More

    ‘ಹೌದು, ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯವಿತ್ತು’: ನಿಜ ಬಾಯ್ಬಿಟ್ಟ ತ್ರಿಶಾ!

    ಚೆನ್ನೈ: ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದರೂ ಹೀರೋಯಿನ್​ಗಳು ಮೂರ್ನಾಲ್ಕು ವರ್ಷದಲ್ಲಿ ಇಂಡಸ್ಟ್ರಿಯಿಂದ ದೂರವಾಗುತ್ತಾರೆ. ಆದರೆ ದಕ್ಷಿಣ ಭಾರತದ ಆ ಇಬ್ಬರು ನಾಯಕಿಯರು ನಲವತ್ತು ವರ್ಷ ದಾಟಿದರೂ ಗ್ಲಾಮರ್‌ನಿಂದ ಮಿಂಚುತ್ತಿದ್ದು, ಈಗಲೂ ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ. ಅವರು ಬೇರಾರು ಅಲ್ಲ, ತ್ರಿಷಾ ಮತ್ತು ನಯನತಾರಾ. ಈ ಇಬ್ಬರೂ ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇಬ್ಬರ ನಡುವೆ ಶೀತಲ ಸಮರ ನಡೆಯುತ್ತಿದೆ ಎಂಬ ಮಾತು ಸದಾ ಕೇಳಿಬರುತ್ತಿದೆ. ಹಾಗಾದರೆ ಇದಕ್ಕೆ ಕಾರಣವೇನು ಎಂಬುದನ್ನು ಸ್ವತಃ ತ್ರಿಷಾ ಬಾಯ್ಬಿಟ್ಟಿದ್ದಾರೆ. ವಿವರ ಇಲ್ಲಿದೆ.

    ಇದನ್ನೂ ಓದಿ: ಆರ್ಡರ್ ಮಾಡಿ 6 ವರ್ಷ ಕಳೆದಮೇಲೆ ಫ್ಲಿಪ್‌ಕಾರ್ಟ್ ಕರೆ: ‘ನೀವು ಯಾವ ಸಮಸ್ಯೆ ಎದುರಿಸುತ್ತಿದ್ದೀರಿ?’ ಎಂದು ಗ್ರಾಹಕನಿಗೆ ಪ್ರಶ್ನೆ!

    ಈ ಇಬ್ಬರೂ ನಾಯಕಿಯರು ತುಂಬಾ ಕಷ್ಟಪಟ್ಟು ನಾಯಕಿ ಪಟ್ಟ ಅಲಂಕರಿಸಿದವರು. ತ್ರಿಷಾ ಮತ್ತು ನಯನ ತಾರಾ ಕಾಲಿವುಡ್​, ಟಾಲಿವುಡ್​, ಸ್ಯಾಂಡಲ್​ವುಡ್​ ಮತ್ತು ಮಾಲಿವುಡ್​ನಲ್ಲಿ ಸ್ಟಾರ್ ಹೀರೋ ಸಿನಿಮಾಗಳಲ್ಲಿ ನಟಿಸಿ ಒಳ್ಳೆಯ ಮನ್ನಣೆ ಗಳಿಸಿದರು. ಅಲ್ಲದೇ ಈಗಲೂ ಭಾರೀ ಸಂಭಾವನೆ ಪಡೆಯುತ್ತಿದ್ದಾರೆ. ಒಂದು ಸಂದರ್ಭದಲ್ಲಿ ಈ ಸ್ಟಾರ್ ಹೀರೋಯಿನ್ ಗಳ ನಡುವೆ ಒಳ್ಳೆಯ ಗೆಳೆತನವಿತ್ತು. ಆದರೆ ಈಗ ಶೀತಲ ಸಮರ ನಡೆಯುತ್ತಿದೆ.

    ಇತ್ತೀಚೆಗೆ ತಾನೇ ತ್ರಿಶಾ ಮಾತನಾಡಿದ್ದು, ಇಬ್ಬರ ನಡುವೆ ಭಿನ್ನಾಭಿಪ್ರಾಯ ಇರುವುದು ನಿಜ. ಆದರೆ ಅದು ವೃತ್ತಿಪರ ಕಾರಣಗಳಿಂದಲ್ಲ ಎಂದು ಹೇಳಿದ್ದಾರೆ.

    ಕೆಲವು ವೈಯಕ್ತಿಕ ಕಾರಣಗಳಿಂದ ಇಬ್ಬರ ನಡುವೆ ಅಂತರವಿತ್ತು. ಅದರೆ ಸಮಯ ಕಳೆದಂತೆ, ನಾವು ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡಿದ್ದೇವೆ. ಈಗ ಒಳ್ಳೆಯ ಸ್ನೇಹಿತರಾಗಿದ್ದೇವೆ ಎಂದು ಹೇಳಿದ್ದಾರೆ.

    ಈ ಹಿಂದೆ ನಯನತಾರಾ ಕುರಿವಿ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದರು. ಆದರೆ ಅಂತಿಮವಾಗಿ ಅದು ತ್ರಿಷಾ ಪಾಲಿಗೆ ಬಂದಿತು. ಈ ಸಿನಿಮಾದಿಂದಲೇ ಇಬ್ಬರ ನಡುವೆ ಭಿನ್ನಾಭಿಪ್ರಾಯ ಶುರುವಾಗಿದೆ ಎಂಬ ಮಾತು ಕಾಲಿವುಡ್ ನಲ್ಲಿ ಕೇಳಿಬರುತ್ತಿತ್ತು.

    ತ್ರಿಶಾ ತೆಲುಗಿನಲ್ಲಿ ಚಿರಂಜೀವಿ ಜೊತೆ ವಿಶ್ವಂಭರ ಸಿನಿಮಾ ಮಾಡಲಿದ್ದಾರೆ. ನಯನತಾರಾ ಕೂಡ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

    ಬಾಲಕನ ನಿಕ್ಕರ್​ ಒಳಗೆ ಅಡಗಿ ಕುಳಿತಿತ್ತು ಹಾವು! ಕಡೆಗೆ ಏನಾಯ್ತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts