More

    ನಾವು ಗೆಲ್ಲಬಹುದಿತ್ತು ಆದರೆ…; ಫೈನಲ್​ ಸೋಲಿನ ಕುರಿತು ದಕ್ಷಿಣ ಆಫ್ರಿಕಾ ನಾಯಕ ಮಾರ್ಕ್ರಮ್​ ಹೇಳಿದ್ದಿಷ್ಟು

    ಬಾರ್ಬಡೋಸ್​: 09ನೇ ಆವೃತ್ತಿಯ ಟಿ20 ವಿಶ್ವಕಪ್​ನಲ್ಲಿ ಗೆದ್ದು ಚೋಕರ್ಸ್​ ಎಂಬ ಹಣೆಪಟ್ಟಿಯನ್ನು ಕಳಚಿಕೊಳ್ಳಬೇಕೆಂಬ ಇರಾದೆಯಲ್ಲಿದ್ದ ದಕ್ಷಿಣ ಆಫ್ರಿಕಾದ ಕನಸು ಭಗ್ನಗೊಂಡಿದ್ದು, ಟೀಮ್​ ಇಂಡಿಯಾ ವಿರುದ್ಧ 7 ರನ್​ಗಳ ಸೋಲುಂಡಿದೆ. ಗೆಲ್ಲಬಹುದಾಗಿತ್ತಾ ಪಂದ್ಯವನ್ನು ಸೋಲುಂಡ ಕುರಿತು ದಕ್ಷಿಣ ಆಫ್ರಿಕಾದ ನಾಯಕ ಏಡೆನ್​ ಮಾರ್ಕ್ರಮ್​ ಮಾತನಾಡಿದ್ದು, ಹಲವು ವಿಚಾರಗಳ ಕುರಿತು ಮಾಹಿತಿ ನೀಡಿದ್ದಾರೆ.

    ಪೋಸ್ಟ್​ ಮ್ಯಾಚ್​ ಪ್ರಸೆಂಟೇಷನ್​ನಲ್ಲಿ ಈ ಕುರಿತು ಮಾತನಾಡಿದ ಮಾರ್ಕ್ರಮ್​, ಸದ್ಯಕ್ಕೆ ನಮಗೆ ಧೈರ್ಯ ತುಂಬಿದೆ ಎಂದು ಹೇಳುತ್ತೇನೆ. ಸೋತಿರುವುದು ನಮಗೆ ನೋವುಂಟು ಮಾಡುತ್ತದೆ. ಆದರೆ, ನಮ್ಮ ಆಟಗಾರರು ಅಡಿದ ಬಗ್ಗೆ ನಮಗೆ ಹೆಮ್ಮೆ ಇದೆ. ನಾವು ಚೆನ್ನಾಗಿ ಬ್ಯಾಟ್​ ಮಾಡಿದ್ದೆವು. ಆದರೆ, ಅವರು ಬೌಲಿಂಗ್​ ಮಾಡಿದ ರೀತಿ ಅದ್ಭುತವಾಗಿತ್ತು.

    ಅಭಿಯಾನದಲ್ಲಿ ನಾವು ಬಹಳಷ್ಟು ಆಟವನ್ನು ನೋಡಿದ್ದು, ಟಿ20 ಕ್ರಿಕೆಟ್​ನಲ್ಲಿ ಕೊನೆಯ ಎಸೆತ ಮುಗಿಯುವವರೆಗೂ ಪಂದ್ಯವನ್ನು ನಿರ್ಧರಿಸಲು ಸಾಧ್ಯವಿಲ್ಲ. ನಾವು ಆಡಿದ ರೀತಿ ನಮಗೆ ಖುಷಿ ನೀಡಿದ್ದು, ನಾವು ಫೈನಲ್​ಗೆ ಅರ್ಹರಾಗಿದ್ದೆವು. ಪಂದ್ಯವನ್ನು ಗೆಲ್ಲಬಹುದಿತ್ತು. ಎದುರಾಳಿ ನೀಡಿದ್ದ ಟಾರ್ಗೆಟ್​ಅನ್ನು ಸುಲಭವಾಗಿ ಚೇಸ್​ ಮಾಡಬಹುದು ಎಂದುಕೊಂಡೆವು. ಅಂತಿಮವಾಗಿ ಅವರು ಬೌಲ್​ ಮಾಡಿ ಕಂಟ್ರೋಲ್​ ಮಾಡಿದ ರೀತಿ ನಿಜಕ್ಕೂ ಶ್ಲಾಘನೀಯವಾಗಿದ್ದು, ಮುಂದಿನ ದಿನಗಳಲ್ಲಿ ಕಮ್​ಬ್ಯಾಕ್​ ಮಾಡುತ್ತೇವೆ. ನಮ್ಮ ತಂಡದ ಪ್ರದರ್ಶನ ಹೆಮ್ಮೆ ಹಾಗೂ ಖುಷಿ ನೀಡಿದೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್​ ತಂಡದ ನಾಯಕ ಏಡೆನ್​ ಮಾರ್ಕ್ರಮ್​ ಹೇಳಿದ್ದಾರೆ.

    ಇದನ್ನೂ ಓದಿ: ಟೀಮ್​ ಇಂಡಿಯಾ ವಿರುದ್ಧ ಕೇಳಿ ಬಂತು ಮೋಸದಾಟದ ಆರೋಪ; ಸೂರ್ಯಕುಮಾರ್​ ಹಿಡಿದ ಕ್ಯಾಚ್​ನ ಸುತ್ತ ವಿವಾದದ ಹುತ್ತ

    ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿದ ರೋಹಿತ್​ ಶರ್ಮಾ ವಿರಾಟ್​ ಕೊಹ್ಲಿ (76 ರನ್, 59 ಎಸೆತ, 6 ಬೌಂಡರಿ, 2 ಸಿಕ್ಸರ್), ಅಕ್ಷರ್​ ಪಟೇಲ್​ (47 ರನ್, 31 ಎಸೆತ, 1 ಬೌಂಡರಿ, 4 ಸಿಕ್ಸರ್) ಬಿರುಸಿನ ಬ್ಯಾಟಿಂಗ್​ ಫಲವಾಗಿ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 176 ರನ್​ ಗಳಿಸಿತ್ತು. ಗೆಲ್ಲುವ ಆಸೆಯೊಂದಿಗೆ ಗುರಿ ಬೆನ್ನತ್ತಿದ್ದ ಹರಿಣಗಳಿಗೆ ಆರಂಭದಲ್ಲೇ ಶಾಕ್​ ನೀಡಿದ ಭಾರತದ ಬೌಲರ್​ಗಳು ದಿಟ್ಟ ಪ್ರತಿರೋಧದ ನಡುವೆಯೂ ಎದುರಾಳಿ ತಂಡವನ್ನು 20 ಓವರ್​ಗಳಲ್ಲಿ 169 ರನ್​ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು.

    ಟೀಮ್​ ಇಂಡಿಯಾ ಪರ ಹಾರ್ದಿಕ್​ ಪಾಂಡ್ಯ (3-0-20-3), ಅರ್ಷ್​ದೀಪ್​ ಸಿಂಗ್​ (4-0-20-2), ಜಸ್ಪ್ರೀತ್​ ಬುಮ್ರಾ (4-0-18-2), ಅಕ್ಷರ್​ ಪಟೇಲ್​ (4-0-49-1), ಕುಲ್ದೀಪ್​ ಯಾದವ್ (4-0-45-0), ರವೀಂದ್ರ ಜಡೇಜಾ (1-0-12-0) ರನ್​ ನೀಡಿ ವಿಕೆಟ್​ ಪಡೆಯುವ ಮೂಲಕ ಟೀಮ್​ ಇಂಡಿಯಾಗೆ ಕಪ್​ ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts