More

    ಆ ಘಟನೆಗಳನ್ನು ನೆನೆಸಿಕೊಂಡರೆ ಈಗಲೂ…; ಟಿ20 ವಿಶ್ವಕಪ್​ ಗೆಲುವಿನ ಬಳಿಕ ಹಾರ್ದಿಕ್​ ಪಾಂಡ್ಯ ಭಾವುಕ ನುಡಿ

    ಬಾರ್ಬಡೋಸ್​: ಯುಎಸ್​ಎ-ವೆಸ್ಟ್​ ಇಂಡೀಸ್​ ಆತಿಥ್ಯದಲ್ಲಿ ನಡೆದ 09ನೇ ಆವೃತ್ತಿಯ ಟಿ20 ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾ ಚಾಂಪಿಯನ್​ ಪಟ್ಟ ಅಲಂಕರಿಸಿದ್ದು, ಅಜೇಯವಾಗಿ ಫೈನಲ್​ ಗೆದ್ದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಬಾರಿಯ ಟೂರ್ನಿಯಲ್ಲಿ ಆಲ್ರೌಂಡ್​ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದ ಹಾರ್ದಿಕ್​ ಪಾಂಡ್ಯ ಫೈನಲ್​ ಪಂದ್ಯದಲ್ಲಿ ಅಪಾಯಕಾರಿ ಎನ್ನಿಸಿದ್ದ ಹೆನ್ರಿಚ್​ ಕ್ಲಾಸೆನ್​ ವಿಕೆಟ್​ ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಭಾರೀ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

    ಐಪಿಎಲ್​ ಶುರುವಾದಾಗಿನಿಂದಲೂ ಮುಂಬೈ ಇಂಡಿಯನ್ಸ್​ ನಾಯಕತ್ವ ಸೇರಿದಂತೆ ಹಲವು ವಿಚಾರಗಳಿಗೆ ಸುದ್ದಿಯಲ್ಲಿದ್ದ ಹಾರ್ದಿಕ್​ ಪಾಂಡ್ಯರನ್ನು ಟಿ20 ವಿಶ್ವಕಪ್​ಗೆ ಆಯ್ಕೆ ಮಾಡಿದರ ಬಗ್ಗೆ ಹಲವರು ಅಪಸ್ವರ ತೆಗೆದಿದ್ದರು. ಆ ಬಳಿಕ ವಿಶ್ವಕಪ್​ನಲ್ಲಿ ಅಲ್ರೌಂಡ್​ ಪ್ರದರ್ಶನದ ಮೂಲಕ ತಂಡಕ್ಕೆ ಆಸರೆಯಾದ ಹಾರ್ದಿಕ್​ ಈ ಕುರಿತು ಮಾತನಾಡಿದ್ದು, ತಮ್ಮ ಕಮ್​ಬ್ಯಾಕ್​ಗೆ ಸಹಾಯ ಮಾಡಿದ ಪ್ರಮುಖ ಅಂಶಗಳನ್ನು ಉಲ್ಲೇಖಿಸಿದ್ದಾರೆ.

    ಇದನ್ನೂ ಓದಿ: ವಿಶ್ವಕಪ್ ಬಳಿಕ ಕೊಹ್ಲಿ-ರೋಹಿತ್​​ಗೆ ಕೊಕ್, ಪಾಂಡ್ಯಾಗೆ ನಾಯಕನ ಪಟ್ಟ..? ಸೂರ್ಯಕುಮಾರ್​​ಗೂ ಇದೆ ಅವಕಾಶ!

    ಕಳೆದ ಕೆಲವು ದಿನಗಳಿಂದ ನನ್ನ ಜೀವನದಲ್ಲಿ ಆದ ಘಟನೆಗಳನ್ನು ನೆನಪಿನಲ್ಲಿಟ್ಟುಕೊಂಡು ನಾನು ಆಟವಾಡಿದ್ದೇನೆ. ಪ್ರತಿಬಾರಿಯೂ ನಾವು ಕಷ್ಟಪಟ್ಟು ಕೆಲಸ ಮಾಡಿದಾಗ ಯಾವುದೋ ಒಂದು ಅಂಶ ನಮ್ಮ ಕೈ ಹಿಡಿಯುತ್ತಿರಲಿಲ್ಲ. ಆದರೆ, ಇಂದು ನಾವು ಇಡೀ ರಾಷ್ಟ್ರ ಬಯಸಿದ್ದನ್ನು ಪೂರೈಸಿದ್ದೇವೆ. ಜನರು ನಮ್ಮನ್ನು ಬೆಂಬಲಿಸಿದ ರೀತಿ ಎಂದಿಗೂ ಮರೆಯಲು ಸಾಧ್ಯವಿಲ್ಲ.

    ನನಗೆ ಇದು ತುಂಬಾ ವಿಶೇಷವಾಗಿದ್ದು, ಕಳೆದ ಆರು ತಿಂಗಳು ನನ್ನ ಪಾಲಿಗೆ ತುಂಬಾ ಕಷ್ಟಕರವಾಗಿತ್ತು. ಆ ಘಟನೆಗಳನ್ನು ನೆನೆಸಿಕೊಂಡರೆ ಈಗಲೂ ಬೇಸರವಾಗುತ್ತದೆ. ಕಷ್ಟಪಟ್ಟು ಕೆಲಸ ಮಾಡಿದರೆ ಎಲ್ಲವೂ ನಮ್ಮ ಕೈ ಹಿಡಿಯುತ್ತದೆ ಎಂಬುದಕ್ಕೆ ನಮ್ಮ ಪ್ರದರ್ಶನವೇ ಸಾಕ್ಷಿ. ನನಗೆ ರಾಹುಲ್​ ದ್ರಾವಿಡ್​ ಅವರೊಂದಿಗೆ ಕೆಲಸ ಮಾಡಿದ್ದು ಖುಷಿ ನೀಡಿದೆ. ಅವರೊಬ್ಬ ಅದ್ಭುತ ವ್ಯಕ್ತಿಯಾಗಿದ್ದು, ಅವರೊಂದಿಗೆ ಕೆಲಸ ಮಾಡಿದ ಪ್ರತಿಕ್ಷಣವನ್ನು ಆನಂದಿಸಿದ್ದೇನೆ. ಅವರಿಗೆ ಈ ರೀತಿಯ ವಿದಾಯ ನೀಡಲು ನಮಗೆ ತುಂಬಾ ಖುಷಿಯಾಗಿದ್ದು, ಇದಕ್ಕಿಂತ ಬೇರೇನು ಬೇಕು ಎಂದು ಹಾರ್ದಿಕ್​ ಪಾಂಡ್ಯ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts