More

    ಹಿಂದುತ್ವದಲ್ಲಿ ಹಿಂಸೆಗೆ ಜಾಗವಿಲ್ಲ; ರಾಹುಲ್ ಗಾಂಧಿಗೆ ಪ್ರಧಾನಿ ನರೇಂದ್ರ ಮೋದಿ ಚಾಟಿ

    ನವದೆಹಲಿ: ಲೋಕಸಭೆಯಲ್ಲಿ ಸತತ 2ನೇ ದಿನವಾದ ಮಂಗಳವಾರ ಸಹ ಹಿಂದುತ್ವದ ಮಹಾ ಕದನ ನಡೆಯಿತು. ಹಿಂದು ಎಂದು ಕರೆಸಿಕೊಳ್ಳುವವರು ದೇಶದಲ್ಲಿ ದ್ವೇಷ, ಹಿಂಸೆ ಹರಡುತ್ತಿದ್ದಾರೆಂಬ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಕೌಂಟರ್ ಕೊಟ್ಟ ಪ್ರಧಾನಿ ನರೇಂದ್ರ ಮೋದಿ, 2 ಗಂಟೆಗಳ ತಮ್ಮ ನಿರರ್ಗಳ ಭಾಷಣದಲ್ಲಿ ರಾಹುಲ್ ಗಾಂಧಿ ಸಹಿತ ವಿಪಕ್ಷಗಳ ನಾಯಕರನ್ನು ಹಿಗ್ಗಾಮುಗ್ಗ್ಗಾ ಝಾಡಿಸಿದರು.

    ವಿಪಕ್ಷ ನಾಯಕರ ಬಾಲಿಶ ವರ್ತನೆಗೂ ಈ ಸಂಸತ್ತು ಸಾಕ್ಷಿಯಾಗಬೇಕಾಯಿತು ಎಂದು ರಾಹುಲ್ ಹೆಸರು ಹೇಳದೆಯೇ ವ್ಯಂಗ್ಯವಾಡಿದ ಪ್ರಧಾನಿ, ಕಾಂಗ್ರೆಸ್ ಒಂದು ಪರಾವಲಂಬಿ ಪಕ್ಷ ಎಂದು ಹೀಗಳೆದರು.

    ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಪಾಲ್ಗೊಳ್ಳಲೆಂದು ಪ್ರಧಾನಿ ಲೋಕಸಭೆ ಪ್ರವೇಶಿಸುತ್ತಿದ್ದಂತೆಯೇ ವಿಪಕ್ಷಗಳ ಸಂಸದರು ಜಸ್ಟೀಸ್ ಫಾರ್ ಮಣಿಪುರ್ ಎಂದು ಘೊಷಣೆ ಕೂಗಿದ್ದಲ್ಲದೆ ಪಿಎಂ ಭಾಷಣದುದ್ದಕ್ಕೂ ಗದ್ದಲ ಎಬ್ಬಿಸಿದರು. ಈ ಬೊಬ್ಬೆ ಮಧ್ಯೆಯೇ ಭಾಷಣ ಮಾಡಿದ ಮೋದಿ, ಸೋಮವಾರ ನಾವು ಸದನದಲ್ಲಿ ಬಾಲಿಶ ವರ್ತನೆಯೊಂದನ್ನು (ಬಾಲಕ ಬುದ್ಧಿ) ನೋಡಿದೆವು. ಸ್ಪೀಕರ್ ಅವರೇ, ನೀವು ಎಲ್ಲವನ್ನೂ ನಗುವಿನೊಂದಿಗೆ ಸಹಿಸಿಕೊಳ್ಳುತ್ತೀರಿ, ಆದರೆ ನಿನ್ನೆಯ ವಿಷಯದ ಬಗ್ಗೆ (ರಾಹುಲ್ ಭಾಷಣ) ಏನಾದರೂ ಮಾಡಬೇಕಾಗಿದೆ. ಇಲ್ಲದಿದ್ದರೆ,ಈ ಸಂಸತ್ತಿಗೆ ಅದು ಒಳ್ಳೆಯದಲ್ಲ. ಈ ವರ್ತನೆಗಳನ್ನು ನಿರ್ಲಕ್ಷಿಸಬಾರದು. ಇಲ್ಲೊಂದು ಆಳವಾದ ಪಿತೂರಿ ಇದೆ ಎಂದು ಎಚ್ಚರಿಕೆ ನೀಡಿದರು.

    ಕತೆ ಹೇಳಿದ ಮೋದಿ: ತಮ್ಮ ಭಾಷಣದ ಮಧ್ಯೆ ಕಥನವೊಂದನ್ನು ಹಂಚಿಕೊಂಡ ಅವರು, ಮಗುವೊಂದು ತನ್ನ ಬೈಸಿಕಲ್​ನಿಂದ ಬಿದ್ದಾಗ, ಹಿರಿಯರು ಅದನ್ನು ಸಾಂತ್ವನಗೊಳಿಸಿ, ನೀನೊಬ್ಬ ಅದ್ಭುತ ಸೈಕ್ಲಿಸ್ಟ್, ಬೀಳುವುದು ದೊಡ್ಡ ವಿಷಯವಲ್ಲ, ಬೀಳುವಾಗ ಸಣ್ಣದೊಂದು ಇರುವೆಯಷ್ಟೇ ಸತ್ತಿದೆ ಎಂದು ಸಮಾಧಾನ ಮಾಡುತ್ತಾರೆ. ಕಾಂಗ್ರೆಸ್ ಮತ್ತು ಅದರ ಸುತ್ತಮುತ್ತಲಿರುವವರು ಈಗ ಇಂಥಾ ಸಾಂತ್ವನಗೊಳಿಸುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ವ್ಯಂಗ್ಯವಾಡಿದರು. ಎರಡನೇ ಕತೆ ಹೇಳಿದ ಪಿಎಂ, ಮಗುವೊಂದು ತಾನು ಪರೀಕ್ಷೆಯಲ್ಲಿ 99 ಅಂಕ ಗಳಿಸಿದ್ದೇನೆ ಎಂದು ಸಿಹಿ ಹಂಚುತ್ತಿತ್ತು. ಆದರೆ, ಆ ಮಗು ತಾನು 543ಕ್ಕೆ 99 ಅಂಕ ಪಡೆದಿದ್ದು ಎಂದು ಬಹಿರಂಗಪಡಿಸಲಿಲ್ಲ ಎಂದು ರಾಹುಲ್ ಗಾಂಧಿ ಉಲ್ಲೇಖಿಸಿ ಲೇವಡಿ ಮಾಡಿದರು.

    See also  ಮುಂಬೈ ಹೋಟೆಲ್​ನಲ್ಲಿ ಆ ಕರಾಳ ರಾತ್ರಿ! ಪ್ರವಾಸದ ಮಧ್ಯೆ ಕಾಶ್ಮೀರದ 500 ವಿದ್ಯಾರ್ಥಿನಿಯರಿಗೆ ಕಾದಿತ್ತು ಆಘಾತ

    ಕಾಂಗ್ರೆಸ್​ನ ರಾಜಕೀಯ ಮಿತ್ರರನ್ನು ಉದ್ದೇಶಿಸಿದ ಮೋದಿ, ಕಾಂಗ್ರೆಸ್ ಇತರರ ವೆಚ್ಚದಲ್ಲಿ ಅಭಿವೃದ್ಧಿ ಹೊಂದುತ್ತದೆ. ಕಾಂಗ್ರೆಸ್ಸಿಗರು ಏನಾದರೂ ವಿಶ್ಲೇಷಣೆ ಮಾಡಿದ್ದಾರಾ? 2024ರಿಂದ, ಕಾಂಗ್ರೆಸ್ ಪರಾವಲಂಬಿ ಪಕ್ಷ. ಹೆಚ್ಚಿನ ಕಾಂಗ್ರೆಸ್ ಸ್ಥಾನಗಳನ್ನು ಅದರ ಮಿತ್ರಪಕ್ಷಗಳೇ ಉಡುಗೊರೆ ನೀಡಿವೆ ಎಂದು ಎಚ್ಚರಿಸಿದರು.

    ನೀಟ್ ಅಕ್ರಮದ ವಿರುದ್ಧ ಕ್ರಮ: ನೀಟ್ ಅಕ್ರಮದಲ್ಲಿ ಭಾಗಿಯಾದವರನ್ನು ಸುಮ್ಮನೆ ಬಿಡುವುದಿಲ್ಲ. ಸರ್ಕಾರ ಈ ವಿಷಯದಲ್ಲಿ ಗಂಭೀರವಾಗಿದೆ ಎಂದು ಮೋದಿ ಹೇಳಿದರು. ಪ್ರಶ್ನೆ ಪತ್ರಿಕೆ ಸೋರಿಕೆ ಸಮಸ್ಯೆ ಪರಿಹರಿಸಲು ಕಾನೂನು ರಚಿಸಲಾಗಿದೆ ಮತ್ತು ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಪ್ರಕರಣದಲ್ಲಿ ಯಾರನ್ನೂ ಬಿಡುವುದಿಲ್ಲ. ದೇಶಾದ್ಯಂತ ಬಂಧನಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.

    ಹಿಂದುಗಳೇ ಯೋಚಿಸಬೇಕಿದೆ: ಹಿಂದುಗಳ ಬಗ್ಗೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಕಟು ಪ್ರತಿಕ್ರಿಯೆ ನೀಡಿದ ಪ್ರಧಾನಿ, ಜನರು ಅವರನ್ನು ಶತಮಾನಗಳುದ್ದಕ್ಕೂ ಕ್ಷಮಿಸುವುದಿಲ್ಲ. ಹಿಂದು ಸಹಿಷ್ಣು. ಹಿಂದುಗಳ ಮೇಲೆ ಸುಳ್ಳು ಆರೋಪ ಹೊರಿಸಲು ಸಂಚು ರೂಪಿಸಲಾಗಿದೆ. ಹಿಂದೂಗಳು ಹಿಂಸೆಯನ್ನು ಬಯಸುತ್ತಾರೆ ಎಂದು ಹೇಳಲಾಗಿದೆ. ಇದು ನಿಮ್ಮ ಸ್ವಭಾವ, ಆಲೋಚನೆ ಮತ್ತು ದ್ವೇಷದ ಪ್ರತೀಕ ಎಂದಿದ್ದಾರೆ.

    ದೇವರ ಫೋಟೋಗಳನ್ನು ಪ್ರದರ್ಶಿಸುವುದರಿಂದ ದೇಶದ ನಾಗರಿಕರಿಗೆ ನೋವಾಗಿದೆ ಎಂದ ಪ್ರಧಾನಿ, ಅವರು ನಮ್ಮ ದೇವರನ್ನು ಅವಮಾನಿಸಿದ್ದಾರೆ. ಯಾವುದರ ದರ್ಶನವಾಗುತ್ತದೋ, ಅದರ ಪ್ರದರ್ಶನವಾಗುವುದಿಲ್ಲ ಎಂದು ಟೀಕಿಸಿದರು. ನಿನ್ನೆಯ ಘಟನಾವಳಿಗಳನ್ನು ನೋಡಿದ ನಂತರ, ಇದು ಕಾಕತಾಳೀಯವೋ ಅಥವಾ ಪ್ರಯೋಗವೋ ಎಂದು ಹಿಂದುಗಳೇ ಯೋಚಿಸಬೇಕಾಗಿದೆ ಎಂದು ಪ್ರಧಾನಿ ಎಚ್ಚರಿಸಿದರು.

    ಓಂ ಬಿರ್ಲಾ ಕಿಡಿ: ಪ್ರಧಾನಿ ಮೋದಿ ಭಾಷಣದ ವೇಲೆ ವಿಪಕ್ಷಗಳ ಘೊಷಣೆ ಕೂಗಿ ಗದ್ದಲ ಎಬ್ಬಿಸಿದ್ದಕ್ಕೆ ಸ್ಪೀಕರ್ ಓಂ ಬಿರ್ಲಾ ವಿಪಕ್ಷ ಸಂಸದರಿಗೆ ಛೀಮಾರಿ ಹಾಕಿದರು. ನಿಮ್ಮ ವರ್ತನೆ ಸರಿಯಲ್ಲ. ನಿಮ್ಮ ಸಂಸದರಿಗೆ ಸದನದ ಬಾವಿಗೆ ಬರಲು ನಿರ್ದೇಶಿಸುತ್ತಿದ್ದೀರಿ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಸಿಟ್ಟಾದ ಬಿರ್ಲಾ, ದಯವಿಟ್ಟು ಸದನದ ಘನತೆ ಕಾಪಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು. ವಿಪಕ್ಷಗಳ ಗದ್ದಲದಿಂದ ಸ್ಪೀಕರ್ ಒಂದಕ್ಕಿಂತ ಹೆಚ್ಚು ಬಾರಿ ಮಧ್ಯಪ್ರವೇಶಿಸಿ, ಮುಂದಿನ ಐದು ವರ್ಷಗಳು ಹೀಗಿರಲು ಸಾಧ್ಯವಿಲ್ಲ ಎಂದರು. ಆದಾಗ್ಯೂ ವಿಪಕ್ಷಗಳು ತಮ್ಮ ಅಡಚಣೆಗಳನ್ನು

    See also  ರೇವತಗಾಂವದಲ್ಲಿ ನಾಗದೇವತೆಗೆ ವಿಶೇಷ ಪೂಜೆ

    ಸುಳ್ಳು ಸುದ್ದಿಗಳನ್ನು ಹಬ್ಬಿಸದಿರಿ: ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಮತ್ತು ಅಗ್ನಿವೀರ್ ಯೋಜನೆ ಗಳಲ್ಲಿ ಸೇನಾನಿಗಳ ಹಿತಾಸಕ್ತಿ ಕಾಯುವ ಕ್ರಮಗಳ ಹೊರತಾಗಿಯೂ ರಾಹುಲ್ ಗಾಂಧಿ ಸುಳ್ಳು ಹಬ್ಬಿಸುತ್ತಿರುವುದನ್ನು ಉಲ್ಲೇಖಿಸಿ, ಈ ಸುಳ್ಳುಗಳ ವಿರುದ್ಧ ಕಠಿಣ ಕ್ರಮವನ್ನು ರಾಷ್ಟ್ರ ಬಯಸುತ್ತಿದೆ. ಲೋಕಸಭೆಯ ವಿಪಕ್ಷ ನಾಯಕ ಅನುಕಂಪಕ್ಕಾಗಿ ಹೈಡ್ರಾಮಾ ಮಾಡುತ್ತಿದ್ದಾರೆ. ಕಾಂಗ್ರೆಸ್ ಸುಳ್ಳನ್ನು ತನ್ನ ರಾಜಕೀಯದ ಅಸ್ತ್ರವನ್ನಾಗಿ ಮಾಡಿಕೊಂಡಿದೆ. ಮೇಲಾಗಿ, ಅವರು ರಕ್ತದ ರುಚಿಯನ್ನೂ ನೋಡಿದ್ದಾರೆ ಎಂದು ಪ್ರಧಾನಿ ಟೀಕಿಸಿದರು.

    ಜಾಮೀನಿನ ಮೇಲಿದ್ದಾರೆ: ರಾಹುಲ್ ಹೆಸರು ಹೇಳದೆಯೇ, ಆ ವ್ಯಕ್ತಿ ಭ್ರಷ್ಟಾಚಾರ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ. ಒಬಿಸಿ ಸಮುದಾಯದ ವ್ಯಕ್ತಿಯೊಬ್ಬರನ್ನು ಕಳ್ಳ ಎಂದು ಕರೆದಿದ್ದಕ್ಕಾಗಿ ಶಿಕ್ಷೆಗೆ ಗುರಿಯಾಗಿದ್ದಾರೆ. ಸಾವರ್ಕರ್​ರನ್ನು ಅವಮಾನಿಸಿದಕ್ಕಾಗಿ ಕೇಸು ದಾಖಲಾಗಿದೆ, ಪ್ರತಿಪಕ್ಷಗಳು ಎಲೆಕ್ಟ್ರಾನಿಕ್ ಮತಯಂತ್ರಗಳ ವಿಶ್ವಾಸಾರ್ಹತೆ, ರಫೇಲ್ ಒಪ್ಪಂದ ಮತ್ತು ಆರ್ಥಿಕತೆಯ ಬಗ್ಗೆ ಸುಳ್ಳು ಹರಡುತ್ತಿವೆ ಎಂದು ಮೋದಿ ಕಿಡಿಕಾರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts