More

    ಅವರ ಯೋಜನೆಯಂತೆ ನಾವು…; ಟೀಮ್​ ಇಂಡಿಯಾ ಗೆಲುವಿನ ಕಾರಣ ಬಿಚ್ಚಿಟ್ಟ ನಾಯಕ ರೋಹಿತ್​

    ಗ್ರಾಸ್​ ಐಲೆಟ್​: ಇಲ್ಲಿನ ಡೆರೆನ್​ ಸ್ಯಾಮಿ ರಾಷ್ಟ್ರೀಯ ಕ್ರಿಕೆಟ್​ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್​ನ ಸೂಪರ್​ 08 ಪಂದ್ಯದಲ್ಲಿ ರೋಹಿತ್​ ಪಡೆಯು ಮಾಜಿ ಚಾಂಪಿಯನ್ನರಿಗೆ ಶಾಕ್​ ನೀಡಿದ್ದು, ಆಸ್ಟ್ರೇಲಿಯಾವನ್ನು ಮಣಿಸುವ ಮೂಲಕ ಸೆಮಿಫೈನಲ್​ ಪ್ರವೇಶಿಸಿದ್ದು, ಕಪ್​ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. ಇನ್ನೂ ಪಂದ್ಯದ ಬಳಿಕ ಈ ಕುರಿತು ಮಾತನಾಡಿರುವ ಹಲವು ವಿಚಾರಗಳನ್ನು ಹಂಚಿಕೊಂಡಿದ್ದು. ಆಸ್ಟ್ರೇಲಿಯಾದವರು ಹಾಕಿದ ಮಂತ್ರವನ್ನೇ ಅಸ್ತ್ರವನ್ನಾಗಿಸಿಕೊಂಡ ಬಗ್ಗೆ ಹೇಳಿದ್ದಾರೆ.

    ಟಾಸ್​ ಸೊತು ಮೊದಲು ಬ್ಯಾಟಿಂಗ್​ಗೆ ಇಳಿದ ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮಾ (92 ರನ್, 41 ಎಸೆತ, 7 ಬೌಂಡರಿ, 8 ಸಿಕ್ಸರ್) ಶತಕವಂಚಿತ ಆಟದ ಫಲವಾಗಿ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 205 ರನ್​ ಗಳಿಸಿತ್ತು. ಬೃಹತ್​ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ ತಂಡಕ್ಕೆ ಟ್ರಾವಿಸ್​ ಹೆಡ್​ (76 ರನ್, 43 ಎಸೆತ, 9 ಬೌಂಡರಿ, 4 ಸಿಕ್ಸರ್) ಫಲವಾಗಿ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 181 ರನ್​ಗಳಿಸಿ ಸೋಲೊಪ್ಪಿಕೊಂಡಿತ್ತು. ಇನ್ನೂ ತಂಡದ ಅಮೋಘ ಪ್ರದರ್ಶನದ ಕುರಿತು ಮಾತನಾಡಿರುವ ರೋಹಿತ್​ ಶರ್ಮಾ ಆಟಗಾರರನ್ನು ಹಾಡಿ ಹೊಗಳಿದ್ದಾರೆ.

    Rohit Sharma Reaction

    ಇದನ್ನೂ ಓದಿ: ಹಾಲಿನ ದರ ಹೆಚ್ಚಿಸಿದ್ದು ಸರ್ಕಾರ ಅಲ್ಲ KMF: ಸಿಎಂ ಸಿದ್ದರಾಮಯ್ಯ

    ಅವರು ಮೊದಲಿಗೆ ಆಡುವಾಗ ಮೊದಲು ಹಾಕಿಕೊಂಡಿದ್ದ ಯೋಜನೆಯನ್ನು ಬದಕಲಾಯಿಸಿದರು. ಹೀಗಾಗಿ ನಾವು ಆಟದಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳಬೇಕಾಯಿತು. ನನ್ನ ಪ್ರಕಾರ 200 ರನ್​ಗಳು ಉತ್ತಮ್ಮ ಮೊತ್ತವಾಗಿದ್ದು, ಈ ರೀತಿಯ ಮೈದಾನದಲ್ಲಿ ಆಡುತ್ತಿರುವಾಗ ಏನು ಬೇಕಾದರೂ ಸಾಧ್ಯವಾಗಿಸುವುದಕ್ಕೆ ಪರಿಸ್ಥಿತಿಯನ್ನು ಚೆನ್ನಾಗಿ ಬಳಸಿಕೊಳ್ಳಬೇಕಿದೆ.

    ನಾವು ಯಾವುದಾದರು ತಂಡದ ವಿರುದ್ಧ ಆಡಬೇಕಾದರೆ ಹೆಚ್ಚು ರನ್​ ಗಳಿಸಬೇಕಿದೆ ಮತ್ತು ಬೌಲರ್​ಗಳ ಮೂಲಕ ಅದನ್ನು ಹೇಗೆ ನಿಯಂತ್ರಿಸಬೇಕು ಎಂದು ಯೋಚಿಸುತ್ತೇವೆ. ನಾವು ಅದನ್ನು ಕಾರ್ಯಗತಗೊಳಿಸಿದ್ದೇವೆ ಎಂದು ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮಾ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts