More

    ಮಹಿಳೆಯರಿಗೆ ತರಬೇತಿ

    ಹುಬ್ಬಳ್ಳಿ: ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ 2023-24 ನೇ ಸಾಲಿನಲ್ಲಿ ಅನುಷ್ಠಾನಗೊಳ್ಳುತ್ತಿರುವ ಮಹಿಳಾ ತರಬೇತಿ ಯೋಜನೆಯಡಿಯಲ್ಲಿ ತರಬೇತಿಗಳನ್ನು ಆಯೋಜಿಸಲು ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯಲ್ಲಿ ಮತ್ತು ಕೇಂದ್ರ ಸರ್ಕಾರದ ಅಧೀನದಲ್ಲಿ ಅಕ್ರೀಡೇಶನ್ ಪಡೆದಿರುವ ಹುಬ್ಬಳ್ಳಿಯ ರೇಣುಕಾ ಶಿಕ್ಷಣ ಮತ್ತು ಕಲ್ಯಾಣ ಕೇಂದ್ರ ಸಂಸ್ಥೆಯಿಂದ ಮಹಿಳೆಯರಿಗೆ ವಿವಿಧ ತರಬೇತಿಗಳನ್ನು ನೀಡಲಾಗುತ್ತಿದೆ.

    ಈ ಹಿನ್ನೆಲೆಯಲ್ಲಿ ಅರ್ಹ ಅಭ್ಯರ್ಥಿಗಳಿಂದ ತರಬೇತಿ ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ಸೆಲ್ಪ್ ಎಂಪ್ಲೋಯಿಡೈಲರ್ (3 ತಿಂಗಳು), ಸಿವಿಂಗ್ ಮಷಿನ್ ಆಪರೇಟರ್ (2 ತಿಂಗಳು), ಡೊಮೆಸ್ಟಿಕ್​ನೊಂವೋಯಿಸ್ (ಕಂಪ್ಯೂಟರ್) (4 ತಿಂಗಳು), ಬ್ಯೂಟಿಥೆರಪಿಸ್ಟ್ (3 ತಿಂಗಳು), ಫ್ಯಾಷನ್ ಡಿಸೈನಿಂಗ್ (6 ತಿಂಗಳು) ವಿಷಯಗಳ ಕುರಿತು ತರಬೇತಿ ನೀಡಲಾಗುತ್ತದೆ.

    ಆಧಾರ ಕಾರ್ಡ್, ಶಾಲೆಯ ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಇತ್ತೀಚಿನ 6 ಭಾವಚಿತ್ರಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಅರ್ಹರು 18 ರಿಂದ 35 ವಯಸ್ಸಿನವರಿದ್ದು, ಜುಲೈ 14ರೊಳಗೆ ಅರ್ಜಿ ಸಲ್ಲಿಸಬೇಕು. ಈ ತರಬೇತಿ ಮಹಿಳೆಯರಿಗೆ ಮಾತ್ರ.

    ಸಂರ್ಪಸಬೇಕಾದ ವಿಳಾಸ : 3ನೇ ಮಹಡಿ, ಸಿಬಿಟಿ ಕಾಂಪ್ಲೆಕ್ಸ್, ಹುಬ್ಬಳ್ಳಿ-580020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts