More

    ಆಡಲು ಕಠಿಣ…; ಆಂಗ್ಲರನ್ನು ಮಣಿಸಿ ಫೈನಲ್​ಗೇರಿದ ಬಳಿಕ ರೋಹಿತ್​ ಶರ್ಮ ಹೇಳಿದ್ದಿಷ್ಟು

    ಗಯಾನ: ಇಲ್ಲಿನ ಪ್ರಾವಿಡೆನ್ಸ್​ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್​ನ ಎರಡನೇ ಸೆಮಿಫೈನಲ್​ ಪಂದ್ಯದಲ್ಲಿ ಭಾರತವು ಆಂಗ್ಲರ ವಿರುದ್ಧ ಜಯಿಸುವ ಮೂಲಕ ಫೈನಲ್​ಗೇರಿದ್ದು, 2022ರಲ್ಲಿ ನಡೆದ ಟಿ20 ವಿಶ್ವಕಪ್​ ಸೆಮಿಫೈನಲ್​ ಸೋಲಿನ ಸೇಡನ್ನು ತೀರಿಸಿಕೊಂಡಿದೆ. ಇದರ ಜೊತೆಗೆ ಟಿ20 ವಿಶ್ವಕಪ್​ ಇತಿಹಾಸದಲ್ಲಿ ಅಜೇಯವಾಗಿ ಫೈನಲ್​ಗೇರಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಟೀಮ್​ ಇಂಡಿಯಾ ಪಾತ್ರವಾಗಿದೆ.

    ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಟೀಮ್​ ಇಂಡಿಯಾ ನಾಯಕ ರೋಹಿತ್ ಶರ್ಮ (57 ರನ್, 39 ಎಸೆತ, 6 ಬೌಂಡರಿ, 2 ಸಿಕ್ಸರ್), ಸೂರ್ಯಕುಮಾರ್​ ಯಾದವ್​ (47 ರನ್, 36 ಎಸೆತ, 4 ಬೌಂಡರಿ, 2 ಸಿಕ್ಸರ್) ಬಿರುಸಿನ ಆಟದ ಫಲವಾಗಿ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 171 ರನ್​ಗಳಿಸಿತ್ತು. ಕಠಿಣ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್​ ತಂಡವನ್ನು ಇನ್ನಿಲ್ಲದಂತೆ ಕಾಡಿದ ಭಾರತದ ಬೌಲರ್​ಗಳು ಎದುರಾಳಿಗಳನ್ನು 16.4 ಓವರ್​ಗಳಲ್ಲಿ 103 ರನ್​ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದು, ತಂಡವನ್ನು ಫೈನಲ್​ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

    ಇದನ್ನೂ ಓದಿ: ಮಕ್ಕಳು ಅಳುವುದನ್ನು ನೋಡಲಾರದೆ ನದಿಯಲ್ಲಿ ಮುಳುಗಿಸಿ ಸಾಯಿಸಿದ ತಾಯಿ; ಹೃದಯ ವಿದ್ರಾವಕ ವಿಡಿಯೋ ವೈರಲ್

    ಇನ್ನೂ ಇಂಗ್ಲೆಂಡ್​ ವಿರುದ್ಧ ಗೆದ್ದು ಫೈನಲ್​ ಪ್ರವೇಶಿಸಿರುವ ಕುರಿತು ಮಾತನಾಡಿದ ನಾಯಕ ರೋಹಿತ್​ ಶರ್ಮ, ಒಂದು ತಂಡವಾಗಿ ನಾವು ಕೆಲಸ ಮಾಡಿದ್ದು, ಈ ಗೆಲುವು ನಮಗೆ ತೃಪ್ತಿ ತಂದಿದೆ. ನಾವು ಪರಿಸ್ಥಿತಿಗೆ ಹೊಂದಿಕೊಂಡಿದ್ದು, ಅದಕ್ಕೆ ಅನುಗುಣವಾಗಿ ಆಟವಾಡಿದ್ದೇವೆ. ಮುಖ್ಯವಾಗಿ ಬೌಲರ್​ಗಳು ಹಾಗೂ ಬ್ಯಾಟ್ಸ್​ಮನ್​ಗಳು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡರೆ ಅದು ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

    ಮಳೆ ಬಂದಿದ್ದರಿಂದ ಈ ಕ್ರೀಡಾಂಗಣದಲ್ಲಿ 140-150 ರನ್​ ಗಳಿಸುವುದೇ ಹೆಚ್ಚು. ಆಡಲು ಕಷ್ಟಕರವಾಗಿರುತ್ತೆ ಎಂದು ಭಾವಿಸಿದ್ದೆವು. ಆದರೆ, ಪವರ್​ಪ್ಲೇ ಬಳಿಕ ಹೆಚ್ಚು ರನ್​ ಗಳಿಸಬಹುದು ಎಂದು ತಿಳಿಯಿತು. ಬೌಲರ್​ಗಳು ಅದ್ಭುತವಾಗಿ ಆಡಿದರು. ಮುಖ್ಯವಾಗಿ ಕುಲದೀಪ್​ ಹಾಗೂ ಅಕ್ಷರ್​ ಆಡಿದ ರೀತಿ ನಿಜಕ್ಕೂ ಶ್ಲಾಘನೀಯವಾಗಿತ್ತು. ಈ ಪಿಚ್​ನಲ್ಲಿ 170 ರನ್​ಗಳು ಉತ್ತಮ ಸ್ಕೋರ್​ ಆಗಿದ್ದು, ಬೌಲರ್​ಗಳು ಇದನ್ನು ರಕ್ಷಿಸಿದ ರೀತಿ ನನಗೆ ತುಂಬಾ ಇಷ್ಟವಾಯಿತು ಎಂದು ಟೀಮ್​ ಇಂಡಿಯಾ ನಾಯಕ ರೋಹಿತ್ ಶರ್ಮ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts