More

    ಪಕ್ಷದ ಇಮೇಜ್​ಗೆ ಧಕ್ಕೆ ತರುವವರನ್ನು ಸೇರಿಸುವುದಿಲ್ಲ; ಶರದ್​ ಪವಾರ್​​​

    ಮುಂಬೈ: ಅಜಿತ್ ಪವಾರ್ ಪಾಳೆಯದ ಕೆಲವು ಶಾಸಕರು ಶರದ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷಕ್ಕೆ ಮರಳಲು ಸಿದ್ಧರಿದ್ದಾರೆ ಎಂಬ ಮಾತು ಕೇಳಿಬರುತ್ತಿದ್ದಂತೆ, ಪಕ್ಷವನ್ನು ದುರ್ಬಲಗೊಳಿಸಲು ಬಯಸುವವರನ್ನು ಸೇರಿಸಿಕೊಳ್ಳುವುದಿಲ್ಲ ಎಂದು ಎಸ್​ಪಿ ಮುಖ್ಯಸ್ಥ ಶರದ್​ ಪವಾರ್​​​​ ಸ್ಪಷ್ಟನೆ ನೀಡಿದ್ದಾರೆ.

    ಇದನ್ನು ಓದಿ: ಕೇರಳ ಹೆಸರು ಬದಲಾವಣೆಗೆ ನಿರ್ಣಯ ಅಂಗೀಕಾರ; ಹೊಸ ಹೆಸರು ಏನು ಗೊತ್ತಾ?

    ಸಂಘಟನೆಯನ್ನು ಬಲಪಡಿಸಲು ಸಹಾಯ ಮಾಡುವ ಮತ್ತು ಪಕ್ಷದ ಇಮೇಜ್‌ಗೆ ಧಕ್ಕೆ ಬಾರದಂತೆ ನಡೆದುಕೊಳ್ಳುವ ನಾಯಕರನ್ನು ತೆಗೆದುಕೊಳ್ಳಲಾಗುವುದು. ಆದರೆ ಪಕ್ಷದ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಚರ್ಚಿಸಿ ನಂತರ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಅಜಿತ್​ ಪವಾರ್​​ ಪಾಳೆಯದ ಫಲಿತಾಂಶ ನೋಡಿದ ಬಳಿಕ, ಕೆಲವು ಶಾಸಕರುರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಶರದ್ ಪವಾರ್ ನೇತೃತ್ವದ ಎನ್‌ಸಿಪಿಗೆ ಮರಳಲು ಸಿದ್ಧರಿದ್ದಾರೆ ಎಂಬ ಸುದ್ದಿ ಸದ್ದು ಮಾಡುತ್ತಿದೆ.

    ಎನ್‌ಸಿಪಿ ಸ್ಪರ್ಧಿಸಿದ ನಾಲ್ಕು ಸ್ಥಾನಗಳಲ್ಲಿ ಒಂದನ್ನು ಮಾತ್ರ ಗೆದ್ದುಕೊಂಡರೆ, ಶರದ್ ಪವಾರ್ ನೇತೃತ್ವದ ಎನ್​ಸಿಪಿ ತಾನು ಸ್ಪರ್ಧಿಸಿದ್ದ ಹತ್ತು ಸ್ಥಾನಗಳಲ್ಲಿ ಎಂಟನ್ನು ಗೆದ್ದಿದೆ. ಮೈತ್ರಿಕೂಟ, ಭಾರತೀಯ ಜನತಾ ಪಕ್ಷ (ಬಿಜೆಪಿ), ಶಿವಸೇನೆ ಮತ್ತು ಎನ್‌ಸಿಪಿ ಮಹಾರಾಷ್ಟ್ರದಲ್ಲಿ ಒಟ್ಟಾರೆಯಾಗಿ 17 ಸ್ಥಾನಗಳನ್ನು ಗಳಿಸಿತು. ಅದರಲ್ಲಿ ಬಿಜೆಪಿ ಒಂಬತ್ತು ಸ್ಥಾನಗಳನ್ನು ಮತ್ತು ಶಿವಸೇನೆ ಏಳು ಸ್ಥಾನಗಳನ್ನು ಗಳಿಸಿತು.

    ಅಲ್ಲದೆ, ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ನಾಯಕರು ಮೋದಿ 3.0 ಕ್ಯಾಬಿನೆಟ್‌ನಲ್ಲಿ ರಾಜ್ಯ ಸಚಿವ ಸ್ಥಾನವನ್ನು ನೀಡಿದ್ದಕ್ಕಾಗಿ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್‌ಗೆ ಎಂಒಎಸ್ ಹುದ್ದೆಯನ್ನು ನೀಡಲಾಯಿತು. ಆದರೆ ಅವರು ಅದನ್ನು ತಿರಸ್ಕರಿಸಿದ್ದಾರೆ. ಅವರು ಈ ಹಿಂದೆ ಕ್ಯಾಬಿನೆಟ್ ಸಚಿವರಾಗಿದ್ದ ಕಾರಣ ಕೇಂದ್ರ ಸಂಪುಟದಲ್ಲಿ ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಸಚಿವ ಸ್ಥಾನವನ್ನು ಸ್ವೀಕರಿಸುವುದು ಅವರಿಗೆ ಹಿಂಬಡ್ತಿ ಎಂದು ಪರಿಗಣಿಸಿರುವುದರಿಂದ ಎಂಒಎಸ್ ಹುದ್ದೆಯನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್​​)

    ಅರವಿಂದ್ ಕೇಜ್ರಿವಾಲ್ ಜಾಮೀನಿಗೆ ಹೈಕೋರ್ಟ್ ತಡೆ; ಈ​​ ಅವಲೋಕನ ನ್ಯಾಯಸಮ್ಮತವಲ್ಲ ಎಂದ ನ್ಯಾಯಾಲಯ

    See also  ಶಿಸ್ತು ಕಲಿಯದಿದ್ದರೆ ಕಠಿಣ ಕ್ರಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts