More

    ಮೂತ್ರದಿಂದ ಆಗಾಗ ನೊರೆ ಬರ್ತಿದ್ಯಾ? ಇದಕ್ಕೆ ಕಾರಣವೇನು ಮತ್ತು ಯಾವ ಆರೋಗ್ಯ ಸಮಸ್ಯೆ ಸೂಚಿಸುತ್ತದೆ?

    ಕೆಲವರಿಗೆ ಆಗಾಗ ಮೂತ್ರದಲ್ಲಿ ನೊರೆ ಬರುತ್ತದೆ. ಇದನ್ನು ನೋಡಿ ಒತ್ತಡಕ್ಕೆ ಒಳಗಾಗುವುದು ಸಹಜ. ಆದರೆ, ಇಂದತಹ ಸಮಸ್ಯೆಗಳು ಏಕೆ ಸಂಭವಿಸುತ್ತವೆ ಎಂಬುದು ನಿಮಗೇನಾದರೂ ತಿಳಿದಿದೆಯೇ? ಇಲ್ಲ ಎಂದಾದರೆ ನಾವೀಗ ಈ ಸಮಸ್ಯೆಗೆ ಕಾರಣ ಏನೆಂದು ತಿಳಿದುಕೊಳ್ಳೋಣ.

    ಯಕೃತ್ತು, ಮೂತ್ರಪಿಂಡ, ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವವರನ್ನು ಗುರುತಿಸಲು ವೈದ್ಯರು ಮೂತ್ರ ಪರೀಕ್ಷೆಗಳನ್ನು ನಡೆಸುತ್ತಾರೆ. ಈ ರೀತಿಯ ಪರೀಕ್ಷೆಯಿಂದಾಗಿ ದೇಹದಲ್ಲಿ ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೂ ಪತ್ತೆಹಚ್ಚಬಹುದು. ಆದಾಗ್ಯೂ, ಅನೇಕ ಜನರು ಮೂತ್ರದ ಬಣ್ಣ ಮತ್ತು ವಾಸನೆಯಲ್ಲಿ ಬದಲಾವಣೆಗಳನ್ನು ಅನುಭವಿಸುತ್ತಾರೆ. ಇದರೊಂದಿಗೆ ಕೆಲವರಿಗೆ ಮೂತ್ರದಲ್ಲಿ ನೊರೆ ಕೂಡ ಇರುತ್ತದೆ. ಇದರಿಂದ ಅನೇಕರು ಉದ್ವೇಗಕ್ಕೆ ಒಳಗಾಗುತ್ತಾರೆ.

    ಇದನ್ನೂ ಓದಿ: ಚಂದಮಾಮನ ಮೈಮೇಲಿದೆ ಸ್ಫೋಟಕ ವಸ್ತು! ಚಂದ್ರನ ಮೇಲೆ ‘ಪ್ರಜ್ಞಾನ್‍’ಗೆ ಬೇರೆ ಏನೆಲ್ಲಾ ಸಿಕ್ತು?

    ನೊರೆ ಮೂತ್ರವನ್ನು ಪ್ರೋಟೀನುರಿಯಾ ಎಂದೂ ಕರೆಯಲಾಗುತ್ತದೆ. ಮೂತ್ರವು ನೊರೆಯಿಂದ ಮತ್ತು ನೊರೆಯಾಗಿ ಕಾಣಿಸಿಕೊಳ್ಳುವ ಸ್ಥಿತಿಯಾಗಿದೆ. ಸಾಮಾನ್ಯವಾಗಿ ಮೂತ್ರವು ಸಣ್ಣ ಪ್ರಮಾಣದಲ್ಲಿ ಪ್ರೋಟೀನ್ ಅನ್ನು ಹೊಂದಿರುತ್ತದೆ. ಆದರೆ, ಪ್ರೋಟೀನ್​​ ಮಟ್ಟಗಳು ಅಧಿಕವಾದಾಗ ಇದು ನೊರೆ ಮೂತ್ರಕ್ಕೆ ಕಾರಣವಾಗಬಹುದು. ಇದು ಗಮನಹರಿಸಬೇಕಾದ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು.

    ನೊರೆ ಮೂತ್ರಕ್ಕೆ ಕಾರಣವೇನು?

    ನೊರೆ ಮೂತ್ರಕ್ಕೆ ಮುಖ್ಯ ಕಾರಣವೆಂದರೆ ಹೆಚ್ಚಿನ ಒತ್ತಡದಿಂದ ಮೂತ್ರವನ್ನು ಹೊರಹಾಕುವುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆಗಾಗ ಈ ಸಮಸ್ಯೆಯಿಂದ ಬಳಲುತ್ತಿರುವವರು ಹೆಚ್ಚು ಒತ್ತಡಕ್ಕೆ ಒಳಗಾಗಬಾರದು ಎಂದು ತಜ್ಞರು ಸಲಹೆ ನೀಡುತ್ತಾರೆ. ಇದಲ್ಲದೆ, ಈ ಕೆಳಗಿನ ಕಾರಣಗಳಿಂದಲೂ ಮೂತ್ರದಲ್ಲಿ ನೊರೆ ಬರುವ ಸಾಧ್ಯತೆಗಳಿವೆ.

    ನಿರ್ಜಲೀಕರಣ: ದೇಹದಲ್ಲಿ ನೀರಿನ ಕೊರತೆಯಿಂದ ಇದೇ ರೀತಿಯ ಸಮಸ್ಯೆಗಳು ಬರುವ ಸಾಧ್ಯತೆಗಳಿವೆ. ಇಂತಹ ಸಮಸ್ಯೆಯಿಂದಾಗಿ, ಮೊದಲು ಮೂತ್ರವು ಗಾಢ ಹಳದಿ ಬಣ್ಣದಲ್ಲಿ ಕಾಣುತ್ತದೆ. ಅಲ್ಲದೆ, ಮೂತ್ರದಲ್ಲಿ ನೊರೆಯಾಗುವ ಸಾಧ್ಯತೆಗಳಿವೆ. ಅತಿಯಾದ ಬಾಯಾರಿಕೆಯಿಂದ ಕೆಲವರಲ್ಲಿ ಮೂತ್ರದಲ್ಲಿ ಪ್ರೋಟೀನ್ ಕರಗಿ ನೊರೆ ಬರುವ ಸಾಧ್ಯತೆಯೂ ಇದೆ ಎನ್ನುತ್ತಾರೆ ಆರೋಗ್ಯ ತಜ್ಞರು.

    ಕಿಡ್ನಿ ಸಮಸ್ಯೆ: ಕಿಡ್ನಿ ಸಮಸ್ಯೆಯಿಂದಾಗಿ ಕೆಲವರಲ್ಲಿ ಪದೇಪದೆ ನೊರೆ ಮೂತ್ರ ಬರುವ ಸಾಧ್ಯತೆಗಳಿವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಪ್ರೋಟೀನುರಿಯಾ ಎಂದು ಕರೆಯಲ್ಪಡುವ ನೊರೆ ಮೂತ್ರವೂ ಕೆಲವರಲ್ಲಿ ಮೂತ್ರಪಿಂಡ ಕಾಯಿಲೆಯ ಸಂಕೇತವಾಗಿರಬಹುದು.

    ಇದನ್ನೂ ಓದಿ: ಕಾವೇರಿ ನಿರ್ವಹಣಾ ಮಂಡಳಿ ಆದೇಶಕ್ಕೆ ತೀವ್ರ ವಿರೋಧ: ತಮಿಳುನಾಡಿಗೆ ನೀರು ಹರಿಸದಂತೆ ಆಗ್ರಹ; ಕೆ.ಆರ್.ಸಾಗರ, ಶ್ರೀರಂಗಪಟ್ಟಣ, ಮೈಸೂರಿನಲ್ಲಿ ಪ್ರತಿಭಟನೆ

    ರೆಟ್ರೋಗ್ರೇಡ್ ಸ್ಖಲನ: ರೆಟ್ರೋಗ್ರೇಡ್ ಸ್ಖಲನವು ಪುರುಷರಲ್ಲಿ ಒಂದು ಕಾಯಿಲೆಯಾಗಿದೆ. ಈ ಕಾಯಿಲೆಯಿಂದಾಗಿ ವೀರ್ಯವು ಶಿಶ್ನದಿಂದ ಹೊರಬರುವುದಿಲ್ಲ. ಬದಲಾಗಿದೆ ಮತ್ತೆ ಮೂತ್ರಕೋಶಕ್ಕೆ ವಾಪಸ್​ ಹೋಗುತ್ತದೆ. ಇದರಿಂದಾಗಿ ಮೂತ್ರದಿಂದ ನೊರೆ ಬರುವ ಸಾಧ್ಯತೆಗಳಿವೆ ಎನ್ನುತ್ತಾರೆ ವೈದ್ಯಕೀಯ ತಜ್ಞರು.

    ಅತಿಯಾದ ದೈಹಿಕ ಚಟುವಟಿಕೆ: ತೀವ್ರವಾದ ದೈಹಿಕ ಚಟುವಟಿಕೆ ಅಥವಾ ಭಾರೀ ವ್ಯಾಯಾಮವು ಮೂತ್ರಪಿಂಡಗಳ ಮೇಲಿನ ಒತ್ತಡದಿಂದಾಗಿ ತಾತ್ಕಾಲಿಕ ಪ್ರೋಟೀನುರಿಯಾವನ್ನು ಉಂಟುಮಾಡಬಹುದು. ಶ್ರಮದಾಯಕ ವ್ಯಾಯಾಮವು ಪ್ರೋಟೀನ್‌ಗಳನ್ನು ಮೂತ್ರಕ್ಕೆ ಬಿಡುಗಡೆ ಮಾಡಲು ಕಾರಣವಾಗಬಹುದು, ಇದು ನೊರೆ ಕಾಣಿಸಿಕೊಳ್ಳಲು ಕಾರಣವಾಗುತ್ತದೆ.

    ಮೂತ್ರನಾಳದ ಸೋಂಕುಗಳು: ಮೂತ್ರನಾಳ ಅಥವಾ ಮೂತ್ರಪಿಂಡಗಳಂತಹ ಮೂತ್ರನಾಳದಲ್ಲಿನ ಸೋಂಕುಗಳು ನೊರೆ ಮೂತ್ರವನ್ನು ಉಂಟುಮಾಡಬಹುದು. ಈ ಸೋಂಕುಗಳು ಮೂತ್ರದ ವ್ಯವಸ್ಥೆಯನ್ನು ಕೆರಳಿಸಬಹುದು ಮತ್ತು ಮೂತ್ರದಲ್ಲಿ ಪ್ರೋಟೀನ್​ಗಳ ಉಪಸ್ಥಿತಿಗೆ ಕಾರಣವಾಗಬಹುದು. (ಏಜೆನ್ಸೀಸ್​)

    ಹಂಪಿಯಲ್ಲಿ ಅಪರೂಪದ ಬಿಳಿ ಬಣ್ಣದ ಹಾವು ಪತ್ತೆ! ಇದರ ವಿಶೇಷತೆ ಬಗ್ಗೆ ಉರಗ ರಕ್ಷಕ ಹೇಳಿದ್ದಿಷ್ಟು…

    ನಟ ಬಾಲಯ್ಯ ಅಭಿಮಾನಿಗಳಿಗೆ ಇದು ಬೇಸರ ಸುದ್ದಿ!

    ವಿಕ್ರಮ್​ ಲ್ಯಾಂಡರ್​ ವಿನ್ಯಾಸ ಮಾಡಿದ್ದು ನಾನೇ ಎಂದು ಮಾಧ್ಯಮಗಳಿಗೆ ಸಂದರ್ಶನ ಕೊಡ್ತಿದ್ದ ನಕಲಿ ವಿಜ್ಞಾನಿ ಕೊನೆಗೂ ಅರೆಸ್ಟ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts