More

    ಊಟವಿಲ್ಲದೇ ಮಲಗಿದ ದಿನಗಳು! ಬಟ್ಟೆ ಸೋಪು ಮಾರಾಟದಿಂದ ಸ್ಕೂಲ್​ ಫೀಸ್​ ಕಟ್ಟಿದ ವ್ಯಕ್ತಿ ಇಂದು…

    ಮನರಂಜನಾ ಉದ್ಯಮ ಅದ್ಭುತ ಪ್ರತಿಭೆಗಳನ್ನು ಜನರಿಗೆ ಪರಿಚಯಿಸುವುದರ ಜತೆ ದಿಗ್ಗಜ ನಟ-ನಟಿಯರನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ಮಾಡಿಕೊಡುತ್ತದೆ. ಚಿತ್ರರಂಗದಲ್ಲಿ ಮೊದ ಮೊದಲು ಗುರುತಿಸಿಕೊಳ್ಳುವುದು ಬಹಳ ಕಷ್ಟ. ಆದರೆ, ಒಂದು ಪಾತ್ರ ಅಥವಾ ಸಿನಿಮಾದ ಮೂಲಕ ಪ್ರೇಕ್ಷಕರ ಮನದಲ್ಲಿ ನೆಲೆಸಿದರೆ ಸಾಕು, ಮುಂದಿನ ಹಾದಿ ನೀರು ಕುಡಿದಷ್ಟೇ ಸುಲಭ. ಜೀವನವೆ ಹಾಗೇ ರೀ…ಯಾವ ಸಮಯದಲ್ಲಿ ಏನಾಗುತ್ತದೆ? ಎಂಬುದು ತಿಳಿಯುವುದಿಲ್ಲ. ಬದುಕು ದುಸ್ತರವಾಯಿತು ಎಂದು ಚಿಂತಿಸಿ, ಜೀವವನ್ನೇ ಅಂತ್ಯಗೊಳಿಸುವ ತಪ್ಪು ನಿರ್ಧಾರ ಕೈಗೊಳ್ಳುವವರ ಸಂಖ್ಯೆ ಅದೆಷ್ಟೋ! ಬಾಲ್ಯದಿಂದಲೇ ಮನೆಯ ಒತ್ತಡ, ಆರ್ಥಿಕ ಪರಿಸ್ಥಿತಿ ಹೀಗೆ ನಾನಾ ಸಮಸ್ಯೆಗಳಿಗೆ ಸಿಲುಕಿ, ಒದ್ದಾಡುವ ಕಲಾವಿದರು, ನಮ್ಮ ಜೀವನ ಇಲ್ಲಿಗೆ ಮುಗಿತು. ಇನ್ನು ನಮಗೆ ಬೇರೆ ದಾರಿ ಉಳಿದಿಲ್ಲ ಎಂದು ದುಡುಕಿ ತಮ್ಮ ಜೀವವನ್ನೇ ಅಂತ್ಯಗೊಳಿಸಿಕೊಂಡ ನಿದರ್ಶನವೂ ಉಂಟು.

    ಇದನ್ನೂ ಓದಿ: ಬಿಜೆಪಿ ವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ

    ಇಂತಹದ್ದೇ ಕಷ್ಟಕರ ಜೀವನವನ್ನು ಬಾಲ್ಯದಿಂದಲೇ ನೋಡಿಕೊಂಡು ಬಂದ ಈ ನಟ, ಹೇಗೆ ಬದುಕಬೇಕು? ಎಷ್ಟು ಗಟ್ಟಿಯಾಗಿ ನಿಂತು ಕಷ್ಟಗಳನ್ನು ಎದುರಿಸಬೇಕು ಎಂಬುದನ್ನು ಅರಿತು ಇಂದು ಚಿತ್ರರಂಗದಲ್ಲಿ ತಮ್ಮದೇ ಒಂದು ಹೆಸರು ಸ್ಥಾಪಿಸಿಕೊಂಡಿದ್ದಾರೆ. ನನಗೆ ಶಾಲೆ ಮಧ್ಯಾಹ್ನದ ನಂತರ ಇರುತ್ತಿತ್ತು. ಆಗ ನಾನು ಬೆಳಗ್ಗೆಯೇ ಶಾಲಾ ಸಮಯವಸ್ತ್ರ ಧರಿಸಿ, ಬಟ್ಟೆ ತೊಳೆಯುವ ಸೋಪುಗಳನ್ನು ಮನೆ ಮನೆಗೆ ಹೋಗಿ ಮಾರಾಟ ಮಾಡಿಕೊಂಡು ಬರುತ್ತಿದ್ದೆ. ಅದರಿಂದ ಬಂದ ಅಷ್ಟು ಹಣವನ್ನು ನನ್ನ ಪೋಷಕರಿಗೆ ಕೊಡುತ್ತಿದ್ದೆ. ಸುತ್ತಮುತ್ತಲಿನ ಜನ ನನ್ನಿಂದ ವಸ್ತುಗಳನ್ನು ಖರೀದಿ ಮಾಡಲು ಕಾಯುತ್ತಿದ್ದರು. ಕಾರಣ, ನಾನು ಬಡತನದಿಂದ ಹೊರಬರಬೇಕು, ಒಬ್ಬ ವಿದ್ಯಾವಂತನಾಗಬೇಕು ಎಂಬ ಆಸೆ ಅವರದ್ದಾಗಿತ್ತು ಎಂದು ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.

    ಅಂದು ನಾನು ಬಡತನಕ್ಕೆ ಹೆದರಲಿಲ್ಲ. ಏಕೆಂದರೆ ನನ್ನ ತಂದೆ ಯಾವಾಗಲೂ ನನಗೆ ಪ್ರಾಮಾಣಿಕವಾಗಿರಲು ಹೇಳುತ್ತಿದ್ದರು. ಅದರಂತೆಯೇ ನಾನು ಬದುಕಿ ಕಟ್ಟಿಕೊಂಡೆ. ಆ ದಿನಗಳಲ್ಲಿ ನಮಗೆ ಒಂದೊತ್ತು ಊಟ ತಿನ್ನಲು ಕೂಡ ಕಷ್ಟವಿತ್ತು. ಹಣವಿಲ್ಲದೇ ಹಲವು ದಿನ ಹಸಿವಿನಿಂದ ನರಳಬೇಕಾಗಿತ್ತು. ಮುಂಬೈಗೆ ಬಂದ ನಂತರವೂ ಪರಿಸ್ಥಿತಿ ಹೀಗೆಯೇ ಇತ್ತು. ಆಗಲೂ ಸಹ ನಾನು ಧೈರ್ಯ ಕಳೆದುಕೊಳ್ಳಲಿಲ್ಲ ಎಂದು ತಮ್ಮ ಮನದಾಳದ ಮಾತುಗಳನ್ನು ಸಂದರ್ಶನಗಳಲ್ಲಿ ಹಂಚಿಕೊಂಡಿದ್ದಾರೆ. ಅಸಲಿಗೆ ಆ ನಟ ಬೇರಾರೂ ಅಲ್ಲ ಬಾಲಿವುಡ್​ ಚಿತ್ರರಂಗದ ‘ಬ್ಯಾಡ್ ಮ್ಯಾನ್’ ಎಂದೇ ಖ್ಯಾತರಾದ ಖಳನಟ ಗುಲ್ಶನ್ ಗ್ರೋವರ್.

    ಇದನ್ನೂ ಓದಿ: ಎಸ್‌ಡಿಎಂಸಿ ಅಧ್ಯಕ್ಷೆಯಿಂದ ಉಚಿತ ಸೇವೆ : ಸ್ವಂತ ಕಾರಿನಲ್ಲಿ ಮಕ್ಕಳಿಗೆ ಪಿಕ್‌ಅಪ್-ಡ್ರಾಪ್ ; ಶಾಲೆ ಉಳಿಸಿ-ಬೆಳೆಸಲು ಸಹಕಾರ

    ವಿಲನ್​ ಪಾತ್ರಗಳಿಗೆ ಹೆಚ್ಚು ಹೆಸರುವಾಸಿಯಾದ ಗುಲ್ಶನ್ ಗ್ರೋವರ್, 400 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಹೆಚ್ಚೆಚ್ಚು ನೆಗೆಟಿವ್ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಗ್ರೋವರ್​, ತಮ್ಮ ಪಾತ್ರಗಳ ಮೂಲಕವೇ ಸಿನಿಪ್ರಿಯರ ಮನಗೆದ್ದಿದ್ದಾರೆ.

    ಅಂದು ಅವಮಾನ ಇಂದು ಸನ್ಮಾನ: ಇದಕ್ಕೆ ಹೇಳೋದು… ಹಾರ್ದಿಕ್​ಗೆ ಫ್ಯಾನ್ಸ್ ಕೊಟ್ಟ ಸಂದೇಶವಿದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts