More

    ರೋಹಿತ್ ಮತ್ತು ವಿರಾಟ್​ಗೆ ಇದೇ ಫೈನಲ್​ ಟಿ20 ವಿಶ್ವಕಪ್​! ಹೊಸ ಅಧ್ಯಾಯಕ್ಕೆ ಸಜ್ಜಾದ ಬಿಸಿಸಿಐ

    ನವದೆಹಲಿ: ನಿನ್ನೆ (ಜೂ.27) ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್​ ನಡುವಿನ ಸೆಮಿಫೈನಲ್​ ಪಂದ್ಯದಲ್ಲಿ 68 ರನ್​ಗಳ ಅಂತರದಲ್ಲಿ ಇಂಗ್ಲೆಂಡ್​ ವಿರುದ್ಧ ರೋಹಿತ್ ಪಡೆ ಭರ್ಜರಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ಕ್ರಿಕೆಟ್ ಲೋಕದ ದಾಖಲೆಗಳ ಸರದಾರರು ಎಂದೇ ಕರೆಸಿಕೊಂಡಿರುವ ನಾಯಕ ರೋಹಿತ್ ಶರ್ಮ ಮತ್ತು ಕಿಂಗ್ ಕೊಹ್ಲಿ, ಶನಿವಾರ (ಜೂ.29) ಬಾರ್ಬಡಸ್​ನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯವೇ ಕಡೆಯ ಟಿ20 ಮ್ಯಾಚ್ ಎಂಬ ಸುದ್ದಿ ಇದೀಗ ಸಾಮಾಜಿಕ ಜಾಲತಾಣವನ್ನು ಸುತ್ತುವರೆದಿದೆ.

    ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದ ದುರ್ಬಳಕೆ ಪ್ರಕರಣ: ಸಿಎಂ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ

    ಫೈನಲ್ ಟಿ20 ವಿಶ್ವಕಪ್ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿರುವ ಟೀಮ್ ಇಂಡಿಯಾಗೆ ನಾಯಕ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಅವರ ಕೊಡುಗೆ ಬಹಳ ಮಹತ್ವದ್ದಾಗಿದೆ. ಇವರಿಬ್ಬರ ಆಟದ ಮೇಲೆ ಮಾಜಿ ಕ್ರಿಕೆಟಿಗರು ಹಾಗೂ ಕ್ರಿಕೆಟ್ ಅಭಿಮಾನಿಗಳು ಅಪಾರ ನಿರೀಕ್ಷೆಗಳನ್ನೇ ಇಟ್ಟುಕೊಂಡಿದ್ದಾರೆ. ಆದರೆ, ಈ ಮಧ್ಯೆ ರೋಹಿತ್ ಆಟದಿಂದ ತೃಪ್ತಿ ಕಂಡಿರುವ ಫ್ಯಾನ್ಸ್, ಕೊಹ್ಲಿ ಅವರ ಸತತ ಕಳಪೆ ಪ್ರದರ್ಶನದಿಂದ ಭಾರೀ ನಿರಾಸೆ ಹೊಂದಿದ್ದಾರೆ.

    ಒಂದೆಡೆ ಟೀಮ್ ಇಂಡಿಯಾ ಟಿ20 ವಿಶ್ವಕಪ್ 2024ರ ಫೈನಲ್ ಪಂದ್ಯ ಗೆದ್ದು, ಅಪಾರ ಸಂಖ್ಯೆಯ ಭಾರತೀಯರ ಆಸೆಯನ್ನು ಈಡೇರಿಸಲಿದೆ ಎಂದು ಭಾವಿಸಿದರೆ, ಮತ್ತೊಂದೆಡೆ ಕ್ರಿಕೆಟ್ ದಿಗ್ಗಜರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಅವರ ಅಂತಿಮ ಟಿ20 ಪಂದ್ಯ ಇದೇ ಆಗಿರಲಿದೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದೆ. ಇದು ಸತ್ಯ ಎಂದು ಕೂಡ ಹೇಳಲಾಗಿದೆ. 2024ರ ಟಿ20 ವಿಶ್ವಕಪ್ ಗೆಲುವೇ ಕೊಹ್ಲಿ-ಹಿಟ್​ಮ್ಯಾನ್​ರ ಫೈನಲ್ ಡ್ಯಾನ್ಸ್​ ಸಂಭ್ರಮ ಎಂಬ ವಿಷಯ ಸದ್ಯ ಕ್ರಿಕೆಟ್ ಪ್ರಿಯರಲ್ಲಿ ಭಾರೀ ಆತಂಕ ತಂದೊಡ್ಡಿದೆ.

    ಇದನ್ನೂ ಓದಿ: ಸದಸ್ಯರ ಅಭಿವೃದ್ಧಿಗೆ ಶ್ರಮ : ಬೀಳ್ಕೊಡುಗೆ ಸಮಾರಂಭದಲ್ಲಿ ಪ್ರಭಾಕರ ಶೆಟ್ಟಿ ಹೇಳಿಕೆ

    ಇದಕ್ಕೆ ಪುಷ್ಠಿ ನೀಡಿರುವುದು ಬಿಸಿಸಿಐ ನಿರ್ಧಾರ ಎಂದು ಅನೇಕರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯಿಸಿದ್ದಾರೆ. 2024ರ ವಿಶ್ವಕಪ್ ಬಳಿಕ ಟೀಮ್ ಇಂಡಿಯಾದ ಹಿರಿಯ ಕ್ರಿಕೆಟಿಗರಾದ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾರನ್ನು ಈ ಟೂರ್ನಿ ಮುಗಿದ ನಂತರ ಟಿ20 ಕ್ರಿಕೆಟ್​ ಫಾರ್ಮೆಟ್​ನಿಂದ ಕೈಬಿಡಲಾಗುವುದು ಎಂದು ಹೇಳಲಾಗಿದೆ. 2026ರ ಟಿ20 ವಿಶ್ವಕಪ್​ನ ಭಾರತೀಯ ಕ್ರಿಕೆಟ್‌ ತಂಡದಲ್ಲಿ ಇದೀಗ ಬದಲಾವಣೆಯ ಸಮಯ ಬಂದಿದ್ದು, ಹೊಸ ಯುಗ ಆರಂಭ ಎಂದು ಬಿಸಿಸಿಐ ಮತ್ತು ರಾಷ್ಟ್ರೀಯ ಆಯ್ಕೆದಾರರು ಚರ್ಚಿಸಿದ್ದಾರೆ ಎನ್ನಲಾಗಿದೆ. ಈ ಟಿ20 ವಿಶ್ವಕಪ್​ ಟೂರ್ನಿ ವಿರಾಟ್ ಹಾಗೂ ರೋಹಿತ್​ಗೆ ಕೊನೆಯೇ? ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ,(ಏಜೆನ್ಸೀಸ್).

    ಇವರಿಗೋಸ್ಕರ ಆದ್ರೂ ನೀವು ಟಿ20 ವಿಶ್ವಕಪ್​ ಗೆಲ್ಲಬೇಕು! ರೋಹಿತ್ ಪಡೆಗೆ ನವಜೋತ್ ಸಿಂಗ್​ ಸಿಧು ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts