More

    ಯೂಟ್ಯೂಬ್​ ವೀವ್ಸ್​ಗಾಗಿ ಟವರ್​ ಏರಿದ ಯುವಕನಿಗೆ ಕಾದಿತ್ತು ಬಿಗ್​ ಶಾಕ್​! 5 ಗಂಟೆಗಳ ನರಕಯಾತನೆ

    ಲಖನೌ: ಸಾಮಾಜಿಕ ಜಾಲತಾಣಗಳಲ್ಲಿ ವೀವ್ಸ್​ ಗಳಿಸುವ ಉದ್ದೇಶದಿಂದ ವಿಡಿಯೋ ಚಿತ್ರೀಕರಣ ಮಾಡಲು ಮೊಬೈಲ್ ಟವರ್ ಮೇಲೆ ಹತ್ತಿದ ಯುವಕನೊಬ್ಬನನ್ನು ರಕ್ಷಿಸಲಾಗಿದೆ. ಪೊಲೀಸರು ಮತ್ತು ಸ್ವಯಂಸೇವಕರ ಐದು ಗಂಟೆಗಳ ಪ್ರಯತ್ನದ ನಂತರ ಯೂಟ್ಯೂಬರ್ ನೀಲೇಶ್ವರ್ ಅವರನ್ನು ಯಾವುದೇ ಹಾನಿ ಇಲ್ಲದೆ ರಕ್ಷಣೆ ಮಾಡಲಾಯಿತು. ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಈ ಘಟನೆ ನಡೆದಿದೆ.

    ಯುವಕನ ಬಳಿ ‘ನೀಲೇಶ್ವರ22’ ಹೆಸರಿನ ಯೂಟ್ಯೂಬ್ ಚಾನೆಲ್ ಇದೆ. ತನ್ನ ಚಾನೆಲ್​ನಲ್ಲಿ 8,87,000 ಚಂದಾದಾರರನ್ನು ಹೊಂದಿದ್ದಾನೆ. ಸಾಹಸ ದೃಶ್ಯಗಳನ್ನು ಚಿತ್ರೀಕರಿಸಿ ಪೋಸ್ಟ್ ಮಾಡಿದರೆ ಚಾನೆಲ್ ವೈರಲ್ ಆಗುತ್ತದೆ ಎಂದು ಭಾವಿಸಿ ಯುವಕ ಈ ರೀತಿ ಮಾಡಿದ್ದಾನೆ. ನೀಲೇಶ್ವರ ತನ್ನ ಗೆಳೆಯನ ಜೊತೆ ಟವರ್ ಬಳಿ ಬಂದು ಟವರ್​ ಏರಿದ್ದಾಣೆ. ಈ ದೃಶ್ಯವನ್ನು ಆತನ ಸ್ನೇಹಿತ ಚಿತ್ರೀಕರಿಸಿದ್ದಾನೆ.

    ಇದರ ನಡುವೆ ನೀಲೇಶ್ವರ ಟವರ್​ನಲ್ಲಿ ಸಿಲುಕಿಕೊಂಡು ಪ್ರಾಣ ಉಳಿಸಿಕೊಳ್ಳಲು ಪರದಾಡಿದ್ದಾನೆ. ಕೊನೆಗೆ ಸ್ಥಳೀಯರು ಆ ಘಟನೆಯನ್ನು ಕಂಡು ಟವರ್‌ ಬಳಿ ಧಾವಿಸಿದರು. ಇತ್ತ ವಿಡಿಯೋ ಚಿತ್ರೀಕರಿಸುತ್ತಿದ್ದ ಸ್ನೇಹಿತ ಅಲ್ಲಿಂದ ಪರಾರಿಯಾಗಿದ್ದಾನೆ. ಸ್ಥಳೀಯರು ಮಾಹಿತಿ ನೀಡಿದ ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಕೊನೆಗೆ ನೀಲೇಶ್ವರವನ್ನು ಸುರಕ್ಷಿತವಾಗಿ ಇಳಿಸಲು ಸುಮಾರು ಐದು ಗಂಟೆಗಳು ಬೇಕಾಯಿತು.

    ಇದೇ ವೇಳೆ ಪೊಲೀಸರು ಕೂಡ ಘಟನೆಗೆ ಪ್ರತಿಕ್ರಿಯಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಖ್ಯಾತಿಗಾಗಿ ಇಂತಹ ಕೃತ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಇತ್ತೀಚಿಗೆ ಇದೇ ರೀತಿಯ ಹಲವು ಘಟನೆಗಳು ಬೆಳಕಿಗೆ ಬರುತ್ತಲೇ ಇವೆ. ಇನ್ನಾದರೂ ಇಂತಹ ಕೃತ್ಯಗಳಿಗೆ ಕಡಿವಾಣ ಬೀಳಬೇಕಿದೆ. (ಏಜೆನ್ಸೀಸ್​)

    ರೋಹಿತ್​ ಶರ್ಮ-ವಿರಾಟ್​ ಕೊಹ್ಲಿ ಅಭಿಮಾನಿಗಳಿಗೆ ಗುಡ್​ ನ್ಯೂಸ್​: ಮಹತ್ವದ ಘೋಷಣೆ ಮಾಡಿದ ಜಯ್​ ಷಾ!

    ಕುಂಕುಮವಿಟ್ಟು ಸಿಂಪಲ್​​ ಆಗಿ ಕಾಣುವ ಈತ ಉ. ಕನ್ನಡದ ಕುಮಟಾ ಪ್ರತಿಭೆ! ಟಿ20 ವಿಶ್ವಕಪ್ ಗೆಲುವಿಗೆ ಈತನೂ ಕಾರಣ

    ಅಂದು ಅವಮಾನ ಇಂದು ಸನ್ಮಾನ: ಇದಕ್ಕೆ ಹೇಳೋದು… ಹಾರ್ದಿಕ್​ಗೆ ಫ್ಯಾನ್ಸ್ ಕೊಟ್ಟ ಸಂದೇಶವಿದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts