More

    ಬುಲೆಟ್​ ಟ್ರೇನ್​ನಂತೆ ಓಡುತ್ತಿದೆ ಈ ರೈಲ್ವೆ ಷೇರುಗಳ ಬೆಲೆ

    ಮುಂಬೈ: ಟೆಕ್ಸ್‌ಮ್ಯಾಕೊ ರೈಲ್ ಮತ್ತು ಇಂಜಿನಿಯರಿಂಗ್‌ ಲಿಮಿಟೆಡ್​ (Texmaco Rail & Engineering Ltd) ಷೇರುಗಳ ಬೆಲೆ ಗುರುವಾರದ ಇಂಟ್ರಾ ಡೇ ವಹಿವಾಟಿನಲ್ಲಿ ಶೇಕಡಾ 11 ರಷ್ಟು ಜಿಗಿದು ದಾಖಲೆಯ ಗರಿಷ್ಠ ಮಟ್ಟವಾದ 245.65 ರೂ. ಮುಟ್ಟಿತು. ನಂತರ ಅಂತಿಮವಾಗಿ, ಶೇ. 7.55ರಷ್ಟು ಏರಿಕೆಯಾಗಿ ರೂ. 237.80 ತಲುಪಿತು.

    ಕಳೆದ ಒಂದು ವರ್ಷದಲ್ಲಿ ಈ ಷೇರುಗಳ ಬೆಲೆ 200 ಪ್ರತಿಶತಕ್ಕಿಂತ ಏರಿಕೆಯಾಗಿದೆ. ಈ ಮೂಲಕ ಹೂಡಿಕೆದಾರರ ಹಣವನ್ನು ಮೂರು ಪಟ್ಟು ಮಾಡಿದೆ. 2024ರ ಆರಂಭದಿಂದ ಇಲ್ಲಿಯವರೆಗೆ ಈ ಸ್ಟಾಕ್ 35 ಪ್ರತಿಶತವನ್ನು ಏರಿಕೆಯಾಗಿದೆ. ಒಂದು ತಿಂಗಳಲ್ಲಿ 20 ಪ್ರತಿಶತದಷ್ಟು ಮತ್ತು ಕಳೆದ 5 ದಿನಗಳಲ್ಲಿ 12.25 ಪ್ರತಿಶತದಷ್ಟು ಹೆಚ್ಚಳವನ್ನು ಕಂಡಿದೆ.

    ಈ ಕಂಪನಿಯ ಮುಖ್ಯ ಕಚೇರಿ ಕೋಲ್ಕತ್ತಾದಲ್ಲಿದೆ. ಇದು ಖಾಸಗಿ ಎಂಜಿನಿಯರಿಂಗ್ ಮತ್ತು ಮೂಲಸೌಕರ್ಯ ಕಂಪನಿಯಾಗಿದೆ. ಇದು ರೈಲ್ವೇ ವ್ಯಾಗನ್‌ಗಳು, ಕೋಚ್‌ಗಳು ಮತ್ತು ಲೋಕೋಮೋಟಿವ್‌ಗಳನ್ನು ತಯಾರಿಸುವುದರ ಜೊತೆಗೆ ಸಂಬಂಧಿತ ಸೇವೆಗಳನ್ನು ಒದಗಿಸುವ ವ್ಯವಹಾರದಲ್ಲಿದೆ.

    ಮಾರ್ಚ್ 2024ಕ್ಕೆ ಕೊನೆಗೊಳ್ಳುವ ತ್ರೈಮಾಸಿಕದಲ್ಲಿ ಈ ಕಂಪನಿಯ ಏಕೀಕೃತ ನಿವ್ವಳ ಲಾಭದಲ್ಲಿ ಗಣನೀಯ ಬೆಳವಣಿಗೆಯನ್ನು ವರದಿ ಮಾಡಿದೆ. ಕಂಪನಿಯ ನಿವ್ವಳ ಲಾಭವು ಶೇ. 247 ರಷ್ಟು ಏರಿಕೆಯಾಗಿದ್ದು, ಕಳೆದ ವರ್ಷ 18.33 ಕೋಟಿ ರೂ.ಗೆ ಹೋಲಿಸಿದರೆ 45.32 ಕೋಟಿ ರೂ.ಗೆ ಗಣನೀಯ ಏರಿಕೆಯಾಗಿದೆ. ಈ ಕಂಪನಿ ತನ್ನ ಕಾರ್ಯಾಚರಣೆಗಳಿಂದ ಆದಾಯದಲ್ಲಿ ಪ್ರಭಾವಶಾಲಿ ಶೇ. 37.03ರಷ್ಟು ಬೆಳವಣಿಗೆಯನ್ನು ಕಂಡಿದೆ.

    ವಾರ್ಷಿಕ ಆಧಾರದ ಮೇಲೆ ಕಂಪನಿಯ ಕಾರ್ಯಕ್ಷಮತೆ ಕೂಡ ಅತ್ಯುತ್ತಮವಾಗಿತ್ತು. ಏಕೆಂದರೆ, ಹಣಕಾಸು ವರ್ಷ 2023-24ರಲ್ಲಿ ಏಕೀಕೃತ ನಿವ್ವಳ ಲಾಭವು 113.21 ಕೋಟಿ ರೂ.ಗೆ ಏರಿದೆ, ಇದು ಹಣಕಾಸು ವರ್ಷ 2022-23 ರಲ್ಲಿ ಕೇವಲ ರೂ. 26.03 ಕೋಟಿ ಆಗಿತ್ತು. ಇದಲ್ಲದೆ, ಹಣಕಾಸು ವರ್ಷ 2023-24ರಲ್ಲಿ ಕಾರ್ಯಾಚರಣೆಗಳಿಂದ ಆದಾಯದಲ್ಲಿ ಗಣನೀಯ ಬೆಳವಣಿಗೆ ಕಂಡುಬಂದಿದೆ.

    ಒಂದೇ ವಾರದಲ್ಲಿ 15% ಏರಿಕೆಯಾಗಿದೆ ಸರ್ಕಾರಿ ಕಂಪನಿ ಷೇರು: ಬಜೆಟ್​ ಬಳಿಕ ಏನಾಗಲಿದೆ ಎನ್ನುತ್ತಾರೆ ತಜ್ಞರು?

    ಗರಿಷ್ಠ ಬೆಲೆ ಮುಟ್ಟಿದ ರತ್ನವೀರ್​ ಕಂಪನಿ ಷೇರು: ರೂ. 200 ಆಗಲಿದೆ ಎನ್ನುತ್ತದೆ ಬ್ರೋಕರೇಜ್ ಸಂಸ್ಥೆ

    ಒಂದು ಷೇರಿಗೆ ಮೂರು ಷೇರು ಉಚಿತವಾಗಿ ನೀಡುತ್ತಿದೆ ಫಾರ್ಮಾಸ್ಯೂಟಿಕಲ್​ ಕಂಪನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts