾರಾಂತ್ಯದ ಹಿನ್ನೆಲೆಯಲ್ಲಿ ಭಕ್ತಸಾಗರವೇ ಹರಿದು ಬರುತ್ತಿದೆ. ಮಳೆ, ಚಳಿ, ಬಿಸಿಲೆನ್ನದೆ ಭಕ್ತರು ಕಿಲೋಮೀಟರ್​ಗಟ್ಟಲೆ ಸರದಿ ಸಾಲಿನಲ್ಲಿ ನಿಂತು ತಿಮ್ಮಪ್ಪನ ದರ್ಶನಭಾಗ್ಯಕ್ಕಾಗಿ ಕಾಯುತ್ತಿದ್ದಾರೆ. ಇಂತಹ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ತಿರುಮಲ ತಿರುಪತಿ ದೇವಸ್ಥಾನ ಮಂಡಳಿಯು ಕುಡಿಯುವ ನೀರು, ಅನ್ನಪ್ರಸಾದ ವಿತರಿಸಲು ಕ್ರಮ ತೆಗೆದುಕೊಂಡಿದೆ. ಇದಿಷ್ಟೇ ಅಲ್ಲದೆ ಭಕ್ತರಿಗಾಗಿ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.

    ಇದನ್ನೂ ಓದಿ: ಹಮಾಸ್ ಥೀಮ್​ನಲ್ಲಿ ಬಾಲಕನ ಹುಟ್ಟುಹಬ್ಬ ಆಚರಣೆ! ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ

    ತಿರುಮಲದಲ್ಲಿ ಭಕ್ತರ ನೂಕುನುಗ್ಗಲು ಮುಂದುವರಿದಿದೆ. ಶನಿವಾರ ಮತ್ತು ಭಾನುವಾರ(ಮೇ 25 ಮತ್ತು 26) ಬೆಟ್ಟಕ್ಕೆ ಭಕ್ತರ ದಂಡೇ ಹರಿದು ಬಂದಿತ್ತು. ವೈಕುಂಠಂ ಸರತಿ ಸಾಲಿನ ಎಲ್ಲ ವಿಭಾಗಗಳೂ ಭಕ್ತರಿಂದ ತುಂಬಿ ತುಳುಕುತ್ತಿವೆ. ಇದರೊಂದಿಗೆ ಹೊರವರ್ತುಲ ರಸ್ತೆಯ ಶಿಲಾತೋರಣಂ ವರೆಗೆ ಸರತಿ ಸಾಲು ವಿಸ್ತರಿಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿರುವುದರಿಂದ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಟಿಟಿಡಿ ವಿಶೇಷ ವ್ಯವಸ್ಥೆ ಮಾಡಿದೆ . ಆಕ್ಟೋಪಸ್ ವೃತ್ತದಿಂದ ಕೃಷ್ಣ ತೇಜ ವೃತ್ತದವರೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ನಾಲ್ಕು ಕಡೆ ಅನ್ನಪ್ರಸಾದ, 27 ಕಡೆ ಶುದ್ಧ ನೀರು ಸರಬರಾಜು ವ್ಯವಸ್ಥೆ ಅಲ್ಲದೆ, ಆಕ್ಟೋಪಸ್ ಕಟ್ಟಡದಿಂದ ಶಿಲಾ ತೋರಣಂ ವರೆಗೆ ಭಕ್ತರಿಗೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.

    ಶನಿವಾರ ವೆಂಗಮಾಂಬ ಅನ್ನಪ್ರಸಾದ ಭವನದಲ್ಲಿ 60 ಸಾವಿರ ಮಂದಿಗೆ ಹಾಗೂ ವೈಕುಂಠಂ ಸರತಿ ಸಾಲಿನಲ್ಲಿ 50 ಸಾವಿರ ಮಂದಿ ಭಕ್ತರಿಗೆ ಅನ್ನಪ್ರಸಾದ ವಿತರಿಸಲಾಯಿತು.

    ಭಕ್ತಾದಿಗಳ ದಟ್ಟಣೆ ಗಮನದಲ್ಲಿಟ್ಟುಕೊಂಡು ಜೂನ್ 30 ರವರೆಗೆ ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು ವಿಐಪಿ ಬ್ರೇಕ್ ದರ್ಶನವನ್ನು ರದ್ದುಗೊಳಿಸಲಾಗಿದೆ. ಅಲ್ಲದೆ, ಶಿಫಾರಸು ಪತ್ರಗಳನ್ನು ಸ್ವೀಕರಿಸುವುದಿಲ್ಲ ಎಂದು ಟಿಟಿಡಿ ಈಗಾಗಲೇ ಸ್ಪಷ್ಟಪಡಿಸಿದೆ.

    ಬೇಸಿಗೆ ರಜೆ ಮುಗಿದು ಶಾಲಾಕಾಲೇಜು ಪ್ರಾರಂಭವಾಗುವುದರಿಂದ ಜೂನ್​ ಮೊದಲ ವಾರದ ತನಕ ಇದೇ ರೀತಿಯಲ್ಲಿ ಭಕ್ತರ ನೂಕುನುಗ್ಗಲು ಇರಬಹುದು ಎಂದು ಅಧಿಕಾರಿಗಳು ನಿರೀಕ್ಷಿಸುತ್ತಿದ್ದಾರೆ. ಅದರಂತೆ ವ್ಯವಸ್ಥೆಗಳನ್ನೂ ಚುರುಕುಗೊಳಿಸಲಾಗಿದೆ.

    ಟ್ರೆಂಡ್‌ ಆಗಿದೆ ‘ಪುಷ್ಪ ಪುಷ್ಪ’ ಹಾಡಿಗೆ ಸ್ಟೆಪ್ಸ್… ಡಜನ್​ ನೃತ್ಯಗಾರರ ವಿಡಿಯೋ ವೈರಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts