More

    ವಿಶ್ವಕಪ್​ ಎಂದರೆ ಆರ್​ಸಿಬಿ ಪರ ಆಡಿದಂತಲ್ಲಾ; ಕೊಹ್ಲಿ ಪ್ರದರ್ಶನದ ಕುರಿತು ಟೀಕಿಸಿದ ಪಾಕ್​ ಮಾಜಿ ನಾಯಕ

    ನವದೆಹಲಿ: 17ನೇ ಆವೃತ್ತಿಯ ಐಪಿಎಲ್​ನಲ್ಲಿ ಭರ್ಜರಿ ಬ್ಯಾಟಿಂಗ್​ ಮೂಲಕ ಆರೆಂಜ್​ ಕ್ಯಾಪನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಹಲವು ದಾಖಲೆಗಳನ್ನು ಬರೆದಿದ್ದ ವಿರಾಟ್​ ಕೊಹ್ಲಿ ಟಿ20 ವಿಶ್ವಕಪ್​ನಲ್ಲೂ ಟಾಪ್​ ರನ್​ ಸ್ಕೋರರ್​ ಆಗಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಚುಟುಕು ವಿಶ್ವಸಮರದಲ್ಲಿ ವಿರಾಟ್​ ಯಾಕೋ ಮಂಕಾದಂತೆ ಕಾಣುತ್ತಿದ್ದು, ಬಾಂಗ್ಲಾದೇಶ ವಿರುದ್ಧ ಹೊರತುಪಡಿಸಿ ಉಳಿದ ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನವನ್ನುನೀಡಿಲ್ಲ. ಇತ್ತ ವಿರಾಟ್​ ಕೊಹ್ಲಿಯ ಫಾರ್ಮ್​ ಟೀಮ್​ ಇಂಡಿಯಾವನ್ನು ಚಿಂತೆಗೆ ದೂಡಿದ್ದು, ಇದರ ನಡುವೆಯೇ ಪಾಕಿಸ್ತಾನದ ಮಾಜಿ ನಾಯಕ ರಶೀದ್​ ಲತೀಫ್​ ವಿರಾಟ್​ ಕೊಹ್ಲಿ ಕುರಿತು ಟೀಕೆಗಳನ್ನು ಮಾಡುವ ಮೂಲಕ ಸುದ್ದಿಯಾಗಿದ್ದಾರೆ.

    ಪಾಕಿಸ್ತಾನದ ಮಾಜಿ ನಾಯಕ ರಶೀದ್​ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದ್ದು, ಅವರು ಆರ್​ಸಿಬಿ ಹೆಸರನ್ನು ಕೂಡ ಉಲ್ಲೇಖಿಸಿದ್ದಾರೆ. ಇದು ಕ್ರೀಡಾಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಮಾಜಿ ನಾಯಕನ ಹೇಳಿಕೆಗೆ ಕಿಡಿಕಾರಿದ್ದಾರೆ.

    ಇದನ್ನೂ ಓದಿ: ಟಿ20 ವಿಶ್ವಕಪ್​ ಫೈನಲ್​ಗೆ ಮಳೆ ಭೀತಿ; ಪಂದ್ಯ ರದ್ದಾದರೆ ಯಾರು ವಿನ್ನರ್? ಐಸಿಸಿ ನಿಯಮವೇನು?

    ಟಿ20 ವಿಶ್ವಕಪ್​ ಎಂದರೆ ಬೆಂಗಳೂರಿನಲ್ಲಿರುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್​ಸಿಬಿ ಪರ ಆಡಿದಂತಲ್ಲ. ಅಲ್ಲಿ ವಾತಾವರಣಕ್ಕೂ ಇಲ್ಲಿಗೂ ಸಾಕಷ್ಟು ವ್ಯತ್ಯಾಸವಿದ್ದು, ಕೊಹ್ಲಿ ಇದನ್ನು ಗಮನಿಸಬೇಕಿದೆ. ಅಮೆರಿಕ ಹಾಗೂ ವೆಸ್ಟ್​ ಇಂಡೀಸ್​ನ ಪಿಚ್​ಗಳಲ್ಲಿ ಬ್ಯಾಟ್ಸ್​ಮನ್​ಗಳು ರನ್​ ಗಳಿಸಲು ಪರದಾಡುತ್ತಿದ್ದು, ಇದನ್ನು ಕೊಹ್ಲಿ ಅರ್ಥ ಮಾಡಿಕೊಂಡು ಆಡಬೇಕಿದೆ.

    ವಿರಾಟ್​ ಕೊಹ್ಲಿ ತಮ್ಮ ಯೋಜನೆಗಳಿಂದ ಹೊರಗುಳಿದಿದ್ದು, ಇದು ಬೆಂಗಳೂರಿನ ಪಿಚ್​ ಅಲ್ಲಾ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಟೀಮ್​ ಇಂಡಿಯಾ ಮೊದಲು ಬ್ಯಾಟ್​​ ಮಾಡಿ ಗೆಲುವು ಸಾಧಿಸಿ ಗೆಲುವು ಕಂಡಿರುವುದು ಅಷ್ಟು ಸುಲಭದ ಮಾತಲ್ಲ. ಕೊಹ್ಲಿ ತಮ್ಮ ಯೋಜನೆಗಳನ್ನು ಬದಲಿಸಿಕೊಂಡರೆ ಫೈನಲ್​ನಲ್ಲಿ ಚೆನ್ನಾಗಿ ಆಡಬಹುದಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ನಾಯಕ ರಶೀದ್​ ಲತೀಫ್​​​ ಅಭಿಪ್ರಾಯಪಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts